Tuesday, October 22, 2024

ಆಲೂರು ಹರ್ಕೂರು ವ್ಯ.ಸೇ.ಸ.ಸಂಘದ ಮಹಾಸಭೆ : ಒಂದು ಕೋಟಿ ಲಾಭದ ಗುರಿ: 12% ಡಿವಿಡೆಂಡ್ ಘೋಷಣೆ

ಕುಂದಾಪುರ: (ಜನಪ್ರತಿನಿಧಿ ವಾರ್ತೆ) ಸದಸ್ಯರ ಸಾಲಗಳು, ಠೇವಣಿಗಳಿಂದ ಮತ್ತು ಸಿಬ್ಬಂದಿಗಳ ದುಡಿಮೆಯಿಂದ ಸಂಘವು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಹಕಾರ ಸಂಘಗಳಲ್ಲಿನ ವ್ಯವಹಾರ ಸದಸ್ಯರಿಗೆ ಹೆಚ್ಚು ಅನುಕೂಲವಾಗತ್ತಿದೆ. ತಾವು ಪಡೆದುಕೊಂಡ ಸಾಲಗಳ ಬಗ್ಗೆ ಮುಕ್ತವಾಗಿ ಸಿಬ್ಬಂದಿಗಳಲ್ಲಿ ಕೇಳಬಹುದು. ನಮ್ಮ ಸಹಕಾರ ಸಂಘವು ಗ್ರಾಮೀಣ ಭಾಗದಲ್ಲಿದ್ದರೂ ಉತ್ತಮ ಸೇವೆಯನ್ನು ನೀಡುತ್ತಿದೆ. ಈ ಬಾರಿ ರೂ.80,59,194 ಲಾಭವನ್ನು ಗಳಿಸಿದ್ದು, 12% ಡಿವಿಡೆಂಡ್ ನೀಡಲಾಗುವುದು ಎಂದು ಆಲೂರು ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಹರ್ಕೂರು ಮಂಜಯ್ಯ ಶೆಟ್ಟಿ ಹೇಳಿದರು.
ಅವರು ಸೋಮವಾರ ಸಂಘದ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಸಂಘದ ಅಭಿವೃದ್ಧಿಯ ದೃಷ್ಟಿಯಿಂದ ಪ್ರತಿಯೊಬ್ಬ ಸದಸ್ಯರೂ ಮಾತನಾಡಬೇಕು. ಸಲಹೆ ಸೂಚನೆಗಳನ್ನು ನೀಡಬೇಕು. ಅದಕ್ಕೆ ಮಹಾಸಭೆ ಪೂರಕ ವ್ಯವಸ್ಥೆ. ನಿಮ್ಮೆಲ್ಲರ ಸಹಕಾರದಂದ ಸಂಘ ಇನ್ನಷ್ಟು ಬೆಳವಣಿಗೆ ನಡೆಸಲು ಸಾಧ್ಯ. ಮುಂದಿನ ವರ್ಷ ಒಂದು ಕೋಟಿ ಲಾಭ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಮಂಜಯ್ಯ ಶೆಟ್ಟಿ ಹೇಳಿದರು.
ಸಂಘದ ವಾರ್ಷಿಕ ವರದಿ ಮಂಡಿಸಿ ಮಾತನಾಡಿದ ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಮತ್ತು ಸಿ.ಇ.ಓ. ಶಿವರಾಮ ಪೂಜಾರಿ ಮಾತನಾಡಿ ಸಂಘವು ಪಡುಕೋಣೆಯಿಂದ ವಿಭಜನೆಯಾಗಿ ಬರುವಾಗ ನಷ್ಟದಲ್ಲಿತ್ತು. ಈಗ ನಿರಂತರ ಪ್ರಗತಿ ಕಾಣುತ್ತಿದೆ. ಸಂಘದ ಸ್ವಂತ ನಿಧಿಯಿಂದ ಕಟ್ಟಡ ನಿರ್ಮಾಣ ಮಾಡಿದೆ. ಹವಾನಿಯಂತ್ರಿತ ಸೇವೆಯನ್ನು ನೀಡುತ್ತಿದೆ ಎಂದರು.
ಸಂಘದಲ್ಲಿ ಒಟ್ಟು 5503 ಸದಸ್ಯರಿದ್ದು, ಅವರಿಂದ ರೂ.1,54,83,807 ಪಾಲು ಹಣವಿದೆ. ರೂ.42,24,09,651.30 ಠೇವಣಿ ಸಂಗ್ರಹಿಸಲಾಗಿದೆ. ರೂ.15,66,62,144.00 ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನಿಂದ ರೈತರಿಗೆ ಕೃಷಿಸಾಲ ನೀಡಲಾಗಿದೆ. ಸಂಘದಲ್ಲಿ ಎಲ್ಲಾ ನಿಧಿಗಳು ಸೇರಿ ರೂ. 3,76,06,422.90 ನಿಧಿಗಳಿವೆ. ಸಂಘವು ಬೇರೆ ಬೇರೆ ಆರ್ಥಿಕ ಸಂಘಗಳಲ್ಲಿ 15 ಕೋಟಿಗೂ ಮಿಕ್ಕಿ ವಿನಿಯೋಗ ಮಾಡಿದೆ ಎಂದರು.
ಸಂಸ್ಥೆಯ ಉಪಾಧ್ಯಕ್ಷರಾದ ಎನ್. ಸಂತೋಷ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ಹೆಚ್. ಶಂಕರ ಶೆಟ್ಟಿ, ಎಂ. ಚಂದ್ರಶೇಖರ ಶೇಟ್ಟಿ, ಸುಬ್ಬ ಪೂಜಾರಿ, ರತ್ನಾಕರ ಆಚಾರ್ಯ, ರಾಜೇಶ್ ದೇವಾಡಿಗ, ಗಂಗಾಧರ ಆಚಾರ್ಯ, ಅಮರನಾಥ ಶೆಟ್ಟಿ, ಸುರೇಂದ್ರ, ಹರೀಶ್, ಶ್ರೀಮತಿ ಲಲಿತಾ ಕುಲಾಲ್, ಶ್ರೀಮತಿ ಆಶಾ, ವ್ಯವಸ್ಥಾಪಕರಾದ ಸಂಜೀವ ಪೂಜಾರಿ ಉಪಸ್ಥಿತರಿದ್ದರು.
ಸದಸ್ಯರು ಸಂಘದ ಅಭಿವೃದ್ಧಿ ಬಗ್ಗೆ ಮಾತನಾಡಿದರು. ರಾಜೀವ ಶೆಟ್ಟಿ, ರಘುರಾಮ ದೇವಾಡಿಗ ಮತ್ತು ಪಂಚಾಯತ್ ಅಧ್ಯಕ್ಷರಾದ ರಾಜೇಶ್ ದೇವಾಡಿಗ ಸೂಕ್ತ ಸಲಹೆ ನೀಡಿದರು. ಸಂಘದ ಕಾರ್ಯವ್ಯಾಪ್ತಿಯ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ವ್ಯವಸ್ಥಾಪಕ ಸಂಜೀವ ಪೂಜಾರಿ ಸ್ವಾಗತಿಸಿದರು. ಸಿಬ್ಬಂದಿ ಗಣೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!