spot_img
Saturday, February 14, 2026
spot_img

ಉದ್ಯೋಗದ ನೇಮಕಾತಿಯನ್ನಾದರೂ ಪಾರದರ್ಶಕವಾಗಿ ನಡೆಸಿ : ಕಾಂಗ್ರೆಸ್‌ ವಿರುದ್ಧ ಬಿಜೆಪಿ ಟೀಕಾಸ್ತ್ರ

ಜನಪ್ರತಿನಿಧಿ (ಬೆಂಗಳೂರು) : ರಾಜ್ಯದ ಭ್ರಷ್ಟ ಸರ್ಕಾರ, ಹಗರಣ ನಡೆಸದೇ ಯಾವ ನೇಮಕಾತಿಯನ್ನೂ ಮಾಡುವುದಿಲ್ಲ ಎಂಬ ಕಾಂಗ್ರೆಸ್ಸಿನ ನಿಯಮ ಪಾಲಿಸುತ್ತಿದೆ ಎಂದು ಕಾಂಗ್ರೆಸ್‌ ವಿರುದ್ಧ ಬಿಜೆಪಿ ಟೀಕಿಸಿದೆ.

ಕೆಇಎ ಪರೀಕ್ಷೆಯಲ್ಲಿ ಅಕ್ರಮವಾಗಿದೆ ಎಂದು ಪತ್ರಿಕಾ ವರದಿಯೊಂದನ್ನು ಉಲ್ಲೇಖಿಸಿ ಕಾಂಗ್ರೆಸ್‌ ವಿರುದ್ಧ ಟೀಕಿಸಿದ ಬಿಜೆಪಿ, ಪ್ರತಿಯೊಂದು ನೇಮಕಾತಿಯಲ್ಲೂ ಹಗರಣ, ವಸೂಲಿ ನಡೆಸುತ್ತಾ ರಾಜ್ಯದ ವಿದ್ಯಾರ್ಥಿಗಳ ಉದ್ಯೋಗದ ಕನಸು ಮತ್ತು ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ಪಿಎಸ್‌ಐ ಪರೀಕ್ಷೆಯಲ್ಲಿ ಬ್ಲೂಟೂತ್‌ ಹಗರಣ ನಡೆಸಿ ಲಕ್ಷಾಂತರ ಅಭ್ಯರ್ಥಿಗಳ ಕನಸಿಗೆ ಕೊಳ್ಳಿಯಿಡಲು ಹೊರಟಿದ್ದ ಕಾಂಗ್ರೆಸ್‌ ಈಗ, ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಸಹಾಯಕ ಇಂಜಿನಿಯರ್‌ಗಳ ಪರೀಕ್ಷೆಯಲ್ಲೂ ಬ್ಲೂಟೂತ್‌ ಕೈಚಳಕ ತೋರಿಸಿದೆ. ಅದೂ ಕೂಡ ಕಲಬುರಗಿಯಲ್ಲೇ ನಡೆದಿರುವುದು ಕಾಂಗ್ರೆಸ್‌ ತನ್ನ ಹಳೇ ಚಾಳಿ ಬಿಟ್ಟಿಲ್ಲ ಎಂಬುದನ್ನು ತೋರುತ್ತಿದೆ ಎಂದು ದೂಷಿಸಿದೆ.

ಮಾತ್ರವಲ್ಲದೇ, ಸಿಎಂ ಸಿದ್ದರಾಮಯ್ಯ ಅವರೇ, ಈ ಕೂಡಲೇ ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ “ಕೈ”ಗಳಿಗೆ ಕೋಳ ತೊಡಿಸುವ ಕೆಲಸ ಮಾಡಿ. ನಿಮ್ಮ ಸ್ಕ್ಯಾಮ್‌ ಸರ್ಕಾರದಲ್ಲಿ ಒಂದೇ ಒಂದು ಉದ್ಯೋಗ ಸೃಷ್ಟಿಸುವ ಯೋಗ್ಯತೆಯಂತೂ ಇಲ್ಲ, ಇರುವ ಉದ್ಯೋಗದ ನೇಮಕಾತಿಯನ್ನಾದರೂ ಪಾರದರ್ಶಕವಾಗಿ ನಡೆಸಿ ಎಂದು ಒತ್ತಾಯಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!