Wednesday, September 11, 2024

ಕಾರ್ಕಳ ಅತ್ಯಾಚಾರ ಪ್ರಕರಣ | ಇಂತಹ ಸಂದರ್ಭವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಚೀಪ್‌ ಮೆಂಟಾಲಿಟಿ ಕಾಂಗ್ರೆಸ್‌ ಗೆ ಇಲ್ಲ : ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ

ಡ್ರಗ್ಸ್‌ ಜಾಲವನ್ನು ಪೊಲೀಸ್‌ ಇಲಾಖೆ ಮಟ್ಟ ಹಾಕಲಿ : ಮುನಿಯಾಲು ಒತ್ತಾಯ 

ಜನಪ್ರತಿನಿಧಿ (ಕಾರ್ಕಳ) : ಕಾರ್ಕಳದಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ ಖಂಡನೀಯವಾದದ್ದು. ಜಿಲ್ಲೆಯಾದ್ಯಂತ ಇರುವ ಡ್ರಗ್ಸ್‌ ಜಾಲ ನಿಜಕ್ಕೂ ಆತಂಕಕಾರಿಯಾಗಿದೆ. ಇಂತಹ ಸಮಾಜ ಘಾತುಕ ಜಾಲಗಳನ್ನು ನಿರ್ಮೂಲನೆ ಮಾಡುವಲ್ಲಿ ಪೊಲೀಸ್‌ ಇಲಾಖೆ ಕಾರ್ಯ ನಿರ್ವಹಿಸಲಿ, ಜನಜಾಗೃತಿ ಮೂಡಿಸಲಿ ಎಂದು ಕಾರ್ಕಳ ಕಾಂಗ್ರೆಸ್‌ ಮುಖಂಡ ಉದಯ್‌ ಕುಮಾರ್‌ ಶೆಟ್ಟಿ ಮುನಿಯಾಲು ಹೇಳಿದ್ದಾರೆ.

ತಪ್ಪು ಯಾರೇ ಮಾಡಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಲಿ. ನಾವು ಎಂದಿಗೂ ಶಾಂತಿ, ನೆಮ್ಮದಿ, ಸೌಹಾರ್ದತೆ, ಸಹಬಾಳ್ವೆಯನ್ನು ಬಯಸುವವರು. ಇಂತಹ ಅಮಾನವೀಯ ಘಟನೆ ಆಗಿರುವ ಸಂದರ್ಭದಲ್ಲಿಯೂ ರಾಜಕೀಯ ಮಾಡುವುದಕ್ಕೆ ಕಾಂಗ್ರೆಸ್‌ ಮುಂದಾಗುವುದಿಲ್ಲ. ಬಿಜೆಪಿಗೆ ನಮ್ಮ ಪಕ್ಷದ ಮೇಲೆ, ನಮ್ಮ ಆಡಳಿತದ ಮೇಲೆ ಸುಖಾಸುಮ್ಮನೆ ಆರೋಪ ಮಾಡುವುದನ್ನು ಬಿಟ್ಟರೇ ಬೇರೇನೂ ಕೆಲಸವಿಲ್ಲ. ಅವರು ರಾಜಕೀಯ ಮಾಡುತ್ತಲೇ ಇರಲಿ. ನಾವು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಆಗ್ರಹಿಸುತ್ತೇವೆ ಎಂದು ಅವರು ಉಡುಪಿ ಜಿಲ್ಲಾ ಬಿಜೆಪಿಯ ಆರೋಪಕ್ಕೆ ತಿರುಗೇಟು ನೀಡಿದರು.

ಸಂತ್ರಸ್ತೆಗೆ ನ್ಯಾಯ ದೊರಕಿಸುವ ದೃಷ್ಟಿಯಲ್ಲಿ ಕಾಂಗ್ರೆಸ್‌ ಕೆಲಸ ಮಾಡಲಿದೆ. ಇಂತಹ ಸಂದರ್ಭವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಚೀಪ್‌ ಮೆಂಟಾಲಿಟಿ ಕಾಂಗ್ರೆಸ್‌ ಗೆ ಇಲ್ಲ. ಸಂತ್ರಸ್ತೆಯ ಕುಟುಂಬದ ಜೊತೆಗೆ ನಾವು ನಿಲ್ಲಲಿದ್ದೇವೆ. ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಗೆ ನಾವು ಆಗ್ರಹಿಸುತ್ತೇವೆ. ಈ ಸಂಬಂಧಿಸಿದಂತೆ ಈಗಾಗಲೇ ಗೃಹ ಸಚಿವರಲ್ಲಿ ಮಾತನಾಡಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದೇನೆ. ಯಾವುದೇ ಕಾರಣಕ್ಕೂ ಅತ್ಯಾಚಾರಿಗಳನ್ನು ತಪ್ಪಿಸಿಕೊಳ್ಳುವುದಕ್ಕೆ ಬಿಡುವುದಿಲ್ಲ. ಅತ್ಯಾಚಾರಿಗಳಿಗೆ ತಕ್ಕ ಕಠಿಣ ಶಿಕ್ಷೆಯಾಗಲೇ ಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಜಿಲ್ಲೆಯಾದ್ಯಂತ ಡ್ರಗ್ಸ್‌ ಜಾಲ ರಾಜಾರೋಷವಾಗಿ ನಡೆಯುತ್ತಿದೆ ಎಂಬ ಮಾಹಿತಿಯೂ ಇದೆ. ನಮಗೆ ನಮ್ಮ ಪೊಲೀಸ್‌ ಇಲಾಖೆಯ ಮೇಲೆ ನಂಬಿಕೆ ಇದೆ. ಡ್ರಗ್ಸ್‌ ಜಾಲವನ್ನು ಪೊಲೀಸ್‌ ಇಲಾಖೆ ಮಟ್ಟ ಹಾಕಲಿ, ಈ ಬಗ್ಗೆ ಜನಜಾಗೃತಿ ಮೂಡಿಸಲಿ. ಡ್ರಗ್ಸ್‌ ಜಾಲದಂತಹ ಸಮಾಜ ಘಾತುಕ ಶಕ್ತಿಗಳ ಬೆನ್ನೆಲುಬಾಗಿ ಎಂತಹ ಪ್ರಭಾವಿಯೇ ಅದನ್ನು ಮಟ್ಟ ಹಾಕಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪೊಲೀಸ್‌ ಇಲಾಖೆ ಕಾರ್ಯ ನಿರ್ವಹಿಸಲಿ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರೂ ಕೂಡ ಪೊಲೀಸ್‌ ಇಲಾಖೆಯ ಜೊತೆಗೆ ನಿಲ್ಲಬೇಕಿರುವ ಅಗತ್ಯವಿದೆ ಎಂದು ಅವರು ಹೇಳಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!