spot_img
Tuesday, March 17, 2026
spot_img

ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಸುದೀಪ್‌ ಗೆ ಅತ್ಯುತ್ತಮ ನಟ ಪ್ರಶಸ್ತಿ, ʼಟ್ರಿಬಲ್ ತಲಾಖ್ʼಗೆ ಪ್ರಾದೇಶಿಕ ಸಿನಿಮಾ ಪ್ರಶಸ್ತಿ ಘೋಷಣೆ

ಜನಪ್ರತಿನಿಧಿ (ಬೆಂಗಳೂರು) : ಕರ್ನಾಟಕ ರಾಜ್ಯ ಸರ್ಕಾರ 2019ನೇ ಸಾಲಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿಯನ್ನು ಇಂದು (ಜನವರಿ 22) ಘೋಷಣೆ ಮಾಡಿದೆ.

2019 ರಲ್ಲಿ ಬಿಡುಗಡೆಗೊಂಡ ಅಥವಾ ಸೆನ್ಸಾರ್ ಆದ ಸಿನಿಮಾಗಳಿಗೆ ಆರು ವರ್ಷಗಳ ಬಳಿಕ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ನಟ ಸುದೀಪ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಘೋಷನೆಯಾಗಿದೆ. ಅನುಪಮಾ ಗೌಡ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ.

ಪ್ರಶಸ್ತಿಗಳ ಪೂರ್ಣ ಪಟ್ಟಿ ಇಲ್ಲಿದೆ :

ಅತ್ಯುತ್ತಮ ನಟ : ಸುದೀಪ್ (ಪೈಲ್ವಾನ್)

ಅತ್ಯುತ್ತಮ ನಟಿ : ಅನುಪಮಾ ಗೌಡ (ತ್ರಯಂಬಕಂ)

ಅತ್ಯುತ್ತಮ ಸಿನಿಮಾ (1st) : ಮೋಹನದಾಸ (ಪಿ ಶೇಷಾದ್ರಿ)

ಅತ್ಯುತ್ತಮ ಸಿನಿಮಾ (2nd) : ಲವ್ ಮಾಕ್ಟೆಲ್ (ಡಾರ್ಲಿಂಗ್ ಕೃಷ್ಣ)

ಅತ್ಯುತ್ತಮ ಸಿನಿಮಾ (3rd) : ಅರ್ಘ್ಯಂ (ವೈ ಶ್ರೀನಿವಾಸ್)

ಸಾಮಾಜಿಕ ಕಳಕಳಿ ಚಿತ್ರ : ಕನ್ನೇರಿ (ಮಂಜುನಾಥ ಎಸ್)

ಮನರಂಜನಾ ಸಿನಿಮಾ : ಇಂಡಿಯಾ vs ಇಂಗ್ಲೆಂಡ್ (ನಾಗತಿಹಳ್ಳಿ ಚಂದ್ರಶೇಖರ್)

ಮಕ್ಕಳ ಸಿನಿಮಾ : ಎಲ್ಲಿ ಆಡೋದು ನಾವು ಎಲ್ಲಿ ಆಡೋದು (ಅರುಣ್ ಕುಮಾರ್)

ನಿರ್ದೇಶಕನ ಮೊದಲ ಚಿತ್ರ : ಗೋಪಾಲ ಗಾಂಧಿ (ನಾಗೇಶ್)

ಪ್ರಾದೇಶಿಕ ಸಿನಿಮಾ : ಟ್ರಿಬಲ್ ತಲಾಖ್ (ಬ್ಯಾರಿ ಭಾಷೆ-ನಿರ್ದೇಶಕ: ಯಾಕೂಬ್)

ಅತ್ಯುತ್ತಮ ಪೋಷಕ ನಟಿ : ಅನೂಷಾ ಕೃಷ್ಣ (ಬ್ರಾಹ್ಮಿ)

ಅತ್ಯುತ್ತಮ ಪೋಷಕ ನಟ : ತಬಲಾ ನಾಣಿ (ಕೆಮಿಸ್ಟ್ರಿ ಆಫ್ ಕರಿಯಪ್ಪ)

ಅತ್ಯುತ್ತಮ ಕತೆ : ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ (ಜಯಂತ್ ಕಾಯ್ಕಿಣಿ)

ಅತ್ಯುತ್ತಮ ಚಿತ್ರಕತೆ : ಲವ್ ಮಾಕ್ಟೆಲ್ (ಡಾರ್ಲಿಂಗ್ ಕೃಷ್ಣ)

ಅತ್ಯುತ್ತಮ ಸಂಭಾಷಣೆ : ಅಮೃತಮತಿ (ಬರಗೂರು ರಾಮಚಂದ್ರಪ್ಪ)

ಅತ್ಯುತ್ತಮ ಛಾಯಾಗ್ರಹಣ : ಮೋಹನದಾಸ (ಜಿಎಸ್ ಭಾಸ್ಕರ್)

ಅತ್ಯುತ್ತಮ ಸಂಕಲನ : ಝಾನ್ಸಿ ಐಪಿಎಸ್ (ಬಸವರಾಜ್ ಅರಸ್)

ಅತ್ಯುತ್ತಮ ಬಾಲನಟ : ಪ್ರೀತಂ (ಮಿಂಚು ಹುಳ)

ಅತ್ಯುತ್ತಮ ಬಾಲನಟಿ : ಸುಗಂಧಿ (ಬೇಬಿ ವೈಷ್ಣವಿ ಅಡಿಗ)

ಅತ್ಯುತ್ತಮ ಕಲಾ ನಿರ್ದೇಶನ : ಮೋಹನದಾಸ (ಹೊಸ್ಮನೆ ಮೂರ್ತಿ)

ಅತ್ಯುತ್ತಮ ಗೀತ ರಚನೆ : ಪೆನ್ಸಿಲ್ ಬಾಕ್ಸ್ (ರಝಾಕ್ ಪುತ್ತೂರು)

ಅತ್ಯುತ್ತಮ ಗಾಯಕ : ರಘು ದೀಕ್ಷಿತ್ (ಲವ್ ಮಾಕ್ಟೆಲ್)

ಅತ್ಯುತ್ತಮ ಗಾಯಕಿ : ಜಯದೇವಿ ಶೆಟ್ಟಿ (ರಾಗ ಭೈರವಿ)

ತೀರ್ಪುಗಾರರ ಪ್ರಶಸ್ತಿ : ಅಮೃತಮತಿ, ತಮಟೆ ನರಸಿಂಹಯ್ಯ, ಮಕ್ಕಡ್ ಮನಸು

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!