Tuesday, September 17, 2024

ಇಂದು ವರಮಹಾಲಕ್ಷ್ಮೀ ವ್ರತಾಚರಣೆ : ಇಷ್ಟಾರ್ಥಗಳನ್ನು ಕರುಣಿಸುವ ಅಷ್ಠ ಲಕ್ಷ್ಮೀಯರು.

ಜನಪ್ರತಿನಿಧಿ : ವೈಕುಂಠದ ಅಧಿಪತಿ ಶ್ರೀವಿಷ್ಣುವಿನ(ನಾರಾಯಣ) ಪತ್ನಿ ಲಕ್ಷ್ಮೀ. ಹಣ, ಐಶ್ವರ್ಯ, ಸಿರಿ, ಸಂಪತ್ತುಗಳ ಅಧಿದೇವತೆಯೆಂದು ಲಕ್ಷ್ಮಿಯನ್ನು ವರಮಹಾಲಕ್ಷ್ಮೀ ವ್ರತಾಚರಣೆಯ ದಿನದಂದು ಬಹಳ ವಿಶೇಷವಾಗಿ ಪೂಜಿಸಲಾಗುತ್ತದೆ. ಲಕ್ಷ್ಮಿಯನ್ನು ಮಹಾಲಕ್ಷ್ಮಿ ಎಂದೂ ಕರೆಯಲಾಗುತ್ತದೆ. ಪ್ರತಿವರ್ಷದ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಲಕ್ಷ್ಮಿಗೆ ವಿಶೇಷ ಪೂಜೆಗಳನ್ನು ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವ ಮೂಲಕ ಭಕ್ತಿ ಸಂಕಲ್ಪವನ್ನು ಸಲ್ಲಿಸಲಾಗುತ್ತದೆ. ದೀಪಾವಳಿ ಹಬ್ಬದ ಸಮಯದಲ್ಲಿ ಹಾಗೂ ನವರಾತ್ರಿ ಹಬ್ಬದ ಸಮಯ ದಲ್ಲಿ ಕೂಡ ವಿಶೇಷ ಪೂಜೆಗಳನ್ನು ಲಕ್ಷ್ಮಿ ಪೂಜೆ ಎಂದು ಆಚರಿಸಲಾಗುತ್ತದೆ.

ಲಕ್ಷ್ಮಿಯ ಜೊತೆಗೆ, ಮಹಾಲಕ್ಷ್ಮಿಯ ಜೊತೆಗೆ ಪ್ರಾರಂಭದಲ್ಲಿ “ಶ್ರೀ” ಅಕ್ಷರವನ್ನು ಸೇರಿಸಿ ಶ್ರೀ ಲಕ್ಷ್ಮಿ, ಶ್ರೀ ಮಹಾಲಕ್ಷ್ಮಿ ಎಂದೂ ಬಳಸಲಾಗುತ್ತದೆ. ಶ್ರೀ ಎಂಬುದು ಸಿರಿ ಪದದ ತತ್ಸಮ ರೂಪ. ಸಿರಿ ಅಂದರೆ, ಸಂಪತ್ತು, ಐಶ್ವರ್ಯದ ಅಧಿದೇವತೆ ಎಂದು ಸೂಚಿಸಲು ಇದನ್ನು ಸೇರಿಸಲಾಗುತ್ತದೆ. ಅಷ್ಟಲಕ್ಷ್ಮಿಯ ಸ್ವರೂಪಗಳು ಈ ರೀತಿಯಿವೆ.

ಆದಿಲಕ್ಷ್ಮೀ

(ಆದಿಲಕ್ಷ್ಮೀಯನ್ನು ಮೂಲದೇವತೆ ಎಂದೂ ಕರೆಯುತ್ತಾರೆ)

 

ಧ್ಯಾನ್ಯಲಕ್ಷ್ಮೀ

(ಧಾನ್ಯಗಳನ್ನು ಕರುಣಿಸುವ ದೇವತೆ) 

ಧೈರ್ಯ ಲಕ್ಷ್ಮೀ

(ಧೈರ್ಯವನ್ನು ಅನುಗೃಹಿಸುವ ದೇವತೆ)

 

ಗಜ ಲಕ್ಷ್ಮೀ

(ಆನೆಗಳನ್ನು ಇಕ್ಕೆಲದಲ್ಲಿ ಹೊಂದಿದ ದೇವತೆ)

 

ಸಂತಾನ ಲಕ್ಷ್ಮೀ

(ಸಂತಾನವನ್ನು ಕರುಣಿಸುವ ದೇವತೆ)

ವಿಜಯ ಲಕ್ಷ್ಮೀ

(ವಿಜಯವನ್ನು ಪ್ರಾಪ್ತಿ ಮಾಡುವ ದೇವತೆ)

 

ವಿದ್ಯಾಲಕ್ಷ್ಮೀ

(ವಿದ್ಯೆಯನ್ನು ಕರುಣಿಸುವ ದೇವತೆ, ವಿದ್ಯೆಗೆ ಬೇಕಾದ ಎಲ್ಲಾ ಅನುಕೂಲ ನೀಡವ ಲಕ್ಷ್ಮೀ)

ಧನಲಕ್ಷ್ಮೀ

(ಹಣ ಪ್ರಾಪ್ತಿ ಮಾಡುವ ದೇವತೆ)

ಹೀಗೆ, ವರ ಮಹಾಲಕ್ಷ್ಮೀ, ನವರಾತ್ರೀ, ದೀಪಾವಳಿ ಸಂದರ್ಭಗಳಲ್ಲಿ ಅಷ್ಠಲಕ್ಷ್ಮೀಯರನ್ನು ಪೂಜಿಸಿದರೇ, ಇಷ್ಟಾರ್ಥಗಳು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!