Wednesday, September 11, 2024

ಕಾರ್ಕಳ ಅತ್ಯಾಚಾರ ಪ್ರಕರಣ | ಡ್ರಗ್ಸ್‌ ಜಾಲ ಮಟ್ಟ ಹಾಕದಿದ್ದರೇ ಜಿಲ್ಲೆಯಾದ್ಯಂತ ಪ್ರತಿಭಟನೆ : ಬಿಜೆಪಿ ಯುವಮೋರ್ಚಾ ಎಚ್ಚರಿಕೆ

ಜನಪ್ರತಿನಿಧಿ (ಉಡುಪಿ) : ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಯುವತಿಯೋರ್ವಳ ಮೇಲೆ ನಾಲ್ಕು ಮಂದಿ ಯುವಕರ ತಂಡವೊಂದು ಅಮಲು ಪದಾರ್ಥ ನೀಡಿ ಅತ್ಯಾಚಾರವೆಸಗಿರುವ ಘಟನೆ ಅತ್ಯಂತ ಹೀನ ಕೃತ್ಯವಾಗಿದ್ದು, ಈ ದುಷ್ಕೃತ್ಯದ ಹಿಂದೆ ಲವ್‌ ಜಿಹಾದ್‌ ಸಂಚು ಕೂಡ ಇರುವ ಬಗ್ಗೆ ಸಂದೇಹವಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಯುವಾ ಮೋರ್ಚಾ ಖಂಡನೆ ವ್ಯಕ್ತಪಡಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಬಿಜೆಪಿ ಯುವಾ ಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್‌ ಶೆಟ್ಟಿ ಬಿಲ್ಲಾಡಿ, ಕಾನೂನು ಸುವ್ಯವಸ್ಥೆಯನ್ನೇ ಇಂತೆಲ್ಲಾ ಘಟನೆಗಳು ಪ್ರಶ್ನಿಸುವ ಹಾಗೆ ಮಾಡಿದೆ. ಆರೋಪಿಗಳಿಗೆ ಬೆಂಬಲವಾಗಿ ನಿಂತವರು ಯಾರು ? ಲವ್‌ ಜಿಹಾದ್‌ ಸಂಚಿಗೆ ಸಹಕರಿಸುತ್ತಿರುವ ವ್ಯವಸ್ಥೆಗಳು ಯಾರು ಎನ್ನುವ ಬಗ್ಗೆ ಸಮಗ್ರ ತನಿಖೆ ಆಗಲಿ ಎಂದು ಅವರು ಒತ್ತಾಯಿಸಿದ್ದಾರೆ.

ಕಾಂಗ್ರೆಸ್‌ ಆಡಳಿತದಲ್ಲಿರುವಾಗಲೇ ಇಂತಹ ಘಟನೆಗಳು ಮತ್ತೆ ಮತ್ತೆ ಆಗುತ್ತಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಲವ್‌ ಜಿಹಾದ್‌ ಹಾಗೂ ಜಿಲ್ಲೆಯಾದ್ಯಂತ ಇರುವ ಡ್ರಗ್ಸ್‌ ಜಾಲವನ್ನು ಮಟ್ಟ ಹಾಕದೇ ಇದ್ದರೇ ಯುವ ಮೋರ್ಚಾ ಜಿಲ್ಲೆಯಾದ್ಯಂತ ಪ್ರತಿಭಟನೆ ಮಾಡಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!