Monday, September 9, 2024

ರಸ್ತೆ ರಿಪೇರಿ ಬಗ್ಗೆ ಸಂಬಂಧಿತರ ಮೌನವೇಕೆ ? ಕುಂದಾಪುರದ ಶಾಸಕರ ಇಚ್ಛಾಶಕ್ತಿ ಕೊರತೆ : ವಿಕಾಸ್‌ ಹೆಗ್ಡೆ ಆಕ್ರೋಶ

ಜನಪ್ರತಿನಿಧಿ (ಕುಂದಾಪುರ) : ರಸ್ತೆ ರಿಪೇರಿ ಬಗ್ಗೆ ಸಂಬಂಧಿತರ ಮೌನವೇಕೆ. ಕುಂದಾಪುರ ಬಸ್ರೂರು ಮಾರ್ಗವಾಗಿ ಹಾದು ಹೋಗುವ ರಾಜ್ಯ ಹೆದ್ದಾರಿಯು ಕೋಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಚ್ ಎಂ ಟಿ ಬಳಿ ಅತ್ಯಂತ ಅಪಾಯಕಾರಿ ಹೊಂಡ, ಗುಂಡಿಗಳಿಂದ ಕೂಡಿ ಪದಾಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಮಳೆಗಾಲ ಪ್ರಾರಂಭವಾಗಿ ಹಲವಾರು ತಿಂಗಳುಗಳೇ ಕಳೆದರೂ ಸಹ ಲೋಕೋಪಯೋಗಿ ಇಲಾಖೆ ಹಾಗೂ ಸಂಬಂಧಿತ ಜನಪ್ರತಿನಿದಿನಗಳು ಈ ರಸ್ತೆ ರೀಪೇರಿ ಬಗ್ಗೆ ದಿವ್ಯ ಮೌನವಹಿಸಿರುವುದು ಅವರ ಕರ್ತವ್ಯಲೋಪವಲ್ಲದೆ ಮತ್ತೇನು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್‌ ವಕ್ತಾರ ಕೆ. ವಿಕಾಸ್‌ ಹೆಗ್ಡೆ ಆಕ್ರೋಶ ಹೊರ ಹಾಕಿದ್ದಾರೆ.

ಕುಂದಾಪುರದ ಶಾಸಕರು ಹಿಂದಿನ ಹಲವಾರು ಚುನಾವಣೆಗಳಲ್ಲಿ ಈ ರಸ್ತೆಯ ಅಭಿವೃದ್ಧಿಯ ಬಗ್ಗೆ ಹಲವಾರು ಸಭೆ, ಸಮಾರಂಭಗಳಲ್ಲಿ ಇದನ್ನು ರಾಜಕೀಯ ವಿಚಾರವಾಗಿ ಬಳಸಿಕೊಂಡವರು ಈಗ ಇಷ್ಟೊಂದು ಹದಗೆಟ್ಟ ರಸ್ತೆ ರಿಪೇರಿಯನ್ನೂ ಕೂಡ ಮಾಡದಿರುವುದು ಅವರ ಇಚ್ಛಾಶಕ್ತಿಯ ಕೊರತೆಯಾಗಿದೆ. ಈಗ ಸರ್ವ ಋತುವಿನಲ್ಲೂ ಉಪಯೋಗಿಸುವ ಡಾಂಬಾರು (ಬಿಟ್ಟುಮಿನ್) ಲಭ್ಯವಿರುವ ಈ ಕಾಲಗಟ್ಟದಲ್ಲಿ ಅತೀ ತುರ್ತಾಗಿ ಈ ರಸ್ತೆ ರೀಪೇರಿ ಮಾಡಬೇಕಾಗಿ ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!