spot_img
Thursday, April 2, 2026
spot_img

ಕೊಲ್ಲೂರು ವ್ಯ ಸೇ ಸ ಸಂಘದ ಮಹಾಸಭೆ | ಸಾಧಕ ಕೃಷಿಕರಿಗೆ ಸನ್ಮಾನ | 52 ಲಕ್ಷ ಲಾಭ: 13% ಡಿವಿಡೆಂಡ್ ಘೋಷಣೆ

ಕೊಲ್ಲೂರು : ಕೊಲ್ಲೂರು ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಕೆ.ಎನ್. ಚಂದ್ರಶೇಖರ ಅಡಿಗ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಂಘ ವರದಿ ಸಾಲಿನಲ್ಲಿ ರೂ. 52,10,473.01 ಲಾಭ ಗಳಿಸಿದ್ದು, ಸದಸ್ಯರಿಗೆ 13% ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷರು ಹೇಳಿದರು.

ಸಂಘದಲ್ಲಿ 3934 ಸದಸ್ಯರಿದ್ದು, ಅವರಿಂದ ರೂ. 1,65,92,159 ಪಾಲು ಬಂಡವಾಳ ಸಂಗ್ರಹಿಸಲಾಗಿದೆ. ವರದಿ ವರ್ಷದ ಅಂತ್ಯಕ್ಕೆ ಸಂಘದಲ್ಲಿ ರೂ.33,37,72,725.17 ಠೇವಣಿಗಳು ಸಂಗ್ರಹವಾಗಿದೆ. ಸದಸ್ಯರಿಗೆ ರೂ.32,91,45,423 ಸಾಲ ವಿತರಿಸಲಾಗಿದೆ. ಸಂಸ್ಥೆಯ ಕೃಷಿ ಉಪಕರಣ, ಕಟ್ಟಡ ಸಾಮಾಗ್ರಿಗಳ ಮಾರಾಟ ಮಾಡುತ್ತಿದ್ದು, ಇದರಿಂದ 18 ಲಕ್ಷ ಲಾಭ ಪಡೆದಿದೆ. ವರದಿ ವರ್ಷದ ಅಂತ್ಯಕ್ಕೆ ವಿವಿಧ ಆರ್ಥಿಕ ಸಂಸ್ಥೆಗಳಲ್ಲಿ ರೂ14,05,45,617 ವಿನಿಯೋಗಿಸಲಾಗಿದೆ.

ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ್ ಶ್ಯಾನುಭಾಗ್ ವಾರ್ಷಿಕ ವರದಿ ಮತ್ತು ಜಮಾ ಖರ್ಚನ್ನು ಮಂಡಿಸಿದರು.
ಉಪಾಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ಶಿವರಾಮ ಕೃಷ್ಣ ಭಟ್, ಸುಧೀರ್ ಹೆಬ್ಬಾರ್, ಪ್ರಕಾಶ್, ಸಂದೀಪ್ ಆರ್, ಅರುಣ್ ಕುಮಾರ್ ಶೆಟ್ಟಿ ಎಂ., ಚಂದ್ರ ಬಳೆಗಾರ್ ಕೆ., ವಿಶ್ವನಾಥ ಶೆಟ್ಟಿ, ಶ್ರೀದೇವಿ ಎನ್. ಭಟ್, ಸವಿತಾ, ವಾಸು, ಭುಜಂಗ ಮತ್ತು ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶಿವರಾಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದÀ ಕಾರ್ಯ ವ್ಯಾಪ್ತಿಯಲ್ಲಿ ಬರುವ ಉತ್ತಮ ಕೃಷಿ ಸಾಧಕರನ್ನು ಆಯ್ಕೆ ಮಾಡಿ ಪ್ರಶಸ್ತಿ ಪುರಸ್ಕಾರ ನೀಡಲಾಯಿತು. ಸಂಪ್ರೆಯ ವೆಂಕಟರಮಣ ಭಟ್, ಸಲಗೇರಿಯ ಚಂದ್ರ ನಾಯ್ಕ, ದಳಿಯ ವಾಸುದೇವ ಭಟ್,, ಮಾವಿನ ಕಾರಿನ ಶಂಕರ ನಾಯ್ಕ ಮತ್ತು ಹಳ್ಳಿ ಬೇರಿನ ಲಿಂಗು ಇವರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘದ ಕಾರ್ಯ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರನ್ನು, ಮೆಸ್ಕಾಂ ವಿಭಾಗದ ಸ್ಥಳೀಯ ಪವರ್ ಮ್ಯಾನ್‍ರವರನ್ನು ಗುರುತಿಸಿ ಗೌರವಿಸಲಾಯಿತು. ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೆಂಕಟರಮಣ ಶರ್ಮ ಮತ್ತು ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶಿವರಾವ್ ಯಡ್ತರೆ ಇವರನ್ನು ಸನ್ಮಾನಿಸಲಾಯಿತು. ಹಾರ್ಡ್‍ವೇರ್ ಮಳಿಗೆಯಲ್ಲಿ ಅತಿ ಹೆಚ್ಚು ವ್ಯವಹರಿಸಿದವರನ್ನು ಸನ್ಮಾನಿಸಲಾಯಿತು.

ನಿರ್ದೇಶಕರಾದ ಚಂದ್ರ ಬಳೆಗಾರ್ ಸ್ವಾಗತಿಸಿದರು. ನಾಗೇಂದ್ರ ಬಳೆಗಾರ್ ಕಾರ್ಯಕ್ರಮ ನಿರೂಪಿಸಿ, ಸಂದೀಪ್ ಆರ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!