Sunday, October 13, 2024

ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮಹಾಸಭೆ | 4.05 ಕೋಟಿ ಲಾಭ| ಶೇ.22 ಡಿವಿಡೆಂಡ್ ಘೋಷಣೆ

ಕುಂದಾಪುರ: ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 32 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ 12 ಶಾಖೆಗಳ ಮೂಲಕ ಸದಸ್ಯರ ಹತ್ತಿರಕ್ಕೆ ಹೋಗಿ ಸೇವೆ ನೀಡುತ್ತಿದೆ. ಕಳೆದ ಆರು ವರ್ಷಗಳಿಂದ ಅನೇಕ ಪ್ರಶಸ್ತಿಗಳನ್ನು ಗಳಿಸಿಕೊಂಡು ಮುನ್ನಡೆಯುತ್ತಿರುವ ಸಂಸ್ಥೆ ಒಂದು ಸಾವಿರ ಕೋಟಿ ವ್ಯವಹಾರವನ್ನು ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ವರದಿ ವರ್ಷದಲ್ಲಿ ರೂ.162,41,97,810 ಠೇವಣಾತಿಯನ್ನು ಹೊಂದಿ ರೂ.4,05,95,913.56 ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.22% ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ ಕುಂದಾಪುರ ಇದರ ಅಧ್ಯಕ್ಷರಾದ ಜೋನ್ಸನ್ ಡಿ’ಅಲ್ಮೇಡಾ ಹೇಳಿದರು.
ಸೆ.22ರಂದು ಕೋಟೇಶ್ವರದ ಸಹನಾ ಕನ್‍ವೆನ್ಶನ್ ಸೆಂಟರ್‍ನಲ್ಲಿ ನಡೆದ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಸ್ಥೆಯು ವರ್ಷಾಂತ್ಯಕ್ಕೆ 4393 ಅ ವರ್ಗದ ಸದಸ್ಯರನ್ನು ಹೊಂದಿ ಅವರಿಂದ ರೂ.1,03,56,430 ಪಾಲು ಬಂಡವಾಳವನ್ನು ಹೊಂದಿದೆ. 7733 ಸಿ ವರ್ಗದ ಸದಸ್ಯರನ್ನು ಹೊಂದಿದ್ದು ಅವರಿಂದ 1,67,880 ಪಾಲು ಹಣವನ್ನು ಹೊಂದಿದೆ, ಠೇವಣಾತಿ ಸಂಗ್ರಹದಲ್ಲೂ ಗಣನೀಯ ಪ್ರಮಾಣದ ಹೆಚ್ಚಳವನ್ನು ದಾಖಲಿಸುತ್ತಿದೆ. ಹಿಂದಿನ ಸಾಲಿಗೆ ಹೋಲಿಸಿದರೆ ಶೇ.14.50ರಷ್ಟು ಪ್ರಗತಿ ಸಾಧಿಸಿದೆ. ವರದಿ ವರ್ಷದಲ್ಲಿ ಸದಸ್ಯರಿಗೆ 127,99,70,401.48 ಸಾಲ ನೀಡಿದೆ. ಸಂಸ್ಥೆಯು ಒಟ್ಟು ರೂ. 40,90,07,847 ಧನ ವಿನಿಯೋಗ ಮಾಡಿದೆ. ಸದಸ್ಯರ ಅವಶ್ಯಕತೆಗೆ ತಕ್ಕಂತೆ ಸಾಲ ಸೌಲಭ್ಯಗಳನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಸಾಲ ಮರುಪಾವತಿಯೂ ಕೂಡಾ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿದೆ ಎಂದರು.
ಸಂಸ್ಥೆಯು ಅತೀ ಕಡಿಮೆ ಬಡ್ಡಿ ದರದಲ್ಲಿ ಶಿಕ್ಷಣ ಸಾಲ ನೀಡುತ್ತಿದೆ. ವಿವಿಧ ಉದ್ದೇಶಗಳಿಗೆ ಸುಲಭ ಹಾಗೂ ಸರಳ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿದೆ. ಕಡಿಮೆ ಬಾಡಿಗೆ ವೆಚ್ಚದಲ್ಲಿ ಸೇಫ್ ಡೆಪೋಸಿಟ್ ಲಾಕರ್‍ಗಳ ಸೌಲಭ್ಯ ನೀಡುತ್ತಿದೆ, ಸಂಘದ ಅ ವರ್ಗದ ಸದಸ್ಯರಿಗೆ ಮರಣ ನಿಧಿ ಸೌಲಭ್ಯ ನೀಡುತ್ತಿದೆ. ಸಂಘದಲ್ಲಿ ಕೋರ್ ಬ್ಯಾಂಕಿಂಗ್ ಸೌಲಭ್ಯ, ಐ.ಡಿ.ಬಿ.ಐ ಬ್ಯಾಂಕ್ ಸಹಯೋಗದಲ್ಲಿ RTGS/NEFT, QR Cod ಸೌಲಭ್ಯ ಹೊಂದಿದೆ. ಸಂಘದ ನೂತನ ಶಾಖೆಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದೆ ಎಂದರು.
ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಈಗಾಗಲೇ ಕುಂದಾಪುರದಲ್ಲಿ ಪ್ರಧಾನ ಕಛೇರಿ ಹೊಂದಿ, ಕುಂದಾಪುರ, ಬೈಂದೂರು, ಪಡುಕೋಣೆ, ಬಸ್ರೂರು, ಪಿಯುಸ್ ನಗರ/ಕೋಟೇಶ್ವರ, ತ್ರಾಸಿ/ಗಂಗೊಳ್ಳಿ, ಸಂತೆಕಟ್ಟೆ/ಕಲ್ಯಾಣಪುರ, ಶಿರ್ವ, ತಲ್ಲೂರು, ಬ್ರಹ್ಮಾವರ, ಉಡುಪಿ ಮತ್ತು ಕಾರ್ಕಳದಲ್ಲಿ ಶಾಖೆಗಳನ್ನು ತೆರೆದಿದೆ. ಪಡುಕೋಣೆ, ಸಂತೆಕಟ್ಟೆ, ಬಸ್ರೂರು, ಬೈಂದೂರು ಶಾಖೆಗಳು ಸ್ವಂತ ಕಟ್ಟಡ ಹೊಂದಿವೆ ಎಂದರು.
ಈಗಾಗಲೇ ಕುಂದಾಪುರದಲ್ಲಿ ಪ್ರಧಾನ ಕಛೇರಿ ಹೊಂದಿ, ಕುಂದಾಪುರ, ಬೈಂದೂರು, ಪಡುಕೋಣೆ, ಬಸ್ರೂರು, ಪಿಯುಸ್ ನಗರ/ಕೋಟೇಶ್ವರ, ತ್ರಾಸಿ/ಗಂಗೊಳ್ಳಿ, ಸಂತೆಕಟ್ಟೆ/ಕಲ್ಯಾಣಪುರ, ಶಿರ್ವ, ತಲ್ಲೂರು, ಬ್ರಹ್ಮಾವರ, ಉಡುಪಿ ಮತ್ತು ಕಾರ್ಕಳದಲ್ಲಿ ಶಾಖೆಗಳನ್ನು ತೆರೆದಿದೆ. ಪಡುಕೋಣೆ, ಸಂತೆಕಟ್ಟೆ, ಬಸ್ರೂರು, ಬೈಂದೂರು ಶಾಖೆಗಳು ಸ್ವಂತ ಕಟ್ಟಡ ಹೊಂದಿವೆ ಎಂದರು.
ಸಂಸ್ಥೆಯ ಉಪಾಧ್ಯಕ್ಷ ಕಿರಣ್ ಮೆಲ್ವಿನ್ ಲೋಬೊ, ನಿರ್ದೇಶಕರಾದ ಫಿಲಿಪ್ ಡಿ ಕೋಸ್ಟ, ವಿನೋದ್ ಕ್ರಾಸ್ಟೋ, ಬ್ಯಾಪ್ತಿಸ್ಟ್ ಡಾಯಸ್, ವಿಲ್ಸನ್ ಡಿ’ ಸೋಜ, ಡೇರಿಕ್ ಡಿ’ ಸೋಜ, ಮೈಕಲ್ ಪಿಂಟೊ, ಪ್ರಕಾಶ್ ಲೋಬೋ, ಶ್ರೀಮತಿ ಶಾಂತಿ ಆರ್ ಕರ್ವಾಲ್ಲೊ, ಶ್ರೀಮತಿ ಡೈನಾ ಅಲ್ಮೇ ಡಾ, ತಿಯೋದರ್ ಒಲಿವೇರಾ, ಓಜ್ಲಿನ್ ರೆಬೆಲ್ಲೊ, ಶ್ರೀಮತಿ ಶಾಂತಿ ಡಾಯಸ್, ವಿಲ್ಫ್ರೆಡ್ ಮಿನೇಜಸ್, ಟೆರೆನ್ಸ್ ಸುವಾರಿಸ್, ಸಂತೋಷ್ ಓಸ್ವೋಲ್ಡ್ ಡಿ’ ಸಿಲ್ವಾ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೇಬಲ್ ಡಿ ಅಲ್ಮೇಡಾ ವರದಿ ಮಂಡಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!