spot_img
Thursday, April 2, 2026
spot_img

ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘ ಹೆಮ್ಮಾಡಿ : ರೂ.1.48 ಕೋಟಿ ಲಾಭ;15% ಡಿವಿಡೆಂಡ್ ಘೋಷಣೆ

ಹೆಮ್ಮಾಡಿ: ಸಂಘವು 50 ವರ್ಷಗಳನ್ನು ಪೂರೈಸಿ 51ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ವರದಿ ವರ್ಷಂತ್ಯಕ್ಕೆ 9,997 ಅ ತರಗತಿ ಸದಸ್ಯರು ಇದ್ದು ರೂ.3,08,48,547 ಪಾಲು ಬಂಡವಾಳವನ್ನು ಹೊಂದಿದೆ. ವರ್ಷಾಂತ್ಯಕ್ಕೆ ರೂ.73,68,35,379 ವಿವಿಧ ಠೇವಣಾತಿಗಳನ್ನು ಹೊಂದಿದೆ. ವರದಿ ವರ್ಷದ ಅಂತ್ಯಕ್ಕೆ ರೂ.1,48,15,996 ಲಾಭ ಗಳಿಸಿದ್ದು 15% ಡಿವಿಡೆಂಡ್ ನೀಡಲಾಗುªದುÀÅ ಎಂದು ಹೆಮ್ಮಾಡಿ  ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಹಕ್ಲಾಡಿ ತಿಳಿಸಿದರು.

ಅವರು ಇತ್ತೀಚೆಗೆ ನಡೆದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವರದಿ ವರ್ಷದಲ್ಲಿ ಸದಸ್ಯರಿಗೆ ಒಟ್ಟು ರೂ.72,41,43,182 ಸಾಲ ನೀಡಲಾಗಿದೆ. ಸಾಲ ನೀಡಿಕೆಯಲ್ಲಿ ಶೇ.36.85 ಹೆಚ್ಚು ಕ್ರಷಿ ಉದ್ದೇಶಿತ ಸಾಲ ನೀಡಲಾಗಿದೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ 29,46,45,000 ರೂ ಹಣವನ್ನು ತರಿಸಿ ಸದಸ್ಯರಿಗೆ ನೀಡಲಾಗಿದೆ. ಸಂಘವು ಒಟ್ಟು ರೂ.7,63,81,072 ನಿಧಿಗಳನ್ನು ಹೊಂದಿದೆ. ಸಂಘವು ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿರುವ ವಿವಿಧ ವಿನಿಯೋಗದ ಖಾತೆಯ ಒಟ್ಟು ಮೊತ್ತ ರೂ.39,80,75,087 ಆಗಿದೆ.

ನಬಾರ್ಡ್ ಯೋಜನೆಯನ್ವಯ ಸಂಘದಲ್ಲಿರುವ 427 ಸ್ವಸಹಾಯ ಸಂಘಗಳಿದ್ದು ಈ ಪೈಕಿ 86 ಸ್ವಸಹಾಯ ಗುಂಪುಗಳನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಾ ಅವರ ಬೇಡಿಕೆಯನುಸಾರ ಎಲ್ಲಾ ಗುಂಪುಗಳಿಗೆ ಸಾಲವನ್ನು ಒದಗಿಸಲಾಗಿದೆ ಎಂದರು.

ಉಪಾಧ್ಯಕ್ಷರಾದ ಚಂದ್ರ ನಾಯ್ಕ್, ನಿರ್ದೇಶಕರಾದ ಎಚ್.ರಾಜೀವ ದೇವಾಡಿಗ, ಅಂತೋನಿ ಲೂವಿಸ್, ಅನಂದು ಪಿ.ಎಚ್, ಅನಂತ ಮೊವಾಡಿ, ಶರತ್ ಕುಮಾರ್ ಶೆಟ್ಟಿ, ಚಂದ್ರ ಪೂಜಾರಿ, ಶ್ರೀಮತಿ ಸಾಧು ಎಸ್.ಬಿಲ್ಲವ, ಶ್ರೀಮತಿ ಚಂದ್ರಮತಿ ಶೆಡ್ತಿ, ಶ್ರೀಮತಿ ಶಾರದಾ, ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ಪ್ರತಿನಿಧಿ ಎಸ್.ರಾಜು ಪೂಜಾರಿ, ವೃತಿಪರ ನಿರ್ದೇಶಕರಾದ ತಮ್ಮಯ್ಯ ದೇವಾಡಿಗ, ವಲಯ ಮೇಲ್ವಿಚಾರಕ ಸಂದೀಪ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಇದೆ ಸಂದರ್ಭದಲ್ಲಿ ನಿವೃತ್ತ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಅರುಣಕುಮಾರ್ ಎಸ್. ವಿ.ಯವರನ್ನು ಸನ್ಮಾನಿಸಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಎ ಪೂಜಾರಿ ವಾರ್ಷಿಕ ವರದಿ ಮಂಡಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!