Sunday, October 13, 2024

ಅಮವಾಸೆಬೈಲು ವ್ಯ.ಸೆ.ಸಂಘದ ವಾರ್ಷಿಕ ಮಹಾಸಭೆ | 378 ಕೋಟಿ ವ್ಯವಹಾರ: 76.79 ಲಕ್ಷ ಲಾಭ

ಅಮವಾಸೆಬೈಲು: ಅಮವಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಸದಾನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಘವು ಉತ್ತಮವಾಗಿ ಮುನ್ನಡೆದು ನಿರಂತರ ಪ್ರಗತಿ ಕಾಣುತ್ತಿದೆ. ಸದಸ್ಯರು ಮತ್ತು ಗ್ರಾಹಕರ ಅನುಕೂಲಕ್ಕಾಗಿ ಸುಸಜ್ಜಿತ ಹವಾನಿಯಂತ್ರಿತ ವ್ಯವಸ್ಥೆಯನ್ನು ಮಾಡಲಾಗಿದ್ದು, ಇದು ಸದಸ್ಯರ ಸಹಕಾರದಿಂದ ಸಾಧ್ಯವಾಗಿದೆ ಎಂದರು. ಈ ಆರ್ಥಿಕ ವರ್ಷದಲ್ಲಿ 378 ಕೋಟಿ ವ್ಯವಹಾರ ಮಾಡಿದ್ದು, 76.79 ಲಕ್ಷ ಲಾಭ ಗಳಿಸಲು ಸಾಧ್ಯವಾಗಿದೆ. ಸದಸ್ಯರಿಗೆ 11% ಡಿವಿಡೆಂಡ್ ನೀಡಲಾಗುವುದು ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಕೃಷ್ಣಕುಮಾರ್ ಭಾಗವತ್ ವಾರ್ಷಿಕ ವರದಿಯನ್ನು ಮಂಡಿಸಿದರು. ಸಂಘವು ರೂ.57,99,92,927.91 ಠೇವಣಿಯನ್ನು ಹೊಂದಿದೆ. ಸದಸ್ಯರಿಗೆ ಕೃಷಿಸಾಲ ಸೇರಿದಂತೆ ರೂ.73,87,29,481 ಸಾಲಗಳನ್ನು ನೀಡಲಾಗಿದೆ. ವ್ಯಾಪಾರ ವಹಿವಾಟಿನಿಂದ ಸಂಘಕ್ಕೆ ರೂ.5,54,585.42 ಲಾಭ ಬಂದಿದೆ. ವರದಿ ವರ್ಷಕ್ಕೆ ಇತರೆ ಆರ್ಥಿಕ ಸಂಸ್ಥೆಗಳಲ್ಲಿ ರೂ.17,00,36,578.28 ಹೂಡಿಕೆ ಮಾಡಲಾಗಿದೆ. ಸಂಸ್ಥೆಯಲ್ಲಿ ಬೇರೆ ಬೇರೆ ನಿಧಿಗಳು ಸೇರಿ ರೂ.2,77,36,620 ನಿಧಿಗಳನ್ನು ಹೊಂದಿದೆ ಎಂದರು.
ಸಂಘದ ಕಾರ್ಯ ವ್ಯಾಪ್ತಿಯ ಪ್ರತಿಭಾನ್ವಿತ ವಿಧ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ಶೇಖರ ನಾಯ್ಕ್, ನಿರ್ದೇಶಕರಾದ ನಾರಾಯಣ ರಾವ್, ಕೆ. ಮಂಜಯ್ಯ ಶೆಟ್ಟಿ., ನರಸಿಂಹ ಶೆಟ್ಟಿ, ಸತೀಶ್ ಹೆಗ್ಡೆ, ಗೋಪಾಲ ಪೂಜಾರಿ, ತಿಮ್ಮಪ್ಪ ಪೂಜಾರಿ, ದಿನೇಶ್ ಶೆಟ್ಟಿಗಾರ್, ಶ್ರೀಮತಿ ಸುಜಯ ಹೆಗ್ಡೆ, ಶ್ರೀಮತಿ ರಾಧಿಕಾ, ಅಕ್ಷತ ಕುಮಾರ್, ಬಿ., ಪ್ರವೀಣ ಕುಮಾರ್, ರಘುಪತಿ ರಾವ್, ನಾಗರಾಜ ಪೂಜಾರಿ, ಭೂ ಬ್ಯಾಂಕ್ ಪ್ರತಿನಿಧಿ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಿವೃತ್ತ ಸಹಕಾರಿ ಸಂಘಗಳ ಸಹಾಯಕ ನಿಬಂದಕರಾದ ಅರುಣ ಕುಮಾರ್‍ಎಸ್.ವಿಯವರನ್ನು ಸನ್ಮಾನಿಸಲಾಯಿತು. ಕೆ. ನಾರಾಯಣ ರಾವ್ ಸ್ವಾಗತಿಸಿದರು. ಸತೀಷ್ ಹೆಗ್ಡೆಯವರು ಧನ್ಯವಾದ ಅರ್ಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!