spot_img
Wednesday, April 1, 2026
spot_img

ಜಡ್ಕಲ್ ಗ್ರಾಮ ಪಂಚಾಯತ್‌ಗೆ ದೌಡಾಯಿಸಿದ ಎ.ಸಿ, ತಹಶೀಲ್ದಾರ್ : ಚುನಾವಣೆ ಬಹಿಷ್ಕಾರದಿಂದ ಹಿಂದೆ ಸರಿಯುವುದಿಲ್ಲ ಎಂದ ಗ್ರಾಮ ಪಂಚಾಯಿತಿ ಸದಸ್ಯರು

 

ಕುಂದಾಪುರ, ಅ.1: (ಜನಪ್ರತಿನಿಧಿ ವರದಿ) ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೈಂದೂರು ತಾಲೂಕು ಜಡ್ಕಲ್ ಗ್ರಾಮ ಪಂಚಾಯತ್ ನ ಎಲ್ಲಾ 18 ಸದಸ್ಯರು ಗ್ರಾಮಸ್ಥರ ಹಿತದೃಷ್ಟಿಯಿಂದ ಇದೇ ಅಕ್ಟೋಬರ್ 21ರಂದು ನಡೆಯಲಿರುವ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಮತ ಚಲಾಯಿಸದೇ ಚುನಾವಣಾ ಬಹಿಷ್ಕಾರ ಮಾಡುವ ನಿರ್ಣಯ ಮಾಡಿದ್ದು ಜಿಲ್ಲಾಡಳಿತದ ಗಮನಕ್ಕೆ ಬರುತ್ತಿದ್ದಂತೆ ಮಂಗಳವಾರ ಸಂಜೆ  ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತರಾದ ಮಹೇಶಚಂದ್ರ, ಬೈಂದೂರು ತಹಶೀಲ್ದಾರ್    ಜಡ್ಕಲ್ ಗ್ರಾಮ ಪಂಚಾಯತ್‌ಗೆ ದೌಡಾಯಿಸಿ ಗ್ರಾಮ ಪಂಚಾಯತ್ ಪ್ರತಿನಿಧಿಗಳ ಮನವೊಲಿಸುವ ಪ್ರಯತ್ನ ಮಾಡಿದರು.

ಆದರೆ ಈಗಾಗಲೇ ಗ್ರಾಮಸ್ಥರ ಹಿತಾಸಕ್ತಿಯಿಂದ ಚುನಾವಣಾ ಬಹಿಷ್ಕಾರದ ನಿರ್ಣಯ ಮಾಡಿದ್ದು ಯಾವುದೇ ಕಾರಣಕ್ಕೂ ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು  ಗ್ರಾಮ ಪಂಚಾಯತ್ ಪ್ರತಿನಿಧಿಗಳು ಅಧಿಕಾರಿಗಳ ಮುಂದೆ ತಮ್ಮ ದೃಢ ನಿರ್ಧಾರ ಪ್ರಕಟಿಸಿದರು.

ಪರಿಸರ ಸೂಕ್ಷ್ಮ ಪ್ರದೇಶ, ಬಫರ್ ಝೋನ್ ಶೂನ್ಯಕ್ಕೆ ಇಳಿಸುವುದು, ಈಗಾಗಲೇ ಪರಿಸರ ಸೂಕ್ಷ್ಮ ಪ್ರದೇಶದ ಬಗ್ಗೆ ಹೊರಡಿಸಿರುವ ಸುತ್ತೋಲೆಯನ್ನು ಮೂಕಾಂಬಿಕಾ ಅಭಯಾರಣ್ಯದ ಸೂಕ್ಷ್ಮ ಪ್ರದೇಶ ಎಂಬ ನೆಪದಿಂದ ಸಕ್ಷಮ ಪ್ರಾಧಿಕಾರದಿಂದ ವಾಣಿಜ್ಯ ಭೂ-ಪರಿವರ್ತನೆಗೆ ಪೂರ್ವಾನುಮತಿಯನ್ನು (ಯೋಜನಾ ಪ್ರಾಧಿಕಾರ ಉಡುಪಿ) ಪಡೆಯುವ ಸೂಚನೆ ರದ್ದುಗೊಳಿಸುವ ತನಕ ಚುನಾವಣಾ ಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!