spot_img
Monday, June 23, 2025
spot_img

ಮೂಡ್ಲಕಟ್ಟೆ ಐ ಎಂ ಜೆ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ

ಜನಪ್ರತಿನಿಧಿ (ಮೂಡ್ಲಕಟ್ಟೆ) : ಮೂಡ್ಲಕಟ್ಟೆ ಐ ಎಂ ಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಲೆಫ್ಟಿನೆಂಟ್ ಕರ್ನಲ್ ಎಂ.ಕೆ ಶೆಟ್ಟಿಯವರು ಧ್ವಜಾರೋಹಣ ಮಾಡಿ, ಸೈನ್ಯಕ್ಕೆ ಸೇರುವ ವಿಧಾನ ಎದುರಿಸುವ ಪರೀಕ್ಷೆಗಳು ಮತ್ತು ಸವಾಲುಗಳನ್ನು ತಿಳಿಸಿದರು. ಸೈನ್ಯಕ್ಕೆ ಸೇರಲು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು ಹಾಗು ದೇಶ ಸೇವೆಯಲ್ಲಿ ಸೈನಿಕರಿಗೆ ಅಗ್ರಸ್ಥಾನ, ಅಲ್ಲದೆ ನಿಸ್ವಾರ್ಥದಿಂದ ಸಲ್ಲಿಸುವ ಪ್ರತಿಯೊಂದು ಸೇವೆಯು ದೇಶ ಸೇವೆ ಅದರಲ್ಲಿಯೂ ಭೋಧಕ ಸೇವೆಯು ಅತ್ಯಂತ ಶ್ರೇಷ್ಠವಾದದ್ದು. ದೇಶ ನನಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾನು ದೇಶಕ್ಕೇನು ನೀಡಿದ್ದೇನೆ ಎನ್ನುವುದು ಅತಿ ಮುಖ್ಯವೆಂದು ತಿಳಿಸಿದರು.

ಐ ಎಂ ಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ಉಪನ್ಯಾಸಕರು ಪ್ರಾರ್ಥನೆ ಸಲ್ಲಿಸಿದರು. ಸಂಸ್ಥೆಯ ವತಿಯಿಂದ ಮುಖ್ಯ ಅತಿಥಿಗಳಾದ ಲೆಫ್ಟಿನೆಂಟ್ ಕರ್ನಲ್ ಎಂ.ಕೆ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೆ ಸಂದರ್ಭದಲ್ಲಿ  ಕೆ ವಿ ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ಮೆಡಿಕಲ್  ಆಫೀಸರ್ ಡಾಕ್ಟರ್ ಸುನಿಲ್ ಅವರು ವ್ಯಸನದಿಂದ ಮುಕ್ತಿ ಎಂಬ  ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.

ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು ಕಾರ್ಯಕ್ರಮವನ್ನು ಕು. ಸೋನ ನಿರೂಪಿಸಿದರು ,ಕು. ಸಿನ್ಸಿ ಸ್ವಾಗತಿಸಿದರು, ಅಭಿನವ್ ರವರು ವಂದನಾರ್ಪಣೆ ನೆರವೇರಿಸಿದರು.

Related Articles

Stay Connected

21,961FansLike
3,912FollowersFollow
22,400SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!