Saturday, October 12, 2024

ಸೆ.28ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಅದ್ದೂರಿಯ ಯಕ್ಷಗಾನ-‘ಮಾರಣಾಧ್ವರ, ಶಿವದೂತ ಪಂಜುರ್ಲಿ’

ಬೆಂಗಳೂರು: ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಸಪ್ಟೆಂಬರ್ 28ರಂದು ರಾತ್ರಿ 10-30ಕ್ಕೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು, ಮಂದಾರ್ತಿ ಮತ್ತು ಕಮಲಶಿಲೆ ಮೇಳದ ಆಯ್ದ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಮಾರಣಾಧ್ವರ ಹಾಗೂ ಶಿವದೂತ ಪಂಜುರ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಈ ಯಕ್ಷಗಾನ ಪ್ರದರ್ಶನದಲ್ಲಿ ತೆಂಕು-ಬಡಗಿನ ಕಲಾವಿದರ ವಾಕ್ ವೈಭವ, ಅರ್ಥವೈಭವಕ್ಕೆ ಖ್ಯಾತಿವೆತ್ತ ತೆಂಕಿನ ದಿನೇಶ ಕಾವಳಕಟ್ಟೆ ಹಾಗೂ ಬಡಗಿನ ಯುವ ಅರ್ಥಧಾರಿ ಸುನಿಲ್ ಕುಮಾರ್ ಹೊಲಾಡು ಭಾಗವಹಿಸಲಿದ್ದಾರೆ. ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯಕಲಾವಿದ ಮಹೇಶ ಮಣಿಯಾಣಿ ಹಾಗೂ ಬಡಗಿನ ಪ್ರಸಿದ್ಧ ಹಾಸ್ಯಕಲಾವಿದ ಸತೀಶ್ ಹಾಲಾಡಿಯವರ ಹಾಸ್ಯರಸಧಾರೆ, ಯುವ ಪುಂಡು ವೇಷಧಾರಿಗಳಾದ ವಿಶ್ವನಾಥ ಹೆನ್ನಾಬೈಲು, ಹರೀಶ್ ಜಪ್ತಿ ಮುಖಾಮುಖಿ, ನಾಗೇಂದ್ರ ರಾವ್ ಉಪ್ಪುಂದ, ದಿನಕರ ಕುಂದರ್ ನಡೂರು, ರಮೇಶ ವಂಡಾರು, ನಾಗರಾಜ ದೇವಲ್ಕುಂದ, ರಾಕೇಶ ಶೆಟ್ಟಿ, ರಜತ್ ಕುಮಾರ್ ಮೊದಲಾದವರು ಕಲಾವಿದರ ಮುಮ್ಮೇಳ, ಸದಾಶಿವ ಅಮೀನ್ ಕೊಕ್ಕಣೆ, ಗಣೇಶ ನಾಯ್ಕ್ ಯಡಮೊಗೆ, ಗಣೇಶ ಆಚಾರ್ ಬಿಲ್ಲಾಡಿ ಭಾಗವತಿಕೆ, ಮೂರು ಮೇಳದ ಮೂರು ಜನ ಪ್ರಧಾನ ಚಂಡೆ ವಾದಕರು, ಮದ್ದಳೆ ವಾದಕರ ಜುಗಲ್ಬಂಧಿ ನಡೆಯಲಿದೆ. ಮಹಿಷಾಸುರ ಖ್ಯಾತಿಯ ನಂದೀಶ್ ಮೊಗವೀರ ಜನ್ನಾಡಿ ಪಂಜುರ್ಲಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಧರ್ಮಸ್ಥಳ ಮೇಳದ ಹಾಸ್ಯ ಕಲಾವಿದ ಮಹೇಶ ಮಣಿಯಾಣಿ, ಅಮೃತೇಶ್ವರಿ ಮೇಳದ ಹಾಸ್ಯ ಕಲಾವಿದ ಸತೀಶ್ ಕುಮಾರ್ ಹಾಲಾಡಿ, ಮಂದಾರ್ತಿ ಮೇಳದ ಮದ್ದಳೆ ವಾದಕರಾದ ಲೋಹಿತ್ ಕುಮಾರ್ ಕೊಮೆ, ಪವರ್ ಲಿಪ್ಟರ್ ವಿಶ್ವನಾಥ ಭಾಸ್ಕರ ಗಾಣಿಗ ಬಾಳಿಕೆರೆ, ಹೆಗ್ಗದ್ದೆ ಸ್ಟುಡಿಯೋ ಸ್ಥಾಪಕರಾದ ಸಂದೀಪ್ ಶೆಟ್ಟಿ ಹೆಗ್ಗದ್ದೆ ಅವರನ್ನು ಸನ್ಮಾನಿಸಲಾಗುವುದು ಎಂದು ಕಾರ್ಯಕ್ರಮ ಸಂಘಟಕರಾದ ನಂದೀಶ್ ಮೊಗವೀರ ಜನ್ನಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!