Wednesday, September 11, 2024

ಕುಂದಾಪುರ ಪುರಸಭೆ ಅಧ್ಯಕ್ಷರಾಗಿ ಮೋಹನದಾಸ್ ಶೆಣೈ, ಉಪಾಧ್ಯಕ್ಷರಾಗಿ ವನಿತಾ ಬಿಲ್ಲವ ಆಯ್ಕೆ

ಕುಂದಾಪುರ: ಕುಂದಾಪುರ ಪುರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಅಭ್ಯರ್ಥಿ ಮೋಹನದಾಸ್ ಶೆಣೈ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಿಜೆಪಿಯ ವನಿತಾ ಬಿಲ್ಲವ ಆಯ್ಕೆಗೊಂಡಿದ್ದಾರೆ.

ಗುರುವಾರ ಪುರಸಭೆಯ ಅಧ್ಯಕ್ಷರು ಉಪಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಮೋಹನದಾಸ್ ಶೆಣೈ ಕಾಂಗ್ರೆಸ್ ನಿಂದ ಚಂದ್ರಶೇಖರ ಖಾರ್ವಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ವನಿತಾ ಬಿಲ್ಲವ, ಪಕ್ಷೇತರ ಅಭ್ಯರ್ಥಿ ಕಮಲ ಮಂಜುನಾಥ ಪೂಜಾರಿ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಕಮಲ ಮಂಜುನಾಥ ಅವರನ್ನು ಬೆಂಬಲಿಸಿತು.

ಚುನಾವಣೆಯಲ್ಲಿ ಬಿಜೆಪಿ ಮೋಹನದಾಸ ಶೆಣೈ ಹಾಗೂ ವನಿತಾ ಬಿಲ್ಲವ 16 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದರು. ಚಂದ್ರಶೇಖರ ಖಾರ್ವಿ ಹಾಗೂ ಕಮಲ ಮಂಜುನಾಥ 8ಮತಗಳನ್ನು ಪಡೆದರು. ಕಾಂಗ್ರೆಸ್ ಸದಸ್ಯೆ ಲಕ್ಷ್ಮೀಬಾಯಿ ಗೈರುಹಾಜರಾಗಿದ್ದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮತ ಚಲಾಯಿಸಿದರು.

ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಶೋಭಾಲಕ್ಷ್ಮೀ ಚುನಾವಣಾ ಕರ್ತವ್ಯ ನಿರ್ವಹಿಸಿದರು. ಮುಖ್ಯಾಧಿಕಾರಿ ಆನಂದ ಜೆ ಉಪಸ್ಥಿತರಿದ್ದರು.

ಕುಂದಾಪುರ ಪುರಸಭೆಯಲ್ಲಿ ಒಟ್ಟು 23 ಸದಸ್ಯರಿದ್ದು, 14 ಬಿಜೆಪಿ,8 ಕಾಂಗ್ರೆಸ್, 1 ಪಕ್ಷೇತರ ಸದಸ್ಯರಿದ್ದಾರೆ. 2018ರಲ್ಲಿ ಚುನಾವಣೆ ನಡೆದಿತ್ತು.ಚುನಾವಣೆ ನಡೆದು ಎರಡು ವರ್ಷ ಎರಡು ತಿಂಗಳ ಬಳಿಕ 2020 ನವಂಬರ್‌ನಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿತ್ತು.

ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೋಹನದಾಸ ಶೆಣೈ ಕುಂದಾಪುರ ಸೆಂಟ್ರಲ್ ವಾರ್ಡ್ ಪ್ರತಿನಿಧಿಸುತ್ತಿದ್ದಾರೆ. ಅವರು 5ನೇ ಬಾರಿಗೆ ಪುರಸಭೆಯ ಸದಸ್ಯರಾಗಿದ್ದಾರೆ. ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವನಿತಾ ಬಿಲ್ಲವ ಇದೇ ಪ್ರಥಮ ಬಾರಿಗೆ ಪುರಸಭೆ ಸದಸ್ಯರಾಗಿದ್ದಾರೆ. ಅವರು ಶಾಂತಿನಿಕೇತನ ವಾರ್ಡ್ ಪ್ರತಿನಿಧಿಸುತ್ತಿದ್ದಾರೆ. ಪುರಸಭೆಯ ಈ ಅವಧಿ ಇನ್ನೂ 14 ತಿಂಗಳು ಇದೆ.

ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಮಂಡಲ ಅಧ್ಯಕ್ಷ ಸುರೇಶ ಶೆಟ್ಟಿ ಗೋಪಾಡಿ, ಪಕ್ಷದ ಪದಾಧಿಕಾರಿಗಳು, ಸಾರ್ವಜನಿಕರು ಅಭಿನಂದಿಸಿದರು.

ನೂತನ ಅಧ್ಯಕ್ಷರದ ಮೋಹನದಾಸ ಶೆಣೈ ಮಾಧ್ಯಮದವರೊಂದಿಗೆ ಮಾತನಾಡಿ ಪುರಸಭೆ ಅಧ್ಯಕ್ಷನನ್ನಾಗಿ ಮೂರನೇ ಬಾರಿಗೆ ಆಯ್ಕೆ ಮಾಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ 14 ತಿಂಗಳ ಅವಧಿಯಲ್ಲಿ ಈ ಹಿಂದಿನ ಅವಧಿಯಲ್ಲಿ ನಾನು ಅಧ್ಯಕ್ಷನಾಗಿ ನೀಡಿದ ಅಡಳಿತಕ್ಕಿಂತಲೂ ಉತ್ತಮ ಆಡಳಿತ ನೀಡುತ್ತೇನೆ ಎಂದರು. ಉಪಾಧ್ಯಕ್ಷ ವನಿತಾ ಬಿಲ್ಲವ ಆಯ್ಕೆ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!