Sunday, October 13, 2024

ಕರಾವಳಿ ಜಿಲ್ಲೆಗಳನ್ನು ಕಾಂಗ್ರೆಸ್ ಸರ್ಕಾರ ಎಂದೂ ನಿರ್ಲಕ್ಷ್ಯ ಮಾಡಿಲ್ಲ | ಇಚ್ಛಾಶಕ್ತಿ ಇದ್ದರೆ ಕೇಂದ್ರ ಸರ್ಕಾರದ ಅನುದಾನ ತರಲಿ : ಬಿಜೆಪಿ ವಿರುದ್ಧ ವಿಕಾಸ್‌ ಹೆಗ್ಡೆ ಆಕ್ರೋಶ

ಜನಪ್ರತಿನಿಧಿ (ಉಡುಪಿ) : ಕರಾವಳಿ ಜಿಲ್ಲೆಗಳನ್ನು ಕಾಂಗ್ರೆಸ್ ಸರ್ಕಾರ ಯಾವತ್ತೂ ನಿರ್ಲಕ್ಷ ಮಾಡಲಿಲ್ಲ, ಇವತ್ತಿನ ಕರಾವಳಿಯ ಎಲ್ಲಾ ಸಮಸ್ಯೆಗಳಿಗೆ ಕಾರಣ ಬಿಜೆಪಿ ಸರ್ಕಾರ ಹಾಗೂ ಅದರ ಜನಪ್ರತಿನಿಧಿನಗಳು. ಕರಾವಳಿಯ ಹೆಚ್ಚಿನ ಎಲ್ಲಾ ಜನಪ್ರತಿನಿದಿನಗಳು ಬಿಜೆಪಿಯವರು, ಇವರು ಅಭಿವೃದ್ಧಿ ರಾಜಕಾರಣದ ಪರ ನಿರ್ಲಕ್ಷ ಭಾವನೆ ಹೊಂದಿರುವುದೇ ಇವತ್ತಿನ ಕರಾವಳಿಯ ಎಲ್ಲಾ ಸಮಸ್ಯೆಗಳಿಗೆ ಕಾರಣ ಎಂದು ಕಂಗ್ರೆಸ್‌ ಜಿಲ್ಲಾ ವಕ್ತಾರ ಕೆ. ವಿಕಾಸ್‌ ಹೆಗ್ಡೆ ಆಕ್ರೋಶ ಹೊರ ಹಾಕಿದ್ದಾರೆ.

ರಾಜ್ಯ ಕಾಂಗ್ರೆಸ್‌ ಸರ್ಕಾರ ಕರಾವಳಿಯ ಮತ್ತು ಜಿಲ್ಲೆಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಇದೇ ರೀತಿ ನಿರ್ಲಕ್ಷ್ಯ ಮುಂದುವರಿದರೆ ಮುಖ್ಯಮಂತ್ರಿ ಅವರ ಮನೆಯ ಮುಂದೆ ಧರಣಿ ಕೂರುತ್ತೇವೆ ಎಂದು ಉಡುಪಿ ಜಿಲ್ಲೆಯ ಐವರು ಶಾಸಕರು ಹಾಗೂ ಸಂಸದರು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿರುವುದನ್ನು ವಿರೋಧಿಸಿದ ವಿಕಾಸ್‌, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ಜಿಲ್ಲೆಗಳನ್ನು ಅಭಿವೃದ್ಧಿಯ ವಿಚಾರದಲ್ಲಿ ಸಮಾನವಾಗಿ ನೋಡುತ್ತಿದೆ. ಕರಾವಳಿಯ ಜಿಲ್ಲೆಗಳನ್ನು ಕಾಂಗ್ರೆಸ್ ಸರ್ಕಾರ ನಿರ್ಲಕ್ಷ ಮಾಡುತ್ತಿದೆ ಎನ್ನುವುದು ಬಿಜೆಪಿ ಶಾಸಕರ ರಾಜಕೀಯ ಪ್ರೇರಿತ ಹೇಳಿಕೆಯ ಒಂದು ಭಾಗವಷ್ಟೇ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಶಾಸಕರು ಹಾಗೂ ಸಂಸದರಿಗೆ ಅಭಿವೃದ್ಧಿಯ ಇಚ್ಛಾಶಕ್ತಿ ಇದ್ದರೆ ಕೇಂದ್ರ ಸರ್ಕಾರದ ಅನುದಾನದ ಮೂಲಕ ರಾಷ್ಟ್ರೀಯ ಹೆದ್ದಾರಿಗಳನ್ನು ಸರಿಪಡಿಸಲಿ, ಕೊಂಕಣ ರೈಲ್ವೆ ಸಮಸ್ಯೆಗಳನ್ನು ಪರಿಹಾರ ಮಾಡಲಿ, ಸಿ ಆರ್ ಝೆಡ್ ಕಾನೂನನಿಗೆ ಗೋವಾ ಹಾಗೂ ಕೇರಳ ರಾಜ್ಯದಂತೆ ನಮ್ಮ ರಾಜ್ಯದಲ್ಲೂ ವಿನಾಯಿತಿ ನೀಡಲಿ, ಕಸ್ತೂರಿ ರಂಗನ್ ವರದಿಯ ಜಾರಿಯಾಗದಂತೆ ಕ್ರಮವಹಿಸಲಿ, ಪ್ರವಾಸೋದ್ಯಮಕ್ಕೆ ಒತ್ತು ನೀಡಲಿ, ಸಿ ಆರ್ ಝೆಡ್ ಮರಳುಗಾರಿಕೆಗೆ ಇರುವ ಸಮಸ್ಯೆಗಳನ್ನು ಪರಿಹಾರ ಮಾಡಲಿ, ಕೇಂದ್ರ ಸರ್ಕಾರ ಪ್ರಯೋಜಿತ ಉದ್ಯೋಗ ಅವಕಾಶ ಕಲ್ಪಿಸುವ ಉದ್ದಿಮೆ, ಉದ್ಯಮಗಳು ಕರಾವಳಿಗೆ ಬರಲಿ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ತರಲಿ, ಎಂ ಆರ್ ಪಿ ಲ್, ಅದಾನಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗಲಿ, ಬಂದರುಗಳನ್ನು ಅಭಿವೃದ್ಧಿ ಪಡಿಸಲಿ, ಉಡುಪಿ ಜಿಲ್ಲೆಗೆ ಒಂದು ವಿಮಾನ ನಿಲ್ದಾಣ ತರಲಿ ಇಂತಾ ಅದೆಷ್ಟೋ ಕೇಂದ್ರ ಸರ್ಕಾರದ ಕಾರ್ಯಕ್ರಮವನ್ನು ತರುವುದು, ಕೇಂದ್ರ ಸರ್ಕಾರ ನೀತಿಯಿಂದ ಕರಾವಳಿಯ ಜನಸಾಮಾನ್ಯರು ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರ ಮಾಡುವುದನ್ನು ಬಿಟ್ಟು ರಾಜಕಾರಣಕ್ಕೊಸ್ಕರ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವುದು ಬಿಜೆಪಿ ಶಾಸಕರು ಹಾಗೂ ಸಂಸದರ ನಾಚಿಕೆಗೇಡಿನ ರಾಜಕಾರಣ ಎಂದು ಕಿಡಿ ಕಾರದ್ದಲ್ಲದೇ, ಇದು ಹೀಗೆ ಮುಂದುವರಿದರೆ ಬಿಜೆಪಿ ಶಾಸಕರು ಹಾಗೂ ಸಂಸದರ ಮನೆ ಮುಂದೆ ಜನಸಾಮಾನ್ಯರು ಧರಣಿ ಕೂರುವ ದಿನ ದೂರವಿಲ್ಲವೆಂದು ಅವರು ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!