Wednesday, September 11, 2024

ಸ್ವಾತಂತ್ರ್ಯೋತ್ಸವ : ಚೋಣಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ನೂತನ ಧ್ವಜಸ್ತಂಭ ಸಮರ್ಪಣೆ

ಜನಪ್ರತಿನಿಧಿ (ಬಳ್ಕೂರು) : ಬಳ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚೋಣಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ 78 ನೇ ವರ್ಷದ ಸ್ವಾಂತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಈ ದಿನ ದಿ. ಕೋರಗಯ್ಯ ಶೆಟ್ಟಿ, ದಿ. ರವಿರಾಜ್ ಶೆಟ್ಟಿ, ದಿ. ಸದಾನಂದ ಶೆಟ್ಟಿ ಇವರ ಸವಿನೆನಪಿಗಾಗಿ  ಅಂಗನವಾಡಿ ಕೇಂದ್ರಕ್ಕೆ ಧ್ವಜಸ್ತಂಭವನ್ನು ಅವರ ಕುಟುಂಬದವರು ನಿರ್ಮಾಣ ಮಾಡಿಸಿ ಸಮರ್ಪಿಸಿದ್ದು, ಇದರ ಉದ್ಘಾಟನೆಯನ್ನು ಹಿರಿಯ ನಾಗರಿಕರಾದ ಅರುಣಾಚಲ ನಾಯ್ಕ್ ಅವರು ನೆರವೇರಿಸಿದರು.

ಧ್ವಜಾರೋಹಣವನ್ನು ದಾನಿಗಳಾದ ಮೋನಪ್ಪ ಶೆಟ್ಟಿ ನೆರವೇರಿಸಿದರು. ಮೋನಪ್ಪ ಶೆಟ್ಟಿಯವರ ಕುಟುಂಬಸ್ಥರು ಅಂಗನವಾಡಿ ಕೇಂದ್ರದ ಅಂಗಳಕ್ಕೆ ಇಂಟರ್ ಲಾಕ್ ವ್ಯವಸ್ಥೆ, ಗಾರ್ಡನ್  ವ್ಯವಸ್ಥೆ ಹಾಗೂ ಧ್ವಜ ಸ್ತಂಭ ಕೊಡುಗೆ ನೀಡಿದರು.

ದಾನಿಗಳಾದ ಮೋನಪ್ಪ ಶೆಟ್ಟಿ ಹಾಗೂ ರತನ್ ಶೆಟ್ಟಿಯವರನ್ನು ಇಲಾಖೆ ಹಾಗೂ ಪಂಚಾಯತ್ ಹಾಗೂ ಗ್ರಾಮಸ್ಥರ ವತಿಯಿಂದ ಸನ್ಮಾನಿಸಲಾಯಿತು .

ಈ ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಗಿರಿಜಾ, ಉಪಾಧ್ಯಕ್ಷರಾದ ಅಶೋಕ, ಸದಸ್ಯರಾದ  ನಿಶ್ಚಿತ್ ಶೆಟ್ಟಿ. ನಾಗೇಶ್ ಶೇರಿಗಾರ್ ಹಾಗೂ ಸುಶೀಲಾರವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಸವಿತಾ ಶೆಟ್ಟಿ, ಅರುಣಾಚಲ ನಾಯ್ಕ್, ಕೃಷ್ಣಯ್ಯ ಶೆಟ್ಟಿಗಾರ್, ಶೇಖರ ಪೂಜಾರಿ, ಹಳೆ ವಿದ್ಯಾರ್ಥಿಗಳು,ಸಂಘದ ಸದಸ್ಯರು , ಮಕ್ಕಳ ಪೋಷಕರು, ಕಾವ್ರಾಡಿ ವ್ಯವಸಾಯ ಸೇವಾ ಸಂಘದ ಮ್ಯಾನೇಜರ್ ಜಯರಾಮ್ ಶೆಟ್ಟಿ ಮತ್ತುಕಾವ್ರಾಡಿ ವ್ಯವಸಾಯ ಸೇವಾ ಸಂಘದ ಅಧ್ಯಕ್ಷರಾದ ಸದಾನಂದ ಬಳ್ಕೂರು ಹಾಜರಿದ್ದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸವಿತಾ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ಜಯಶ್ರೀ ಸ್ವಾಗತಿಸಿದರು. ಸ್ತ್ರೀಶಕ್ತಿ ಸದಸ್ಯೆ ಗೌರಿ ವಂದಿಸಿದರು. ಪಂಚಾಯತ್ ಹಾಗೂ ಊರಿನ ಹಿರಿಯರು, ಮಕ್ಕಳ ಪೋಷಕರು ಸಿಹಿತಿಂಡಿಯನ್ನು ವಿತರಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!