Saturday, October 12, 2024

ಯಶಸ್ವೀ ಕಲಾವೃಂದ ಕೊಮೆ: ನವರಾತ್ರಿಯಲ್ಲಿ ಮನೆ ಮನೆಗಳಲ್ಲಿ ಹೂವಿನಕೋಲು ಅಭಿಯಾನ

ತೆಕ್ಕಟ್ಟೆ: ನವರಾತ್ರಿಯ ಸಂದರ್ಭಗಳಲ್ಲಿ ಬಹಳ ಹಿಂದಿನ ಕಾಲದಿಂದಲೂ ಯಕ್ಷಗಾನ ಪ್ರಕಾರವಾದ ಹೂವಿನಕೋಲು ಕಾರ್ಯಕ್ರಮವನ್ನು ಅಭಿಯಾನ ರೂಪದಲ್ಲಿ ಕಳೆದ ಹಲವು ವರ್ಷಗಳಿಂದ ಮನೆ ಮನೆಗೆ ತೆರಳಿ ಕಲೆಯನ್ನು ಉಳಿಯುವಂತೆ ಮಾಡಿದ ಹೆಗ್ಗಳಿಕೆ ಸಂಸ್ಥೆಯದ್ದು. ಈ ವರ್ಷ ಸಂಸ್ಥೆಯ ಬೆಳ್ಳಿ ಹಬ್ಬದ ಸಂಭ್ರಮ. ನವರಾತ್ರಿಯ ಸಂದರ್ಭ ಅಕ್ಟೋಬರ್ 3ರಿಂದ 12ರ ತನಕ ಕುಂದಾಪುರ, ಉಡುಪಿ, ಮಂಗಳೂರು ಬೈಂದೂರು, ಮಾರಣಕಟ್ಟೆ ಹೀಗೆ ಹಲವು ಕಡೆಗಳಲ್ಲಿ ಮಕ್ಕಳನ್ನು ಹೊಂದಿದ ನಾಲ್ಕು ತಂಡವಾಗಿ ’ಮನೆ ಮನೆಗಳಲ್ಲಿ ಹೂವಿನಕೋಲು ಅಭಿಯಾನ’ ಕಾರ್ಯಕ್ರಮಕ್ಕಾಗಿ ಯಶಸ್ವೀ ಕಲಾವೃಂದ ಕೊಮೆ-ತೆಕ್ಕಟ್ಟೆ ಹೊರಡಲಿದೆ.

ಮನೆಯ ಮನಗಳಲ್ಲಿ ಸಂತಸ, ಧನಕನಕ ಹೆಚ್ಚಲೆಂದು ಹಾರೈಸುವ ಚೌಪದಿಯ ಸಾಲನ್ನು ಗೊಣಗುತ್ತ ಸಾರುವ ಈ ಕಾರ್ಯಕ್ರಮವನ್ನು ಆಸಕ್ತರ ಮನೆಯಲ್ಲಿ ನಡೆಸಲಾಗುವುದು. ಕಾರ್ಯಕ್ರಮ ನೆರವೇರಿಸುವ ಅಪೇಕ್ಷೆ ಇದ್ದರೆ 9945947771 ಸಂಪರ್ಕಿಸಬಹುದು ಎಂದು ಯಶಸ್ವೀ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ ಪ್ರಕಟಣೆಯಲ್ಲಿ ತಿಳಿಸಿದರು.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!