spot_img
Tuesday, March 31, 2026
spot_img

ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕ ವತಿಯಿಂದ ನಿವೃತ್ತ ಯೋಧ ದಿನೇಶ್ ಆಚಾರ್ಯ ಆಲೂರು ರವರಿಗೆ ಗೌರವಾರ್ಪಣೆ 

ಹೆಮ್ಮಾಡಿ: ಮೊಗವೀರ ಯುವ ಸಂಘಟನೆಯ [ರಿ.] ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ ಹಾಗೂ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.), ಉಡುಪಿ, ಅಂಬಲಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ 78ನೇ ಸ್ವಾತಂತ್ರೋತ್ಸವ ಸಂಭ್ರಮದ ಪ್ರಯುಕ್ತ ಹಮ್ಮಿಕೊಂಡ ಸೈನಿಕರಿಗೊಂದು ಗೌರವಾರ್ಪಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ  ಭಾರತೀಯ ಸೇನೆಯ ನಿವ್ರತ್ತ ಯೋಧ  ದಿನೇಶ್ ಆಚಾರ್ಯ ಆಲೂರು  ಇವರನ್ನು ಸ್ವಗ್ರಹದಲ್ಲಿ  ಅಗಸ್ಟ್ 15 ರಂದು   ಸನ್ಮಾನಿಸಿ ಗೌರವಿಸಲಾಯಿತು.
ಹೆಮ್ಮಾಡಿ ಘಟಕದ ಅಧ್ಯಕ್ಷರಾದ ದಿನೇಶ್ ಕಾಂಚನ್ ಬಾಳಿಕೆರೆ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮೊಗವೀರ ಮಹಾಜನ ಸೇವಾ ಸಂಘ(ರಿ ), ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಅಧ್ಯಕ್ಷರಾದ ಉದಯಕುಮಾರ್ ಹಟ್ಟಿಯಂಗಡಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿ  ಶ್ರೀ ದಿನೇಶ್ ಆಚಾರ್ಯರವರ ಸೈನ್ಯದಲ್ಲಿನ ಸೇವೆ ಮತ್ತು  ಸಾಧನೆಯ ಕುರಿತು ಹೆಮ್ಮೆ ವ್ಯಕ್ತಪಡಿಸಿದರು.
ಮೊಗವೀರ ಮಹಾಜನ ಸೇವಾ ಸಂಘ(ರಿ ),ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಕಾರ್ಯದರ್ಶಿ ಪ್ರಭಾಕರ ಸೇನಾಪುರ, ಆಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೇಶ್ ದೇವಾಡಿಗ, ಮಹಿಷಾಸುರಮರ್ದಿನಿ ಸ್ತ್ರೀಶಕ್ತಿ  ಬಗ್ವಾಡಿ ಸಂಘದ ಅಧ್ಯಕ್ಷರಾದ ಶ್ಯಾಮಲಾ ಜಿ.ಚಂದನ್, ಶ್ರೀ ಮಹಿಷಾಸುರ ಮರ್ದಿನಿ ಭಕ್ತವೃಂದ  ಬೆಂಗಳೂರು ಇದರ ಸ್ಥಾಪಕ ಅಧ್ಯಕ್ಷರಾದ ಶ್ರೀಧರ್ ಬಗ್ವಾಡಿ, ಹೆಮ್ಮಾಡಿ ಘಟಕದ ಕಾರ್ಯದರ್ಶಿ  ಜಗದೀಶ ನೆಂಪು, ಕೋಶಾಧಿಕಾರಿ  ವಿಜಯ ಕಾಂಚನ್ ನಾಡ, ಸಾಂಸ್ಕೃತಿಕ ಕಾರ್ಯದರ್ಶಿ  ಜಯಂತ್ ಕುಂದರ್ ಬಾಳಿಕೆರೆ , ಮೊಗವೀರ ಮಹಾಜನ ಸೇವಾ ಸಂಘ  (ರಿ ),ಬಗ್ವಾಡಿ ಹೋಬಳಿ,ಕುಂದಾಪುರ ಶಾಖೆಯ ಸದಸ್ಯರು, ಮೊಗವೀರ ಯುವ ಸಂಘಟನೆಯ ಹೆಮ್ಮಾಡಿ ಘಟಕದ ಸದಸ್ಯರುಗಳು ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೆಮ್ಮಾಡಿ ಘಟಕದ ಗೌರವಾಧ್ಯಕ್ಷ  ಲೋಹಿತಾಶ್ವ ಆರ್. ಕುಂದರ್ ಸನ್ಮಾನ ಪತ್ರವನ್ನು ವಾಚಿಸಿದರು. ಘಟಕದ ನಿಕಟಪೂರ್ವ  ಕಾರ್ಯದರ್ಶಿ ಪ್ರವೀಣ್ ಮೊಗವೀರ ಗಂಗೊಳ್ಳಿ  ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!