Saturday, October 12, 2024

ಮಾರಣಕಟ್ಟೆ ಅಯ್ಯಪ್ಪ ಸ್ವಾಮಿ ಭಕ್ತವೃಂದದ 40ರ ಸಂಭ್ರಮಕ್ಕೆ ಚಾಲನೆ

ಕುಂದಾಪುರ: (ಜನಪ್ರತಿನಿಧಿ ವಾರ್ತೆ) ಮಾರಣಕಟ್ಟೆ ಅಯ್ಯಪ್ಪ ಸ್ವಾಮಿ ಭಕ್ತವೃಂದ 40ನೇ ವರ್ಷದ ಶಬರಿಮಲೈ ಯಾತ್ರೆಗೆ ಸನ್ನದ್ಧಗೊಳ್ಳುತ್ತಿದೆ.

ಧಾರ್ಮಿಕ ಮುಂದಾಳು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಮಾಜಿ ಧರ್ಮದರ್ಶಿ ವಂಡವಳ್ಳಿ ಜಯರಾಮ ಶೆಟ್ಟಿಯವರ ನೇತೃತ್ವದ ತಂಡ ಇದೇ ನವಂಬರ್‌ನಲ್ಲಿ 40ನೇ ವರ್ಷದ ಶಬರಿಮಲೈ ಯಾತ್ರೆ ಮಾಡುತ್ತಿದೆ. ಈ ಸಂದರ್ಭದಲ್ಲಿ 40ನೇ ವರ್ಷದ ಶಬರಿಮಲೈ ಯಾತ್ರೆಯನ್ನು ಅರ್ಥಪೂರ್ಣವಾಗಿ ನೆರವೇರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು ಪ್ರಮುಖವಾಗಿ ಅಯ್ಯಪ್ಪ ಸ್ವಾಮಿ ಮೂರ್ತಿಗೆ ಬೆಳ್ಳಿಯ ಮುಖವಾಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸುಮಾರು 3.5 ಲಕ್ಷ ವೆಚ್ಚದಲ್ಲಿ ರಜತ ಮುಖವಾಡ ನಿರ್ಮಾಣದ ಸಲುವಾಗಿ ರಜತ ಶಿಲ್ಪಿಗಳಿಗೆ ಇತ್ತಿಚೆಗೆ ವೀಳ್ಯೆದೊಂದಿಗೆ ಮುಂಗಡ ನೀಡಲಾಯಿತು.

ಈ ಸಂದರ್ಭದಲ್ಲಿ ಮಾರಣಕಟ್ಟೆ ಅಯ್ಯಪ್ಪ ಸ್ವಾಮಿ ಭಕ್ತವೃಂದದ ಅಧ್ಯಕ್ಷರಾದ ವಂಡಬಳ್ಳಿ ಜಯರಾಮ ಶೆಟ್ಟಿ, ರಾಮಚಂದ್ರ ಮಂಜ ಮಾರಣಕಟ್ಟೆ, ದಿವಾಕರ ಆಚಾರ್ಯ, ಶಿಷ್ಯವೃಂದದ ಪ್ರದೀಪ ಶೆಟ್ಟಿ, ಭಾಸ್ಕರ ದೇವಾಡಿಗ, ರಮೇಶ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಗುಂಡು ಮಡಿವಾಳ,ಸೀತಾರಾಮ ಮಡಿವಾಳ , ಅಯ್ಯಪ್ಪ ಸ್ವಾಮಿ ಭಕ್ತವೃಂದದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!