Tuesday, October 22, 2024

ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಶೇ 17 ಡಿವಿಡೆಂಡ್ ಘೋಷಣೆ

ಕುಂದಾಪುರ: ಶತಮಾನ ಕಂಡ, ತಾಲೂಕಿನ ಪ್ರತಿಷ್ಠಿತ ಸಹಕಾರ ಸಂಘಗಳಲ್ಲೊಂದಾದ ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರ, ಸರಕಾರಿ ಪದವಿ ಪೂರ್ವ ಕಾಲೇಜು, ಕುಂದಾಪುರ ಇಲ್ಲಿ ಜರುಗಿತು.

ಈ ಸಭೆಯ ಅಧ್ಯಕ್ಬತೆಯನ್ನು ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ ಇವರು ವಹಿಸಿಕೊಂಡು ಸಭೆಯನ್ನುದ್ದೇಶಿಸಿ ಮಾತನಾಡಿ ಸಂಸ್ಥೆಯು ಇತ್ತೀಚೆಗಿನ ವರ್ಷಗಳಲ್ಲಿ ಬಾರಿ ಯಶಸ್ಸಿನತ್ತ ಸಾಗುತ್ತಿರುವುದಕ್ಕೆ ಸದಸ್ಯರೆಲ್ಲರ ಸಹಕಾರ, ನೌಕರರ ಕಾರ್ಯದಕ್ಷತೆ ಹಾಗೂ ಆಡಳಿತ ಮಂಡಳಿಯ ಪಾರದರ್ಶಕ ಆಡಳಿತದಿಂದ ಎಂದು ಸಂತಸ ವ್ಯಕ್ತಪಡಿಸಿದರು, ಸದಸ್ಯರಿಗೆ ಸರಕಾರದಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನು ತಿಳಿಸಿ, ಸಂಘವು ಸಂಪೂರ್ಣ ಹವಾನಿಯಂತ್ರಿತ ನವೀಕೃತ ಆಡಳಿತ ಪ್ರಧಾನ ಕಛೇರಿಯನ್ನಲ್ಲದೇ ಈಗ ಸಂಘದ ವಡೇರಹೋಬಳಿ ಶಾಖೆಯು ಸ್ವಂತ ಕಟ್ಟಡ ಹೊಂದಿ, ನವೀಕೃತ ಹವಾನಿಯಂತ್ರಿತ ಕಛೇರಿಯನ್ನು ಹೊಂದಿ ಇಲ್ಲಿ ಚಿನ್ನಾಭರಣ ಈಡಿನ ಸಾಲದ ಸೌಲಭ್ಯ ಮತ್ತು ಸೇಫ್ ಡೆಪೆÇಸಿಟ್ ಲಾಕರ್‍ನ ಸೌಲಭ್ಯ ಹೊಂದಿರುತ್ತದೆ. ಕೋಡಿಯಲ್ಲಿ ಸ್ವಂತ ಕಟ್ಟಡ ಹೊಂದಲು ಪಕ್ರಿಯೆ ಚಾಲನೆಯಲ್ಲಿದೆ ಎಂದರು.

ಸದಸ್ಯರ ಅನುಕೂಲಕ್ಕಾಗಿ, ಹೊಸದಾಗಿ ಓವರ್ ಡ್ರಾಫ್ಟ್ ಸಾಲ ಸೌಲಭ್ಯ ಕಲ್ಪಿಸಲಾಗಿದ್ದು ಮಾಹಾಸಭೆಗೆ ಹಾಜರಾದ ಎಲ್ಲಾ ಸದಸ್ಯರಿಗೂ ಆಕರ್ಷಕ ಮತ್ತು ಉಪಯೋಗಿ ಗಿಫ್ಟ್ ನೀಡಲಾಗುತ್ತದೆ ಎಂದು ಪ್ರಕಟಿಸಿದರು. ಸಾರ್ವತ್ರಿಕ ಕೊರೊನಾ ನಂತರದ ಸಮಸ್ಯೆ ಇದ್ದರೂ ಕಳೆದ ಸಾಲಿಗಿಂತ ಈ ಬಾರಿ ಲಾಭ ಹೆಚ್ಚಾಗಿದ್ದು ಸಂಸ್ಥೆಯ ಇತಿಹಾಸದಲ್ಲೇ ಅತ್ಯಧಿಕ ರೂ. 1,57,64,074.25 ಆಗಿದ್ದು, ಶೇಕಡಾ 17 ರಷ್ಟು ಡಿವಿಡೆಂಡ್ ಈ ಸಾಲಿಗೆ ನೀಡುತ್ತಿರುವುದಾಗಿ ತಿಳಿಸಿದರು. ಜೊತೆಗೆ ಮರಣ ಹೊಂದಿದ ಸಂಘದ ಸದಸ್ಯರಿಗೆ ಅಂತ್ಯಕ್ರಿಯೆ ಸಲುವಾಗಿ ತುರ್ತು ರೂ. 5,000/- ಮರಣೋತ್ತರ ಧನ ಸಹಾಯ ನೀಡಲು ನಿರ್ಧರಿಸಿರುವುದು ಹಾಗೂ ಅನಾರೋಗ್ಯ ಪೀಡಿತ ಸದಸ್ಯರುಗಳ ಕುಟುಂಬಕ್ಕೆ ಧನಸಹಾಯ, ಸಂಸ್ಥೆಯ ಕಾರ್ಯವ್ಯಾಪ್ತಿಯ ಒಳಗೆ ಬರುವ ಶೈಕ್ಟಣಿಕ ಸಂಸ್ಥೆಗಳಿಗೆ ಸಹಾಯಧನ ಮುಂತಾದ ಅನೇಕ ಸಂಸ್ಥೆಯ ಸಮಾಜಮುಖಿ ಕಾರ್ಯಗಳನ್ನು ಸದಸ್ಯರ ಗಮನಕ್ಕೆ ತಂದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ನರಸಿಂಹ ಹೊಳ್ಳರವರು ಸಭೆಗೆ ಎಲ್ಲರನ್ನು ಸ್ವಾಗತಿಸಿ 2023-24ನೇ ಸಾಲಿನ ವಾರ್ಷಿಕ ವರದಿ ಮಂಡಿಸುತ್ತಾ, 75.92 ಕೋಟಿಗೂ ಮಿಕ್ಕಿದ ಠೇವಣಾತಿ, 57.42 ಕೋಟಿಗೂ ಮಿಕ್ಕಿ ಸದಸ್ಯರ ಹೊರಬಾಕಿ ಸಾಲ, ಶೇ. 96.16 ವಸೂಲಾತಿಯೊಂದಿಗೆ ಸಂಘವು ಆಡಿಟ್ “ಎ” ತರಗತಿಯಲ್ಲಿ ಪ್ರಗತಿಯ ಮುನ್ನಡೆಯಲ್ಲಿದೆ ಎಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ 158 ಸದಸ್ಯರ ಮಕ್ಕಳಿಗೆ ಸುಮಾರು ರೂ. ಎರಡು ಲಕ್ಬಕ್ಕೂ ಹೆಚ್ಚು ವಿದ್ಯಾರ್ಥಿ ವೇತನವನ್ನು ಘೋಷಿಸಿ ಮಹಾಸಭೆಯ ನಂತರದ ದಿನಗಳಲ್ಲಿ ಸಂಘದ ಕಛೇರಿಗಳಲ್ಲಿ ಪಡೆದುಕೊಳ್ಳುವಂತೆ ಸಭೆಗೆ ತಿಳಿಸಲಾಯಿತು. ಸಭೆಯಲ್ಲಿ ಸುಮಾರು 3600 ಕ್ಕೂ ಹೆಚ್ಚು ಸಂಖ್ಯೆಯ ಸದಸ್ಯರ ಹಾಜರಾತಿ ಆಗಿದ್ದು, ಸಂಸ್ಥೆಯ ಇತಿಹಾಸದಲ್ಲಿ ದಾಖಲೆಯಾಗಿರುತ್ತದೆ.

ಸಭೆಯಲ್ಲಿ ಮಾಜಿ ಅಧ್ಯಕ್ಷರುಗಳಾದ ಕೋಡಿ ಪ್ರಭಾಕರ ಶೇರೆಗಾರ, ಕೆ. ದಿನಕರ ಕೊತ್ವಾಲ್ ಮತ್ತು ಅನೇಕ ಹಿರಿಯ ಸದಸ್ಯರು ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಸಂಘದ ನಿರ್ದೇಶಕರುಗಳಾದ ಎಚ್. ಅಣ್ಣಯ್ಯ ಪೂಜಾರಿ, ಸೀತಾರಾಮ, ನಾರಾಯಣ ಖಾರ್ವಿ, ಗಿರೀಶ, ಆಶಾಲತಾ ಎಂ, ಕುಸುಮ, ಗೋಪಾಲ ಪೂಜಾರಿ, ಶೇಖರ ಬಿ, ನಿತ್ಯಾನಂದ, ಭಾಸ್ಕರ ಶ್ರೀಯಾನ್, ಗಣಪ ವಿ ಸತೀಶ ಶೆಟ್ಟಿ ಕೆ.ಹಾಗೂ ವಲಯ ಮೇಲ್ವಿಚಾರಕರಾದ ಸಂದೀಪ ಕುಮಾರ ಶೆಟ್ಟಿ ಉಪಸ್ಥಿತರಿದ್ದರು.

ಸಭೆಯ ಪ್ರಾರಂಭದಲ್ಲಿ ಹಿರಿಯ ಸದಸ್ಯರಾದ ಪ್ರಭಾಕರ ಶೆಣೈ ಪ್ರಾರ್ಥನೆ ಮಾಡಿದರು. ಸಂಘದ ಕಿರಿಯ ಗುಮಾಸ್ತರಾದ ನೋಲನ್ ಪೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿ, ಸಂಘದ ನಿರ್ದೇಶಕರಾದ ನಿತ್ಯಾನಂದ ಶೇರೆಗಾರ್ ಎಚ್  ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!