Monday, September 9, 2024

ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ  ಪ್ರತಿಭಾ ಪ್ರದರ್ಶನ 

ಕುಂದಾಪುರ: ಸೆಪ್ಟೆಂಬರ್ 04 ರಂದು  ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭೆಯ ಅನಾವರಣಕ್ಕಾಗಿ  ಸಾಂಸ್ಕೃತಿಕ ತೇರು, ಕಲೆಗಳ ಮೇರು ಶೀರ್ಷಿಕೆಯಡಿಯಲ್ಲಿ  ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ  ನೆರವೇರಿತು.
  ದೀಪ ಪ್ರಜ್ವಲನೆಯ ಜೊತೆಗೆ ಸಾಂಸ್ಕೃತಿಕ ತೇರನ್ನು ಎಳೆಯುವುದರ  ಮೂಲಕ  ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಪ್ರತಿಭೆ ಜಗದಗಲ ಪಸರಿಸುವಂತಾಗಲಿ  ಎನ್ನುವ ಆಶಯದೊಂದಿಗೆ ವಿದ್ಯುಕ್ತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
      ಈ ಸಂದರ್ಭದಲ್ಲಿ ಯಾವ ವ್ಯಕ್ತಿಗೆ ಕಲೆ, ಸಾಹಿತ್ಯದ  ಬಗ್ಗೆ ಅರಿವಿರುವುದಿಲ್ಲವೋ ಅವರು ಪಶುವಿಗೆ ಸಮಾನ. ಶ್ರೀ ವೆಂಕಟರಮಣ ವಿದ್ಯಾಸಂಸ್ಥೆ  ಓದು ಅಂದರೆ ಇದಿಷ್ಟೇ ಅಲ್ಲ, ಅದಕ್ಕೆ ಪೂರಕವಾಗಿ  ಮೌಲ್ಯಯುತ ಪಠ್ಯೇತರ ಸಂಗತಿಗಳನ್ನು ನೀಡುವುತ್ತಿರುವುದರಿಂದ ಅದರ ಪ್ರಯೋಜನವನ್ನು ಪಡೆದುಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಂಡು ವಿದ್ಯಾರ್ಥಿಗಳು ಮುನ್ನುಗ್ಗುವಂತಾಗಲಿ, ಸಾಧಿಸುವ ಛಲವಿದ್ದರೆ  ಅದ್ಭುತ ಯಶಸ್ಸು ಕಾಣಬಹುದು ಎಂದು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ  ಶ್ರೀ ಸಿದ್ದಿವಿನಾಯಕ  ವಸತಿ ಶಾಲೆ ಹಟ್ಟಿಅಂಗಡಿ ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಹೇಳಿದರು.
 ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವಹಿಸಿದ ಸಂಸ್ಥೆಯ ಕಾರ್ಯದರ್ಶಿ ಶ್ರೀ. ಕೆ. ರಾಧಾಕೃಷ್ಣ ಶೆಣೈಯವರು ವಿದ್ಯಾರ್ಥಿಗಳು ತಮ್ಮಲ್ಲಿ ಅತ್ಯುತ್ತಮ ಗುಣ ನಡತೆ  ಅಳವಡಿಸಿಕೊಂಡು ಮುಂದಿನ ಸತ್ ಪ್ರಜೆಯಾಗಿ  ಮೂಡಿಬರುವಂತಾಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ಉಪಪ್ರಾಂಶುಪಾಲರಾದ  ಸುಜಯ್ ಕೋಟೆಗಾರ್, ರಸಾಯನಶಾಸ್ತ್ರ ಉಪನ್ಯಾಸಕರಾದ ರಮಾಕಾಂತ್  ರೇವಣಕರ್ ಉಪಸ್ಥಿತರಿದ್ದರು.
 15 ವಿದ್ಯಾರ್ಥಿ ತಂಡಗಳಿಂದ ವೈವಿಧ್ಯಮಯ  ಪ್ರತಿಭೆಗಳ ಪ್ರದರ್ಶನ ನಡೆಯಿತು.
   ಪ್ರಥಮ ಪಿಯು  ವಿದ್ಯಾರ್ಥಿನಿ  ಪಾತಿಮಾ ತೈಬಾ ಅತಿಥಿಗಳನ್ನು ಪರಿಚಯಿಸಿದರು , ಪ್ರಥಮ ಪಿಯು ವಿದ್ಯಾರ್ಥಿನಿ ಶುಕ್ತಿಜಾ ಸ್ವಾಗತಿಸಿದರು, ದ್ವಿತೀಯ  ಪಿಯು ವಿದ್ಯಾರ್ಥಿನಿ ಮೇಘನಾ ವಂದಿಸಿ, ದ್ವಿತೀಯ ಪಿಯು ವಿದ್ಯಾರ್ಥಿನಿ ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!