spot_img
Wednesday, April 1, 2026
spot_img

ಹರಿಯಾಣದ ಎರಡು ವಿಧಾನಸಭಾ ಕ್ಷೇತ್ರಗಳಿಂದ ತಾರಾ ಕ್ರೀಡಾಪಟುಗಳು ಕಣಕ್ಕಿಳಿಯುವುದು ಫಿಕ್ಸ್‌ !? : ಪೂನಿಯಾ, ಫೋಗಟ್‌ ರನ್ನು ಭೇಟಿಯಾದ ರಾಗಾ !

ಜನಪ್ರತಿನಿಧಿ (ನವ ದೆಹಲಿ) : ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಇಬ್ಬರು ತಾರಾ ಕುಸ್ತಿಪಟುಗಳನ್ನು ಕಣಕ್ಕಿಳಿಸಬಹುದು ಎನ್ನುವ ಊಹಾಪೋಹಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು, ಈ ನಡುವೆ ಲೋಕಸಭಾ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಭಜರಂಗ್‌ ಪೂನಿಯಾ ಹಾಗೂ ವಿನೇಶ್‌ ಫೋಗಟ್‌ ಅವರನ್ನು ಇಂದು(ಬುಧವಾರ) ಭೇಟಿ ಮಾಡಿದ್ದಾರೆ.

ಈ ಭೇಟಿ ರಾಜಕೀಯ ವಲಯದಲ್ಲಿದ್ದ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಮಾತ್ರವಲ್ಲದೇ, ಪೂನಿಯಾ ಹಾಗೂ ಫೋಗಟ್‌ ಕಣಕ್ಕಿಳಿಸಬಹುದೇ ಎನ್ನುವುದರ ಬಗ್ಗೆ ಗುರುವಾರ ಉತ್ತರ ಸಿಗಬಹುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಹರಿಯಾಣ ಉಸ್ತುವಾರಿ ದೀಪಕ್‌ ಬಬಾರಿಯಾ ಮಂಗಳವಾದ ಹೇಳಿದ್ದರು.

ಇನ್ನು, ಕಾಂಗ್ರೆಸ್‌ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ರಾಹುಲ್‌ ಗಾಂಧಿ ಅವರು ವಿನೇಶ್‌ ಹಾಗೂ ಪೂನಿಯಾ ಅವರನ್ನು ಭೇಟಿಯಾಗಿರುವ ಫೋಟೊವನ್ನು ಹಂಚಿಕೊಂಡಿದೆ.

ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿಯು ಮಂಗಳವಾರದವರೆಗೆ 90 ವಿಧಾನಸಭಾ ಕ್ಷೇತ್ರಗಳ ಪೈಕಿ 66 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಇನ್ನೆರಡು ದಿನಗಳಲ್ಲಿ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಯ ಹೆಸರನ್ನು ಘೋಷಿಸಲಿದೆ ಎಂದು ಹೇಳಲಾಗಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!