Sunday, November 3, 2024

ಅ.5 ಮತ್ತು 6ರಂದು ಕುಂದಾಪುರದಲ್ಲಿ ‘ನಮ್ಮ ಕುಂದಾಪುರ ಮೇಳ’

ಕುಂದಾಪುರ: ಕುಂದಾಪುರದ ಬಂಟರ ಯಾನೆ ನಾಡವರ ಸಂಕೀರ್ಣದ ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಹಾಲ್ ನಲ್ಲಿ ಅಕ್ಟೋಬರ್ 5 ಮತ್ತು 6 ರಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8ರ ತನಕ ನಮ್ಮ ಕುಂದಾಪುರ ಮೇಳ-2024 ನಡೆಯಲಿದೆ ಎಂದು ‘ನಮ್ಮ ಕುಂದಾಪುರ ಮೇಳ’ದ ಆಯೋಜಕರಾದ ಸುಧಾ ಪ್ರಹ್ಲಾದ್ ಹೇಳಿದರು.
ಅವರು ಕುಂದಾಪುರ ಪ್ರೆಸ್ ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ನಮ್ಮ ಕುಂದಾಪುರ ಮೇಳದಲ್ಲಿ ಸಿಲ್ಕ್ ಸೀರೆ, ಕೈಮಗ್ಗದ ಸೀರೆ, ಕುರ್ತ, ಚೂಡಿದಾರ್ ಸೆಟ್, ಕಾಟನ್ ಬೆಡ್‌ಶೀಟ್, ಸಾಂಪ್ರದಾಯಿಕ, ಆಧುನಿಕ, ದೈನಂದಿನ ಬಳಕೆಯ ದೀಪಂ 1ಗ್ರಾಂ ಗೋಲ್ಡ್ ಆಭರಣಗಳು ಲಭ್ಯವಿದೆ. ಗ್ರಾಹಕರಿಗೆ ಲಕ್ಕಿ ಡ್ರಾ ಮುಖಾಂತರ ಬಹುಮಾನ ಗೆಲ್ಲುವ ಸುವರ್ಣಾಕಾಶವೂ ಇದೆ. ವಿಫುಲ ಸಂಗ್ರಹ, ಆಯ್ಕೆಗೆ ಅವಕಾಶವಿದೆ ಎಂದರು.
ಈ ಮೇಳದಲ್ಲಿ ಹಳೆಯ ರೇಷ್ಮೆ ಜರಿ ಸೀರೆಗಳನ್ನು ಖರೀದಿಸುವ ವ್ಯವಸ್ಥೆ ಇದೆ ಎಂದು ಹೇಳಿದ ಅವರು, ಗ್ರಾಹಕರಿಗೆ ವೈವೀಧ್ಯಮಯ ಆಯ್ಕೆಗೆ ಅವಶಾಶವಿದೆ. ಕೈಗೆಟುಕುವ ದರದಲ್ಲಿ ವಸ್ತುಗಳು ಲಭ್ಯವಿರುತ್ತದೆ. ಕುಂದಾಪುರ ಹಾಗೂ ಆಸುಪಾಸಿನ ಜನತೆ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಈಗಾಗಲೇ ಕಾರ್ಕಳದಲ್ಲಿ ಇದೇ ರೀತಿ ಮೇಳ ಆಯೋಜಿಸಿದ್ದು ಗ್ರಾಹಕರಿಂದ ಉತ್ತಮ ಪ್ರೋತ್ಸಾಹ ದೊರಕಿತ್ತು. ಮಂಗಳೂರಿನಲ್ಲಿ ನಮ್ಮ ಮಳಿಗೆ ಕೂಡಾ ಇದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಆಯೋಜಕರಾದ ಮೇಘನಾ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!