Saturday, October 12, 2024

ಅಯೋಧ್ಯೆಯಲ್ಲಿ ಬಿಜೆಪಿಯವರಿಂದ ಭಾರಿ ಭೂಕಬಳಿಕೆ : ಅಖಿಲೇಶ್‌ ಯಾದವ್‌ ಆರೋಪ

ಜನಪ್ರತಿನಿಧಿ (ಉತ್ತರ ಪ್ರದೇಶ) : ಅಯೋಧ್ಯೆಯಲ್ಲಿ ಭಾರಿ ಪ್ರಮಾಣದ ಭೂಹಗರಣ ನಡೆದಿದ್ದು, ಇದರಲ್ಲಿ ಆಡಳಿತ ಪಕ್ಷ ಬಿಜೆಪಿಯ ಸದಸ್ಯರು ಹಾಗೂ ಅಧಿಕಾರಿಗಳು ನೇರವಾಗಿ ಭಾಗಿಯಾಗಿದ್ದಾರೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಗಂಭೀರ ಆರೋಪ ಮಾಡಿದ್ದಾರೆ.

ಪಕ್ಷದ ಸಭೆಯೊಂದನ್ನು ಉದ್ದೇಸಿಸಿ ಮಾತನಾಡುತ್ತಾ ಯಾದವ್‌, ಅಯೋಧ್ಯೆ ಪವಿತ್ರ ನಗರದಲ್ಲಿ ಅಧಿಕಾರದಲ್ಲಿರುವವು ಭೂಕಬಳಿಕೆಯಲ್ಲಿ ತೊಡಗಿದ್ದಾರೆ. ಇದು ಬಿಜೆಪಿಯ ಬೃಹತ್‌ ಭ್ರಷ್ಟಾಚಾರದ ಭಾಗವಾಗಿದೆ. ಈ ಸಂಬಂಧಿಸಿದಂತೆ ಅಲ್ಲಿನ ಪತ್ರಿಕೆಯೊಂದರ ವರದಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ಅವರು ಹರಿಹಾಯ್ದಿದ್ದಾರೆ.

ಅಧಿಕಾರಿಗಳು ಆಡಳಿತಾರೂಢ ಬಿಜೆಪಿಯೊಂದಿಗೆ ಸೇರಿ ಲೂಟಿಯಲ್ಲಿ ತೊಡಗಿದ್ದಾರೆ. ಅಯೋಧ್ಯೆಯಲ್ಲಿ ಅಯೋಧ್ಯೆಯಲ್ಲಿ ನಡೆಯುತ್ತಿರುವ ಭೂಕಬಳಿಕೆಯ ಬಗ್ಗೆ ಸತ್ಯವನ್ನು ಬಯಲಿಗೆಳೆದ ನಮ್ಮ ಪಕ್ಷದ ನಾಯಕರಿಗೆ ಧನ್ಯವಾದ ಸಮರ್ಪಿಸುತ್ತೇನೆ. ಅಯೋಧ್ಯೆಯಲ್ಲೇ ಇಂತಹ ಘಟನೆ ನಡೆದಿದೆ ಎಂದರೆ ಉತ್ತರ ಪ್ರದೇಶದ ಇತರೆ ಜಿಲ್ಲೆಗಳಲ್ಲಿ ಇನ್ನೆಷ್ಟು ಇಂತಹ ಭೂಕಬಳಿಕೆ ನಡೆದಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಬಿಜೆಪಿಯವರು ಭಾಗಿಯಾಗಿರುವ ಹಗರಣದ ಭೂ ದಾಖಲೆಗಳು ನಮ್ಮ ಬಳಿ ಇವೆ. ಫಿರಂಗಿ ಅಭ್ಯಾಸಕ್ಕೆಂದು ಇದ್ದ ರಕ್ಷಣಾ ಇಲಾಖೆಯ ಭೂಮಿಯನ್ನೂ ಬಿಜೆಪಿ ಸದಸ್ಯರು ಮಾರಿದ್ದಾರೆ. ಬಡಜನರ ಭೂಮಿಗೆ ಯಾವುದೇ ಸಮಸ್ಯೆ ಉಂಟು ಮಾಡದಿದ್ದ ರೈಲ್ವೇ ಹಳಿ ಸಂಯೋಜನೆಗಳನ್ನೂ ಬದಲಾಯಿಸಿದ್ದಾರೆ ಎಂದು ಯಾದವ್‌ ಆರೋಪಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!