Monday, September 9, 2024

ಆ.17ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಗಜಗಟ್ಟಿ ಕಲಾವಿದರಿಂದ ಸ್ಪರ್ಧಾತ್ಮಕ ಜೋಡಾಟ!

ಬೆಂಗಳೂರು ಅರಮನೆ ಮೈದಾನದಲ್ಲಿ ಕುಂದಾಪ್ರ ಕನ್ನಡ ಹಬ್ಬದ ಪ್ರಯುಕ್ತ ಆಗಸ್ಟ್ 17ರಂದು ಸಂಜೆ 5 ಗಂಟೆಗೆ ಗಜಗಟ್ಟಿ ಕಲಾವಿದರಿಂದ ಸ್ಪರ್ಧಾತ್ಮಕ ಜೋಡಾಟ ನಡೆಯಲಿದೆ. ಒಂದು ಕಾಲದಲ್ಲಿ ಕರಾವಳಿಯ ಯಕ್ಷಪ್ರೇಮಿಗಳ ರೋಮಾಂಚಕ ಗೊಳಿಸುತ್ತಿದ್ದ ಯಕ್ಷಗಾನ ಜೋಡಾಟಗಳು ಇತ್ತೀಚೆಗೆ ಮರೆಯಾಗಲ್ಪಟ್ಟಿವೆ. ಹಳೆಯ ಪರಂಪರೆಯನ್ನು ನೆನಪಿಸುವ ಸಲುವಾಗಿ ಯಕ್ಷರಸದೌತಣವನ್ನು ರಾಜಧಾನಿಯಲ್ಲಿ ನೀಡಲು ಸಜ್ಜಾಗಿದೆ.

‘ಅಭಿಮನ್ಯು ಕಾಳಗ – ಮೀನಾಕ್ಷಿ ಕಲ್ಯಾಣ’ ಪ್ರಸಂಗಗಳು ಪ್ರದರ್ಶನಗೊಳ್ಳಲಿದೆ. ಈ ಎರಡು ಪ್ರಸಂಗಗಳು ಜೋಡಾಟಕ್ಕೆ ಹೇಳಿ ಮಾಡಿಸಿದ ಪ್ರಸಂಗಗಳು. ಹಿಂದೆ ಬಹುತೇಕ ಜೋಡಾಟಗಳಲ್ಲಿ ಈ ಎರಡು ಪ್ರಸಂಗಗಳೆ ಹೆಚ್ಚಾಗಿ ಪ್ರದರ್ಶನಗೊಳ್ಳುತ್ತಿದ್ದ ಜನಪ್ರಿಯ ಪ್ರಸಂಗಗಳು. ಇಂಥಹ ಪ್ರಸಿದ್ಧ ಪ್ರಸಂಗಗಳು ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮತ್ತೆ ರಂಗಸ್ಥಳದಲ್ಲಿ ವಿಜೃಂಭಿಸಲಿವೆ.

ಜೋಡಾಟದ ತೀರ್ಪುಗಾರರಾಗಿ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ನಾರಾಯಣ ಶೆಟ್ಟಿ ಕಮಲಶಿಲೆ, ಸುಜಯೀಂದ್ರ ಹಂದೆ ಭಾಗವಹಿಸಲಿದ್ದಾರೆ.

ಒಂದು ಮೇಳದ ಯಜಮಾನರು: ಆಂದ್ರು ಡಿಸಿಲ್ವ ಹಂದಾಡಿ, ಮೇಳದ ಪ್ರತಿನಿಧಿ: ಸುರೇಶ ಶೆಟ್ಟಿ ಶಂಕರನಾರಾಯಣ, ಚೌಕಿಯ ಉಸ್ತುವಾರಿ: ಸಂತೋಷ್ ಶೆಟ್ಟಿ ಮೂಡುಬಗೆ ಅವರದ್ದು.

ಗಣಪತಿ ಸ್ತುತಿ: ಸುರೇಶ ಶೆಟ್ಟಿ ಶಂಕರನಾರಾಯಣ, ಬಾಲಗೋಪಾಲರು: ರಿಧಿ, ಸಾನ್ವಿ, ಭಾಗವತರು ರಾಘವೇಂದ್ರ ಆಚಾರ್ಯ ಜನ್ಸಾಲೆ, ಮದ್ದಳೆ -ಸುನಿಲ್ ಭಂಡಾರಿ, ಚಂಡೆ-ಸುಜನ್ ಹಾಲಾಡಿ.

‘ಅಭಿಮನ್ಯು ಕಾಳಗ’ದ ದ್ರೋಣನಾಗಿ ನರಾಡಿ ಭೋಜರಾಜ ಶೆಟ್ಟಿ, ಅಭಿಮನ್ಯು ೧: ನಿತೀನ್ ಶೆಟ್ಟಿ ಸಿದ್ಧಾಪುರ, ಅಭಿಮನ್ಯು ೨: ವಿಶ್ವನಾಥ್ ಆಚಾರ್ಯ ತೊಂಬಟ್ಟು, ಸುಭದ್ರೆ: ಪಂಜು ಪೂಜಾರಿ ಬಗ್ವಾಡಿ, ಕೌರವ: ಉದಯ್ ಕೊಠಾರಿ, ಧರ್ಮರಾಯ: ಪ್ರಶಾಂತ್ ವರ್ಧನ, ಕರ್ಣ: ರಾಘವೇಂದ್ರ ಮಾಗೋಡು, ದುಶ್ಯಾಸನ: ವಿಘ್ನೇಶ್ ಪೈ ಸಿದ್ಧಾಪುರ

‘ಮೀನಾಕ್ಷಿ ಕಲ್ಯಾಣ’ದಲ್ಲಿ ಭಾಗವತರು-ಗಣೇಶ ನಾಯ್ಕ್ ಯಡಮೊಗೆ, ಮದ್ದಳೆ-ಶಂಕರ ಭಾಗವತ ಯಲ್ಲಾಪುರ, ಚಂಡೆ-ರಾಕೇಶ್ ಮಲ್ಯ.

ಪಾತ್ರವರ್ಗ: ಈಶ್ವರನಾಗಿ ರಾಮಚಂದ್ರ ಹೆಗಡೆ ಕೊಂಡದಕುಳಿ, ಮೀನಾಕ್ಷಿ: ಶಶಿಕಾಂತ ಶೆಟ್ಟಿ ಕಾರ್ಕಳ, ಶೂರಸೇನ: ಪ್ರಸನ್ನ ಶೆಟ್ಟಿಗಾರ್, ಪದ್ಮಗಂಧಿನಿ: ರಕ್ಷಿತ್ ಪಡ್ರೆ, ಮೀನಾಕ್ಷಿ ಮಂತ್ರಿ: ಕಾರ್ತಿಕ್ ಕಣ್ಣಿ, ಪ. ಮಂತ್ರಿ: ಸಂತೋಷ್ ಹೆಂಗವಳ್ಳಿ, ದೂತ:ರವೀಂದ್ರ ದೇವಾಡಿಗ ಕಮಲಶಿಲೆ, ನಂದಿ: ವಿಘ್ನೇಶ್ ಪೈ ಸಿದ್ಧಾಪುರ, ನಾರದ: ಸುನಿಲ್ ಹೊಲಾಡು, ಶೂರಸೇನ ಬಲ: ನಂದನ್ ಶೆಟ್ಟಿ ಆಗುಂಬೆ, ಶೂರಸೇನ ಬಲ: ರವೀಶ್ ಹೆಗಡೆ ಐನಬೈಲ್.

ಇನ್ನೊಂದು ಮೇಳದ ಯಜಮಾನರು: ರಾಘವೇಂದ್ರ ಮಲ್ಯ ಸಿದ್ಧಾಪುರ, (ಮನ್ವ ವೆಂಚರ್ಸ್), ಮೇಳದ ಪ್ರತಿನಿಧಿ: ವಿನಯ್ ಆರ್. ಶೆಟ್ಟಿ ಚೌಕಿಯ ಉಸ್ತುವಾರಿ: ಚಂದ್ರಶೇಖರ ಶೆಟ್ಟಿ ಕೊಡ್ಲಾಡಿ ಅವರದ್ದು.

ಗಣಪತಿ ಸ್ತುತಿ: ವಿನಯ್ ಆರ್. ಶೆಟ್ಟಿ, ಬಾಲಗೋಪಾಲರು: ಸಮೃದ್ಧಿ, ವರ್ಣ. ಭಾಗವತರು- ಉದಯ್ ಪೂಜಾರಿ ಹೊಸಾಳ್ , ಮದ್ದಳೆ-ಶ್ರೀನಿವಾಸ ಪ್ರಭು, ಚಂಡೆ- ಅಕ್ಷಯ್ ಆಚಾರ್ಯ.

ಪಾತ್ರವರ್ಗ: ಅಭಿಮನ್ಯು ೧: ಪ್ರಕಾಶ್ ಮೊಗವೀರ ಕಿರಾಡಿ, ಅಭಿಮನ್ಯು ೨: ವಿಶ್ವನಾಥ್ ಪೂಜಾರಿ ಹೆನ್ನಾಬೈಲ್, ದ್ರೋಣ: ಕೋಟ ಸುರೇಶ ಬಂಗೇರ, ಧರ್ಮರಾಯ: ನರಸಿಂಹ ಗಾಂವ್ಕರ್, ಕೌರವ: ನಾಗರಾಜ್ ಭಂಡಾರಿ, ದುಶ್ಯಾಸನ: ಪ್ರಭಾಕರ ಶೆಟ್ಟಿ ಬೆಳಂಜೆ, ಸುಭದ್ರೆ: ವಂಡಾರು ಗೋವಿಂದ ಮೊಗವೀರ, ಕರ್ಣ: ರಾಘವೇಂದ್ರ ಮೊಗವೀರ ಪೇತ್ರಿ.

ಮೀನಾಕ್ಷಿ ಕಲ್ಯಾಣದಲ್ಲಿ ಭಾಗವತರು-ಗಣೇಶ್ ಹೆಬ್ರಿ, ಮದ್ದಳೆ- ಶಶಾಂಕ್ ಆಚಾರ್ಯ , ಚಂಡೆ-ಶಿವಾನಂದ ಕೋಟ. ಪಾತ್ರವರ್ಗದಲ್ಲಿ ಈಶ್ವರ: ಕೃಷ್ಣ ಯಾಜಿ ಬಳ್ಕೂರು, ಮೀನಾಕ್ಷಿ: ನೀಲ್ಕೋಡು ಶಂಕರ ಹೆಗಡೆ, ಶೂರಸೇನ: ಜಲವಳ್ಳಿ ವಿದ್ಯಾದರ್ ರಾವ್, ಪದ್ಮಗಂಧಿನಿ: ಸುಧೀರ ಉಪ್ಪೂರು, ಮೀನಾಕ್ಷಿ ಮಂತ್ರಿ:ಶಿಥಿಲ್ ಐರಬೈಲ್, ಪ. ಮಂತ್ರಿ: ಪ್ರದೀಪ್ ನಾರ್ಕಳಿ, ದೂತ: ಪುರಂದರ ಮೂಡ್ಕಣಿ, ನಂದಿ: ಪ್ರಭಾಕರ ಶೆಟ್ಟಿ ಬೆಳಂಜೆ. ನಾರದ: ನರಸಿಂಹ ಗಾಂವ್ಕರ್, ಶೂರಸೇನ ಬಲ: ನವೀನ್ ಪೂಜಾರಿ ಕೋಡಿ, ಶೂರಸೇನ ಬಲ: ಮಂಜು ಹವ್ಯಕ ಕಾಣಿಸಿಕೊಳ್ಳಲಿದ್ದಾರೆ.

ಸರ್ವರಿಗೂ ಸಾಂಪ್ರದಾಯಿಕ ವೇಷಭೂಷಣವನ್ನು ಗಣೇಶ್ ಜನ್ನಾಡಿ ಒದಗಿಸಲಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!