Monday, September 9, 2024

ಸ್ವಾತಂತ್ರ್ಯೋತ್ಸವ : ವಕ್ವಾಡಿ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ದಾನಿಗಳಿಂದ 75 ಸಾವಿರ ಮೌಲ್ಯದ ಸಮವಸ್ತ್ರಗಳ ಕೊಡುಗೆ !

ಜನಪ್ರತಿನಿಧಿ (ವಕ್ವಾಡಿ) :  ವಕ್ವಾಡಿಯ ಸರ್ಕಾರಿ ಪ್ರಾಥಮಿಕ ಶಾಲೆ ವಕ್ವಾಡಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಧ್ವಜಾರೋಹಣ ಹಾಗೂ ಪುರಮೆರವಣಿಗೆಯ ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಚಾರ್ಮಕ್ಕಿ ನಾಗಯ್ಯ ಶೆಟ್ಟಿ ಸ್ಮರಣಾರ್ಥ ಅವರ ಕುಟುಂಬದವರು, ಪುರಾಣಿಬೈಲು ಸೀತಾರಾಮ ಶೆಟ್ಟಿ, ದಿನಕರ್‌ ಶೆಟ್ಟಿ ಅಧ್ಯಾಪಕರು ವಕ್ವಾಡಿ, ಸತ್ಯರಂಜನ್‌ ಹೆಗ್ಡೆ, ರಮೇಶ್‌ ಶೆಟ್ಟಿ ವಕ್ವಾಡಿ, ಶಶಿಧರ್‌ ಶೆಟ್ಟಿ ಅವರ ಉದಾರ ದಾನದಿಂದ ಸುಮಾರು 75 ಸಾವಿರ ಮೌಲ್ಯದ ಸಮವಸ್ತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಜಿಲ್ಲಾ ಪ್ರಶಸ್ತಿ ಪುರಸ್ಕೃತ ಯುವಶಕ್ತಿ ಮಿತ್ರ ಮಂಡಲ(ರಿ.) ವಕ್ವಾಡಿ ವತಿಯಿಂದ ಸುಮಾರು ಇಪ್ಪತ್ತು ಸಾವಿರ ಮೌಲ್ಯದಲ್ಲಿ ವಿದ್ಯಾರ್ಥಿಗಳಿಗೆ ಬೆಲ್ಟ್‌, ಟೈ, ಐಡಿ ಕಾರ್ಡ್‌ಗಳನ್ನು ವಿತರಿಸಲಾಯಿತು ಮತ್ತು ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಕಾಳಾವರ ಗ್ರಾಮ ಪಂಚಾಯತ್‌ನ ಗ್ರಂಥಾಲಯ ʼಅರಿವುʼ ಕಾರ್ಯಕ್ರಮದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಭಾಷಣ ಹಾಗೂ ಇನ್ನಿತರ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು, ವಿಜೇತರಿಗೆ ಬಹುಮಾನ ನೀಡಲಾಯಿತು. ದೇವೇಂದ್ರ ಆಚಾರ್‌ ವಕ್ವಾಡಿ ಶಾಲಾ ವಿದ್ಯಾರ್ಥಿಗಳಿಗೆ ಸುಮಾರು ಹತ್ತು ಸಾವಿರ ಮೌಲ್ಯದಲ್ಲಿ ಉಪಹಾರ ವ್ಯವಸ್ಥೆ ಮಾಡಿದ್ದರು. ವಿದ್ಯಾರ್ಥಿಗಳಿಗೆ ಗ್ರಾಮಸ್ಥರು, ಶಿಕ್ಷಣ ಪೋಷಕರು ಸಿಹಿ ಹಂಚಿ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಅಧ್ಯಾಪಕ ಕರುಣಾಕರ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತ್ಯರಂಜನ್‌ ಹೆಗ್ಡೆ, ಪುರಾಣಿಬೈಲು ಸೀತಾರಾಮ ಶೆಟ್ಟಿ, ಹಳೆ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಪುಟ್ಟರಾಜ್‌ ಹೆಬ್ಬಾರ್, ಕಾಳವಾರ ಗ್ರಾಮ ಪಂಚಾಯತ್‌ನ ಸದಸ್ಯರಾದ ರಮೇಶ್‌ ಶೆಟ್ಟಿ ವಕ್ವಾಡಿ, ಭಾರತಿ,  ಚೈತ್ರಾ, ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಪದ್ಮನಾಭ ಶೆಟ್ಟಿಗಾರ್‌, ಯುವಶಕ್ತಿ ಮಿತ್ರ ಮಂಡಲದ ಅಧ್ಯಕ್ಷ ವಿಜಯ್‌ ಪೂಜಾರಿ, ಶಾಲಾ ಮುಖ್ಯೋಪಾದ್ಯಾಯ ಗಣೇಶ್‌ ಶೆಟ್ಟಿ ಸೇರಿ ಶಾಲಾ ಸಹ ಶಿಕ್ಷಕರು, ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!