spot_img
Wednesday, April 1, 2026
spot_img

ರಾಜೀವ್‌, ನಜೀರ್‌ ಸಾಬ್‌ ರಂತೆ ಗ್ರಾಮಸ್ವರಾಜ್‌ ಪರಿಕಲ್ಪನೆಯ ಕನಸು ನನಸು ಮಾಡಲಿ ಸರ್ಕಾರ : ರಮೇಶ್‌ ಶೆಟ್ಟಿ ವಕ್ವಾಡಿ

ಜನಪ್ರತಿನಿಧಿ (ಕುಂದಾಪುರ) : ಸುಮಾರು ಒಂದು ವಾರದಿಂದ ಗ್ರಾಮ ಪಂಚಾಯತ್ ನೌಕರರ ಮುಷ್ಕರ ನಡೆಯುತ್ತಿದೆ. ಗ್ರಾಮಸರಕಾರದ ಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿದೆ. ಜನಸಾಮಾನ್ಯರು ತುರ್ತು ಕೆಲಸಗಳು ಆಗದೇ ಪರದಾಡುವಂತಾಗಿದೆ. ಜನರಿಗೆ ನೇರ ಸಿಗುವ ಗ್ರಾಮಪಂಚಾಯತ್  ಕೆಲಸ ಕಾರ್ಯಗಳು ಸ್ಥಗಿತಗೊಂಡಿರುವುದು ಜನರನ್ನು ಚಿಂತೆಗೀಡು ಮಾಡಿದೆ. ಸರಕಾರ ಕೂಡಲೇ ಇದರ ಬಗ್ಗೆ ಕ್ರಮವಹಿಸಬೇಕು ಎಂದು ಕುಂದಾಪುರ ಪಂಚಾಯತ್ ರಾಜ್ ಒಕ್ಕೂಟ (ಕುಂದಾಪುರ ವಲಯ)ದ ಸಂಚಾಲಕ ರಮೇಶ್ ಶೆಟ್ಟಿ ವಕ್ವಾಡಿ ಹೇಳಿದ್ದಾರೆ.

ಪ್ರತಿಭಟನೆ ನಿರತರನ್ನು ಮನವೊಲಿಸಿ ಆಡಳಿತವನ್ನು ಸುಸ್ಥಿತಿಗೆ ತರಬೇಕು. ಹಾಗೆಯೇ ಪಂಚಾಯತ್ ರಾಜ್ ಅಧಿನಿಯಮದಂತೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು. ಕೇರಳ ಮಾದರಿಯಲ್ಲಿ ಸಿಬ್ಬಂದಿ ನೇಮಕಾತಿ ಹಾಗೂ ಗ್ರಾಮಸರಕಾರ ರೂಪುಗೊಳ್ಳುವಂತೆ, ರಾಜೀವ್ ಗಾಂಧಿ, ಅಬ್ದುಲ್ ನಜೀರ್ ಸಾಬ್ ರಂತೆ ಗ್ರಾಮಸ್ವರಾಜ್ ಪರಿಕಲ್ಪನೆಯ ಕನಸನ್ನು ನನಸು ಮಾಡುವತ್ತ ಸರಕಾರ ಗಮನ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!