Saturday, October 12, 2024

ಕೆಪಿಎಸ್‌ಸಿ ಮರುಪರೀಕ್ಷೆ : ಡಿಸೆಂಬರ್‌ 29ಕ್ಕೆ ದಿನಾಂಕ ನಿಗದಿಗೊಳಿಸಿದ ಆಯೋಗ

ಜನಪ್ರತಿನಿಧಿ (ಬೆಂಗಳೂರು) : ಗೆಜೆಟೆಡ್ ಪ್ರೊಬೇಷನರ್ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಿದ್ದುಪಡಿ ಅಧಿಸೂಚನೆಯೊಂದನ್ನು ಕರ್ನಾಟಕ ಲೋಕಸೇವಾ ಆಯೋಗ ಇಂದು(ಮಂಗಳವಾರ) ಹೊರಡಿಸಿದೆ.

ಗೆಜೆಟೆಡ್ ಪ್ರೊಬೇಷನರ್ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಕಳೆದ 27 ಆಗಸ್ಟ್-2024ರಂದು ನಡೆದಿದ್ದ ಪೂರ್ವಭಾವಿ ಪರೀಕ್ಷಾ ಪತ್ರಿಕೆಯ ಭಾಷಾಂತರದಲ್ಲಿ ಅನೇಕ ದೋಷಗಳು ಕಂಡುಬಂದಿತ್ತು. ಪರೀಕ್ಷಾ ಬರೆದ ಅಭ್ಯರ್ಥಿಗಳು ಆಯೋಗದ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಮರುಪರೀಕ್ಷೆ ನಡೆಸುವಂತೆಯೂ ಪಟ್ಟು ಬಿದ್ದಿದ್ದರು. ಸಮಸ್ಯೆಯನ್ನು ಗಮನಿಸಿ, ಅಭ್ಯರ್ಥಿಗಳ ಒತ್ತಾಯವನ್ನು ಪರಿಗಣಿಸಿದ ಸಿಎಂ ಸಿದ್ದರಾಮಯ್ಯ ಅವರು ಮರುಪರೀಕ್ಷೆ ನಡೆಸುವಂತೆ ಆಯೋಗಕ್ಕೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸದರಿ ಹುದ್ದೆಗಳಿಗೆ ಪೂರ್ವಭಾವಿ ಮರುಪರೀಕ್ಷೆಯನ್ನು ದಿನಾಂಕ 29-12-2024ರಂದು ನಡೆಸಲು ನಿಗದಿಗೊಳಿಸಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು, ನಿಗದಿಗೊಳಿಸಿದ ದಿನಾಂಕದಂದು ಯಾವುದೇ ಪರೀಕ್ಷೆಯು ನಿಗದಿಯಾಗದಿರುವ ಕುರಿತು ಪರಿಶೀಲಿಸಲಾಗಿರುತ್ತದೆ. ಆದರೆ ಸದರಿ ತಿದ್ದುಪಡಿ ಅಧಿಸೂಚನೆ ಜಾರಿಯಾದ ನಂತರ ಇನ್ನಿತರೆ ಯಾವುದೇ ಪರೀಕ್ಷೆ ನಿಗದಿಯಾದಲ್ಲಿ ಅದಕ್ಕೆ ಆಯೋಗವು ಹೊಣೆಯಾಗುವುದಿಲ್ಲ. ಹಾಗೂ ಯಾವುದೇ ಕಾರಣಕ್ಕೂ ಪರೀಕ್ಷೆಯನ್ನು ಮುಂದೂಡಲಾಗುವುದಿಲ್ಲ ಎಂದು ಆಯೋಗದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!