Monday, September 9, 2024

ವಯನಾಡು ಗುಡ್ಡ ಕುಸಿತ : ಮೃತರ ಸಂಖ್ಯೆ 308ಕ್ಕೆ ಏರಿಕೆ | ವಿಪತ್ತು ಪೀಡಿತ ಪ್ರದೇಶದಲ್ಲಿ ಮುಂದುವರಿದ ಕಾರ್ಯಾಚರಣೆ

ಜನಪ್ರತಿನಿಧಿ (ವಯನಾಡ್) : ಕೇರಳದ ವಯನಾಡಿನಲ್ಲಿ ಸಂಭವಿಸಿದ ಭಾರಿ ಪ್ರಮಾಣದ ಗುಡ್ಡ ಕುಸಿತದ ಕಾರಣದಿಂದ ಇಡೀ ಕೇರಳದ ತುಂಬ ಶೋಕ ಆವರಿಸಿದೆ. ವಿಪತ್ತು ನಿರ್ವಹಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಕಠಿಣ ಪರಿಸ್ಥಿತಿಯಲ್ಲಿಯೂ  ಶಕ್ತಿ ಮೀರಿ ರಕ್ಷಣಾ ಪಡೆ ಕಾರ್ಯ ನಿರ್ವಹಿಸುತ್ತಿದೆ.

ಸದ್ಯ 308 ಮಂದಿ ವಯನಾಡ್ ಗುಡ್ಡ ಕುಸಿತ ದುರಂತದಲ್ಲಿ ಮಣ್ಣಿನಡಿ ಸಿಲುಕಿರುವ ಮೃತ ದೇಹಗಳನ್ನು ಹೊರತೆಗೆಯಲಾಗಿದೆ  ಎಂದು ಮಾಹಿತಿ ಇದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿರುವುದಾಗಿ ರಾಷ್ಟ್ರೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಗುಡ್ಡ ಕುಸಿತದಿಂದ ಹಾನಿಗೊಳಗಾದ ಚೂರಲ್ಮಲಾದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಕಳೆದ ಮೂರು ದಿನಗಳಿಂದ ಬದುಕುಳಿದವರನ್ನು ರಕ್ಷಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ(ಗುರುವಾರ) ಘೋಷಿಸಿದ್ದರು. ವಯನಾಡಿನ ಗುಡ್ಡ ಕುಸಿತ ಪೀಡಿತ ಮುಂಡಕ್ಕೈ ಪ್ರದೇಶದಲ್ಲಿ ವಿಪತ್ತು ನಿರ್ವಹಣಾ ಕಾರ್ಯಾಚರಣೆಗೆ ಇನ್ನೂ ಕೆಲವು ದಿನಗಳು ಬೇಕಾಗಬಹುದು ಎಂದು ಹೇಳಿದ್ದಾರೆ ಮತ್ತು ರಕ್ಷಣಾ ಪ್ರಯತ್ನಗಳನ್ನು ಸಂಘಟಿಸಲು ನಾಲ್ವರು ಸಚಿವರ ಸಂಪುಟ ಉಪಸಮಿತಿಯನ್ನು ನೇಮಿಸಲಾಗಿದೆ ಎಂದು ತಿಳಿದು ಬಂದಿದೆ.

ನಾಲ್ವರು ಸಚಿವರು ವಯನಾಡಿನಲ್ಲಿ ಬೀಡು ಬಿಡಲಿದ್ದಾರೆ. ಕಂದಾಯ ಸಚಿವ ಕೆ ರಾಜನ್, ಅರಣ್ಯ ಸಚಿವ ಎ. ಕೆ. ಶಸೀಂದ್ರನ್, ಪಿಡಬ್ಲ್ಯೂಡಿ ಹಾಗೂ ಪ್ರವಾಸೋದ್ಯಮ ಸಚಿವ ಪಿ.ಎ ಮೊಹಮ್ಮದ್ ರಿಯಾಸ್ ಹಾಗೂ ಎಸ್‌ಸಿ/ಎಸ್‌ಟಿ ಇಲಾಖೆ ಸಚಿವ ಒ.ಆರ್. ಕೇಲು ಜಿಲ್ಲೆಯಲ್ಲಿ ಶಿಬಿರ ನಡೆಸಲಿದ್ದಾರೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

ರಕ್ಷಣಾ ಕಾರ್ಯಗಳನ್ನು ಸಮನ್ವಯಗೊಳಿಸುತ್ತಿರುವ ಸಚಿವ ಕೆ ರಾಜನ್, ವಿವಿಧ ಏಜೆನ್ಸಿಗಳು ಹಾಗೂ ಸಶಸ್ತ್ರ ಪಡೆಗಳ 1,300 ಸಿಬ್ಬಂದಿಗಳು ಈ ಪ್ರದೇಶದಲ್ಲಿ ಜಂಟಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದರು, ಜಿಲ್ಲೆಯ 91 ಪರಿಹಾರ ಶಿಬಿರಗಳಿಗೆ 9,328 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು.

ಇನ್ನು, ಚೂರಲ್ಮಲಾ ಮತ್ತು ಮೆಪ್ಪಾಡಿಯಲ್ಲಿ ಗುಡ್ಡ ಕುಸಿತದ ಕಾರಣದಿಂದ 578 ಕುಟುಂಬಗಳ 2,328 ಜನರನ್ನು ಒಂಬತ್ತು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ವಿಪತ್ತು ಪೀಡಿತ ಪ್ರದೇಶದಲ್ಲಿ ಹಲವಾರು ಜನರು ನಾಪತ್ತೆಯಾಗಿದ್ದು ಶೋಧ ಕಾರ್ಯ ನಡೆಯುತ್ತಿದೆ.

ಚೂರಲ್ಮಲಾ ಮತ್ತು ಮುಂಡಕ್ಕೈ ಎಸ್ಟೇಟ್ ಲೇನ್‌ಗಳಲ್ಲಿ ವಾಸಿಸುತ್ತಿದ್ದ ಚಹಾ ತೋಟದ ಕಾರ್ಮಿಕರು ದುರಂತದಿಂದ ಹೆಚ್ಚು ಹಾನಿಗೊಳಗಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿರುವಾಗ, ದುರಂತದಲ್ಲಿ ಎಷ್ಟು ಟೀ-ಎಸ್ಟೇಟ್ ಕಾರ್ಮಿಕರು ಮತ್ತು ಕುಟುಂಬ ಸದಸ್ಯರು ಮೃತಪಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

Kerala: Search and rescue operations continue at landslide-affected Chooralmala in Wayanad.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!