Wednesday, September 11, 2024

ಕರಾವಳಿಯಲ್ಲೇ ಅತೀ ಹೆಚ್ಚು ಹಗರಣಗಳನ್ನು ಮೆತ್ತಿಕೊಂಡ ರಾಜಕಾರಣಿ ಸುನೀಲ್ ಕುಮಾರ್ : ವಿಕಾಸ್‌ ಹೆಗ್ಡೆ ತಪರಾಕಿ

ಜನಪ್ರತಿನಿಧಿ (ಉಡುಪಿ) : ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸಜ್ಜನ ರಾಜಕಾರಣಿ ಗೋಪಾಲ ಭಂಡಾರಿಯಂತಹ ಮೇರು ವ್ಯಕ್ತಿತ್ವದ ಶಾಸಕರನ್ನು ರಾಜ್ಯಕ್ಕೆ ನೀಡಿದ ಕ್ಷೇತ್ರ ಕಾರ್ಕಳ ವಿಧಾನಸಭಾ ಕ್ಷೇತ್ರ. ಇವರೆಲ್ಲರೂ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ, ರಾಜ್ಯದ ಅಭಿವೃದ್ಧಿಯ ಬಗ್ಗೆ ಯೋಚನೆ, ಯೋಜನೆಗಳನ್ನು ಮಾಡಿದರೆ, ಕಾರ್ಕಳ ಶಾಸಕರಾದ ಸುನೀಲ್ ಕುಮಾರ್ ರವರು ಮಾತ್ರ ವೋಟ್ ಬ್ಯಾಂಕ್ ರಾಜಕಾರಣ ಗಟ್ಟಿ ಮಾಡಿಕೊಳ್ಳಲು ಜಾತಿ ಜಾತಿಯ ನಡುವೆ, ಧರ್ಮ ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕೆಲಸದಲ್ಲಿ ನಿರತಾಗಿದ್ದಾರೆಂದು ಉಡುಪಿ  ಜಿಲ್ಲಾ ಕಾಂಗ್ರೆಸ್‌ ವಕ್ತಾರ ಕೆ. ವಿಕಾಸ್‌ ಹೆಗ್ಡೆ ಆಕ್ರೋಶ ಹೊರಹಾಕಿದ್ದಾರೆ.

ಸಜ್ಜನ ರಾಜಕಾರಣದ ಕರಾವಳಿ ಜಿಲ್ಲೆಯಲ್ಲಿ ಅತೀ ಹೆಚ್ಚು ಹಗರಣಗಳನ್ನು ಮೆತ್ತಿಕೊಂಡ ರಾಜಕಾರಣಿ ಸುನೀಲ್ ಕುಮಾರ್. ಕಾಂಗ್ರೆಸ್ ಸರ್ಕಾರವನ್ನು, ಕಾಂಗ್ರೆಸ್ ನಾಯಕರುಗಳನ್ನು ಟೀಕಿಸುವ ನೈತಿಕತೆ ಸುನೀಲ್ ಕುಮಾರ್ ಗೆ ಇಲ್ಲ. ಕಚೇರಿ ನಿರ್ಮಾಣಕ್ಕೆ ಸರ್ಕಾರಿ ಸಿಮೆಂಟ್ ಬಳಸಿದ ಆರೋಪ, ಪರಶುರಾಮ್ ಥೀಮ್ ಪಾರ್ಕ್ ನ ಕೋಟ್ಯಂತರ ರೂಪಾಯಿ ಹಗರಣ, ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಪಕ್ಷದ ಪದಾಧಿಕಾರಿಯ ಬಂಧನ, ಕ್ಷೇತ್ರದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ ಇದೆಲ್ಲವೂ ಸುನೀಲ್ ಕುಮಾರ್ ಶಾಸಕರಾದ ಮೇಲೆ ಆದದ್ದು ಎಂದು ಅವರು ಕಿಡಿ ಕಾರಿದ್ದಾರೆ.

ಆದರೆ ಇದ್ಯಾವುದಕ್ಕೂ ಉತ್ತರಿಸದ ಸುನೀಲ್ ಕುಮಾರ್ ಕಾಂಗ್ರೆಸ್ ಪಕ್ಷದ ಬಗ್ಗೆ, ಕಾಂಗ್ರೆಸ್ ನಾಯಕರುಗಳ ಬಗ್ಗೆ ಟೀಕಿಸುವುದು ಅವರ ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ. ಸುನೀಲ್ ಕುಮಾರ್ ಗೆ ನೈತಿಕತೆ, ಸಿದ್ಧಾಂತವಿದ್ದರೆ ಹಲವು ಆರೋಪಗಳನ್ನು ಎದುರಿಸುತ್ತಿರುವ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಕಾಸ್‌ ಪತ್ರಿಕಾ ಹೇಳಿಕೆಯ ಮೂಲಕ ಒತ್ತಾಯಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!