Tuesday, October 22, 2024

ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರ ಸಂಘ ಮಹಾಸಭೆ | ಒಂದೂವರೆ ಕೋಟಿ ಲಾಭ: 14% ಡಿವಿಡೆಂಡ್ ಘೋಷಣೆ

ಮರವಂತೆ: ಕಳೆದ ಐದು ವರ್ಷಗಳಿಂದ ಈಚೆಗೆ ಸಂಘದ ವ್ಯವಹಾರವು ದ್ವಿಗುಣಗೊಂಡಿದೆ. ನಿರಂತರ ಪ್ರಗತಿಯನ್ನು ಕಾಣುತ್ತಾ ಬಂದಿದ್ದು ಐದು ವರ್ಷಗಳ ಹಿಂದೆ 30 ಕೋಟಿ ಇದ್ದ ಠೇವಣಿ ಇಂದು 68ಕೋಟಿ ತಲುಪಿದೆ. ಜನ ಪೂರ್ಣ ಪ್ರಮಾಣದ ನಂಬಿಕೆ ಇಟ್ಟಿದ್ದಾರೆ. ಈ ಬಾರಿ ಒಂದೂವರೆ ಕೋಟಿಗೂ ಮಿಕ್ಕಿ ಲಾಭಗಳಿಸಿದ್ದು ಈ ಸಾಧನೆಗೆ ಸಂಘದ ಸದಸ್ಯರೆ ಸ್ಪೂರ್ತಿ ಎಂದು ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.
ಶನಿವಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 12 ಕೋಟಿಗೂ ಮಿಕ್ಕಿ ಕೃಷಿ ಸಾಲವನ್ನು ನೀಡಲಾಗಿದೆ. ಕೃಷಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಎಸ್. ರಾಜು ಪೂಜಾರಿ ಹೇಳಿದರು.
ಸಂಘದಲ್ಲಿ ಒಟ್ಟು 13,651 ಸದಸ್ಯರಿದ್ದು ಅವರಿಂದ ರೂ 2,27,22,313 ಪಾಲು ಬಂಡವಾಳ ಹೊಂದಿದೆ. ರೂ 66,64,45,981 ಠೇವಣಿ ಹೊಂದಿದ್ದು, ರೂ 58,86,43,511 ಸಾಲ ಹೊರಬಾಕಿ ಇದೆ. ರೂ 5,33,67,722 ಸಂಘದಲ್ಲಿ ಬೇರೆ ಬೇರೆ ನಿಧಿಗಳಿವೆ. ವಿವಿಧ ಆರ್ಥಿಕ ಸಂಘಗಳಲ್ಲಿ ರೂ 29.52,33,900 ವಿನಿಯೋಗಿಸಲಾಗಿದೆ. ರೂ 1,87,57,934 ಕೆಟ್ಟ ಸಾಲದ ನಿಧಿಯಾಗಿ ಕಾಯ್ದಿರಿಸಲಾಗಿದೆ. ರೂ 324.91 ಕೋಟಿ ವ್ಯವಹಾರ ನೆಡೆಸಾಲಗಿದೆ ರೂ 1,55,09,557.37 ಲಾಭಗಳಿಸಲಾಗಿದೆ ಎಂದು ರಾಜು ಪೂಜಾರಿ ಹೇಳಿದರು.
ಸಂಘದಲ್ಲಿ 266 ಸ್ವ-ಸಹಾಯ ಗುಂಪುಗಳಿದ್ದು ಅವರಿಂದ ರೂ 88.67 ಲಕ್ಷ ಠೇವಣಿ ಸಂಗ್ರಹಿಸಿದ್ದು ರೂ 9.08 ಕೋಟಿ ಸಾಲ ನೀಡಲಾಗಿದೆ ಎಂದರು. ಮುಂದಿನ ಆರ್ಥಿಕ ವರ್ಷದಲ್ಲಿ 1.75 ಕೋಟಿ ಲಾಭಗಲಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುರೇಶ್ ಅಳ್ವೆಗದ್ದೆ ಸಂಘದ ವಾರ್ಷಿಕ ವರದಿ ಜಮಾ ಖರ್ಚುಗಳನ್ನು ಮಂಡಿಸಿದರು.
ಉಪಾಧ್ಯಕ್ಷರಾದ ಎಂ. ಚಂದ್ರ ಶೀಲ ಶೆಟ್ಟಿ, ನಿರ್ದೇಶಕರುಗಳಾದ ವಾಸು ಪೂಜಾರಿ, ಭೋಜ ನಾಯ್ಕ, ನರಸಿಂಹ ದೇವಾಡಿಗ, ರಾಮ ಕೃಷ್ಣ ಖಾರ್ವಿ, ಪ್ರಕಾಶ ದೇವಾಡಿಗ, ಎಂ ಅಣ್ಣಪ್ಪ ಬಿಲ್ಲವ, ನಾರಾಯಣ ಶೆಟ್ಟಿ, ರಾಮ, ಶ್ರೀಮತಿ ನಾಗಮ್ಮ, ಶ್ರೀಮತಿ ಸರೋಜ ಆರ್. ಗಾಣಿಗ, ಎಂ ವಿನಾಯಕ ರಾವ್ ಮತ್ತು ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶಿವರಾಮ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಂಘದ ವ್ಯಾಪ್ತಿಯ ಲೆಫ್ಟಿನೆಂಟ್ ಭರತ್ ಬಾಬು ದೇವಾಡಿಗ ಇವರನ್ನು ಸನ್ಮಾನಿಸಲಾಯಿತು. ಅವರ ಸಾಧನೆಗೆ ಮಹಾಸಭೆ ಅಭಿನಂದಿಸಿತು. ಮಂಗಳೂರು ಅರಣ್ಯ ಸಂಚಾರಿ ದಳದಲ್ಲಿ ಕರ್ತವ್ಯ ನಿರ್ವಹಿಸಿತ್ತಿರುವ ಪ್ರಶಾಂತ್ ಪೂಜಾರಿ ಇವರು 2023ನೇ ಸಾಲಿನ ಉತ್ತಮ ಕಾರ್ಯದಕ್ಷತೆಗಾಗಿ ಮುಖ್ಯಮಂತ್ರಿಗಳ ಪದಕ ಪಡೆದುದಕ್ಕೆ ಅಭಿನಂದಿಸಲಾಯಿತು. ಇತ್ತೀಚಿಗೆ ನಡೆದ ಜೆ.ಇಇ ಪರೀಕ್ಷೆಯಲ್ಲಿ 98.68% ಅಂಕ ಪಡೆದ ಪ್ರಣತಿ ಉದಯಕುಮಾರ್ ಬಡಾಕೆರ ಈ ಸಂದರ್ಭದಲ್ಲಿ ವಿಶೇಷವಾಗಿ ಪ್ರೋತ್ಸಾಹ ನೀಡಿ ಗೌರವಿಸಲಾಯಿತು.
ಕಳೆದ ಬಾರಿಯ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಗಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ನಿರ್ದೇಶಕ ಎಂ. ವಿನಾಯಕ ರಾವ್ ಮರವಂತೆ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕ ಸೋಮಯ್ಯ ಬಿಲ್ಲವ ಕಾರ್ಯಕ್ರಮ ನಿರೂಪಿಸದರು. ಕೊನೆಯಲ್ಲಿ ಸುರೇಶ್ ಅಳ್ವೆಗದ್ದೆ ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!