Sunday, October 13, 2024

ಕರ್ಕುಂಜೆ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ: ಶೇ.10 ಡಿವಿಡೆಂಡ್ ಘೋಷಣೆ

ಕುಂದಾಪುರ: ಕರ್ಕುಂಜೆ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಕರ್ಕುಂಜೆ ಇದರ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಸೆ.20 ರಂದು ಸಂಘದ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ ಬಾಂಡ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಶೇ.10 ಡಿವಿಡೆಂಡ್ ಘೋಷಣೆ ಮಾಡಿದರು ಹಾಗೂ ಉತ್ತಮವಾದ ಸುಸಜ್ಜಿತ ಕಟ್ಟಡವು ಆಡಳಿತ ಮಂಡಳಿ, ಸದಸ್ಯರ ಹಾಗೂ ಊರಿನ ಜನರ ಸಹಕಾರದಿಂದ ಆಗಿದೆ, 25 ವರ್ಷದಿಂದ ಯಾವುದೇ ರಾಜಕೀಯಕ್ಕೂ ಒಳಗಾಗದೇ ಪಕ್ಷಾತೀತವಾಗಿ ನಮ್ಮ ಸಂಘ ಮುಂದುವರೆದುಕೊಂಡು ಬಂದಿದೆ, ಅಂದು 1999 ರಲ್ಲಿ ನಮ್ಮ ಸಹಕಾರಿ ಸಂಘ ಕಟ್ಟಿ ಬೆಳೆಸಲು ಸಹಕಾರಿಯಾದವರನ್ನು ಇಂದು ಸ್ಮರಿಸಿಕೊಳ್ಳಬೇಕು ಎಂದರು.

ಸಂಘದ ಉಪಾಧ್ಯಕ್ಷ ಬಿ. ರಾಜೀವ ಶೆಟ್ಟಿ, ನಿರ್ದೇಶಕರುಗಳಾದ ಎನ್. ಮಹಮ್ಮದ್ ಸಾಹೇಬ್, ಜಿ. ವಿವೇಕಾನಂದ ಭಂಡಾರಿ, ಎಚ್. ಗೋಪಾಲ ಶೆಟ್ಟಿ, ಕೆ. ಪ್ರವೀಣ್ ಕುಮಾರ್ ಶೆಟ್ಟಿ, ಸುರೇಶ್ ಶೆಟ್ಟಿ, ಜಿ. ಸುಬ್ಬ, ಕೃಷ್ಣ ಮಡಿವಾಳ, ವಾಸು ನಾಯ್ಕ, ಸಂತೋಷ ಪೂಜಾರಿ, ಜಾನಕಿ ಶೆಟ್ಟಿ, ಸುಲೋಚನಾ ದಾಸ್, ಸಂದೀಪ ಶೆಟ್ಟಿ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಸುಭಾಸಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಧನ್ಯವಾದ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರನ್ನು ಊರವರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಅಶೋಕ ಕುಮಾರ್ ಶೆಟ್ಟಿ ಜಾಡ್ಕಟ್ಟು, ಗೋಪಾಲಕೃಷ್ಣ ಮಂಜರು, ಚರಿಯಬ್ಬ ಸಾಹೇಬ್, ಚಂದ್ರಶೇಖರ ಶೆಟ್ಟಿ ನೀರ್ಕೊಡ್ಲು, ಸುಧಾಕರ ಶೆಟ್ಟಿ ಹುಣ್ಸೆಮನೆ ಮೊದಲಾದವರು ಉಪಸ್ಥಿತರಿದ್ದು ಸನ್ಮಾನಿಸಿದರು.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!