Wednesday, September 11, 2024

ಡ್ರಗ್ಸ್‌ ಜಾಲದಲ್ಲಿ ತೊಡಗಿಸಿಕೊಂಡವರ ಪರ ರಾಜಕೀಯ ಪ್ರಭಾವ ಬೀರುವವರ ವಿರುದ್ಧವೂ ಕಾನೂನು ಕ್ರಮವಾಗಲಿ : ಜೆಪಿ ಹೆಗ್ಡೆ ಆಕ್ರೋಶ

 ಡ್ರಗ್ಸ್‌ ಜಾಲ ಹಳ್ಳಿಹಳ್ಳಿಗೆ ಹಬ್ಬಿರುವುದು ಆತಂಕಕಾರಿ : ಜೆಪಿ ಹೆಗ್ಡೆ ಕಳವಳ

ಜನಪ್ರತಿನಿಧಿ (ಉಡುಪಿ) : ಕಳೆದ ಆದಿತ್ಯವಾರ ಕುಂದಾಪುರದ ವಕ್ವಾಡಿಯಲ್ಲಿ ನಡೆದಿರುವ ಘಟನೆ, ನಿನ್ನೆ(ಶುಕ್ರವಾರ) ಕಾರ್ಕಳದಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣ ಖಂಡನೀಯ. ಡ್ರಗ್ಸ್‌, ಗಾಂಜಾ ಜಾಲ ಇಡೀ ಉಡುಪಿ ಜಿಲ್ಲೆಯಾದ್ಯಂತ ಹಬ್ಬಿದೆ. ಹಳ್ಳಿ ಹಳ್ಳಿಗಳಲ್ಲಿ ಡ್ರಗ್ಸ್‌, ಗಾಂಜಾ ಹಾವಳಿ ಹೆಚ್ಚಾಗುತ್ತಿರುವುದು ನಿಜಕ್ಕೂ ಆಂತಕಕಾರಿಯಾಗಿದೆ ಎಂದು ಮಾಜಿ ಸಂಸದ, ಕಾಂಗ್ರೆಸ್‌ ನಾಯಕ ಕೆ. ಜಯಪ್ರಕಾಶ್‌ ಹೆಗ್ಡೆ ಕಳವಳ ವ್ಯಕ್ತಪಡಿಸಿದ್ದಾರೆ.

ತಪ್ಪಿತಸ್ಥರಿಗೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್‌ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಡಾ. ಅರುಣ್‌ ಕೆ. ಅವರು ಅಧಿಕಾರ ವಹಿಸಿಕೊಂಡ ಮೇಲೆ ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಬಿಗಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎನ್ನುವುದು ಸಮಾಧಾನಕರ ವಿಷಯ. ಇನ್ನಷ್ಟು ಪೂರಕ ಗುಪ್ತಚರ ವರದಿ ಪಡೆದುಕೊಳ್ಳುವುದರ ಮೂಲಕ ಇಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರ ವಿರುದ್ಧ ಕಠಿಣ ಕಾನೂನಿನ ಕ್ರಮ ವಹಿಸುವಂತೆ ಈಗಾಗಲೇ ಎಸ್‌ಪಿ ಅವರೊಂದಿಗೆ ಮಾತನಾಡಿದ್ದೇನೆ. ಎಸ್‌ಪಿ ಅವರ ಮೇಲೆ ನಂಬಿಕೆ ಇದೆ. ಈಗಾಗಲೇ ಜಿಲ್ಲೆಯಾದ್ಯಂತ ನಡೆಯುತ್ತಿರುವ ಡ್ರಗ್ಸ್‌ ಜಾಲದ ವಿರುದ್ಧ ಅವರು ಬಲೆ ಬೀಸಿದ್ದಾರೆ. ಸಮರ್ಥವಾಗಿ ಡ್ರಗ್ಸ್‌ ಹಾವಳಿಯನ್ನು ನಿಯಂತ್ರಿಸುವಲ್ಲಿ ನಮ್ಮ ಪೊಲೀಸ್‌ ಇಲಾಖೆ ಕಾರ್ಯನಿರ್ವಹಿಸಲಿದೆ ಎನ್ನುವುದರ ಬಗ್ಗೆ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಡ್ರಗ್ಸ್‌, ಗಾಂಜಾ ಜಾಲಗಳಲ್ಲಿ ತೊಡಗಿಸಿಕೊಂಡವರ ಪರ ರಾಜಕೀಯ ಪ್ರಭಾವ ಬೀರುವವರ ವಿರುದ್ಧವೂ ಪೊಲೀಸ್‌ ಇಲಾಖೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಿ. ಸಮಾಜಕ್ಕೆ ಕಂಟಕಪ್ರಾಯವಾದ ಇಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡವರ ಪರವಾಗಿ ಯಾರೇ ನಿಂತರೂ ತಪ್ಪು. ತಪ್ಪಿತಸ್ಥರನ್ನು ರಕ್ಷಿಸುವುದಕ್ಕೆ ಪ್ರಯತ್ನಿಸುವವರು ಎಂಥಹ ರಾಜಕೀಯ ಪ್ರಭಾವಿಗಳೇ ಆಗಿದ್ದರೂ ಪೊಲೀಸರು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಇಂತಹ ಘಟನೆಗಳು ಜಿಲ್ಲೆಯಲ್ಲಿ ಮರುಕಳಿಸದಂತೆ ಪೊಲೀಸ್‌ ಇಲಾಖೆ ಕಾರ್ಯನಿರ್ವಹಿಸಲಿ, ಜನಜಾಗೃತಿ ಮೂಡಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!