spot_img
Tuesday, February 18, 2025
spot_img

ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲೀಷ್ ಮೀಡಿಯ್ಂ ಸ್ಕೂಲ್ ನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

ಕಿರಿಮಂಜೇಶ್ವರ: ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ನಲ್ಲಿ 78ನೇ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಧ್ಜಜಾ ರೋಹಣವನ್ನು ಶುಭದ ಸಂಸ್ಥೆಯ ಮಾಜಿ ಸ್ಥಾಪಕ ಅಧ್ಯಕ್ಷರಾದ ಎನ್. ಕೆ .ಬಿಲ್ಲವ ನೆರವೇರಿಸಿ  ಶುಭ ಕೋರಿದರು.
 ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ  ಭಾರತೀಯ ಸೈನ್ಯದ ನಿವೃತ್ತ ಸುಬೇದಾರ್  ಸುಬ್ರಹ್ಮಣ್ಯ ವೈದ್ಯ ಅವರು ಮಾತನಾಡಿ ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿ ದೇಶ ಸೇವಾ ಮನೋಭಾವನೆ ಬೆಳೆಯಬೇಕು, ಆ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ದೇಶಕ್ಕೆ ಉತ್ತಮ ಸೈನಿಕರನ್ನು ನೀಡುವಲ್ಲಿ ಶ್ರಮಿಸಬೇಕು ಎಂದರು.
 ಅತಿಥಿಗಳಾಗಿ ಭಾರತೀಯ ಸೈನ್ಯದ ನಿವೃತ್ತ ಸೈನಿಕರಾದ ಗಣಪತಿ ಗೌಡ ಅವರು ಮಕ್ಕಳಲ್ಲಿ ದೇಶ ಸೇವಾ ಕೆಚ್ಚನ್ನು ಕೆರಳಿಸಿ ಮಾತನಾಡಿ ಹುರಿದುಂಭಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ   ಗಣೇಶ್ ಮೊಗವೀರ ಅವರು ಮಾತನಾಡಿ ಮಕ್ಕಳಲ್ಲಿ ದೇಶಾಭಿಮಾನ ಬೆಳೆಯಬೇಕು. ದೇಶಕ್ಕಾಗಿ ಹೋರಾಡಿದ ವೀರರಿಗೆ ಗೌರವವನ್ನು ಸಲ್ಲಿಸಬೇಕೆಂದರು .
ಸಭೆಯಲ್ಲಿ ಸಂಸ್ಥೆಯ ಮುಖ್ಯ ಶಿಕ್ಷಕಯಾದ  ದೀಪಿಕಾ ಆಚಾರ್ಯ, ಬೋಧಕ ಮತ್ತು ಬೋಧಕೇತರ ವೃಂದದವರು, ವಿದ್ಯಾರ್ಥಿ ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.
 ವಿದ್ಯಾರ್ಥಿನಿಯರಾದ ಸಪ್ತಮಿ ಸ್ವಾಗತಿಸಿ , ಋತು ವಂದಿಸಿದರು. ಸಹನ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!