spot_img
Wednesday, January 22, 2025
spot_img

ವಿದೇಶದಲ್ಲಿ ಉದ್ಯೋಗವಕಾಶ : ಇಲ್ಲಿದೆ ಸಂಪೂರ್ಣ ಮಾಹಿತಿ

ಜನಪ್ರತಿನಿಧಿ : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ – ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು (KSDC) ಕನ್ನಡಿಗರಿಗೆ ವಿದೇಶದಲ್ಲಿ ಉದ್ಯೋಗಾವಕಾಶ ಒದಗಿಸುತ್ತಿದೆ. ಯುನೈಟೆಡ್​ ಅರಬ್ ಎಮಿರೇಟ್ಸ್​ (UAE)ನಲ್ಲಿ ಉದ್ಯೋಗ ಅರಸುತ್ತಿರುವವರಿಗೆ ಉದ್ಯೋಗವಕಾಶ ಕಲ್ಪಿಸುತ್ತಿದೆ. ಅನುಭವಿ ಪುರುಷ ನರ್ಸ್​ (Male Nurse)ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆ:
ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿ.ಎಸ್ಸಿ ನರ್ಸಿಂಗ್/ ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ಪೂರ್ಣಗೊಳಿಸಿರಬೇಕು.

ಅನುಭವ:
ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ಐಸಿಯು, ಎಮರ್ಜೆನ್ಸಿ, ಅರ್ಜೆಂಟ್ ಕೇರ್, ಕ್ರಿಟಿಕಲ್ ಕೇರ್, ಆಯಿಲ್ & ಗ್ಯಾಸ್ ನರ್ಸಿಂಗ್​ನವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ವಯೋಮಿತಿ:
ಅಭ್ಯರ್ಥಿಗಳ ವಯಸ್ಸು 40 ವರ್ಷಕ್ಕಿಂತ ಕಡಿಮೆ ಇರಬೇಕು.

ವೇತನ:
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ರೂ. 1.11 ಲಕ್ಷ ಸಂಬಳವಿದ್ದು, ಇದರಲ್ಲಿ 5,000 AED ಎಲ್ಲವೂ ಸೇರಿರುತ್ತದೆ.

ಯಾರಿಗೆ ಆದ್ಯತೆ?
DOH ತೇರ್ಗಡೆಯಾದವರು ಅಥವಾ DOH ಪರವಾನಿಗೆ ಅಥವಾ DOH ಡಾಟಾಫ್ಲೋ ಪಾಸಿಟಿವ್ ರಿಸಲ್ಟ್​ ಇದ್ದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ರಜೆ ಸೌಲಭ್ಯ ?
ವರ್ಷಕ್ಕೆ 30 ದಿನಗಳ ವೇತನ ಸಹಿತ ರಜೆ ನೀಡಲಾಗುತ್ತದೆ.

ಸೌಲಭ್ಯಗಳೇನು ?
ಅಭ್ಯರ್ಥಿಗಳಿಗೆ ಕಂಪನಿ ವತಿಯಿಂದ ಆರೋಗ್ಯ ವಿಮೆ, ವಸತಿ ಮತ್ತು ಸಾರಿಗೆ ಸೌಲಭ್ಯ ನೀಡಲಾಗುತ್ತದೆ. ಅತಿ ದೂರದ ಪ್ರದೇಶಗಳಲ್ಲಿ ನಿಯೋಜಿಸಿದ್ದರೆ ಊಟದ ವ್ಯವಸ್ಥೆ ಇದೆ. ಇದಲ್ಲದೇ, ಅಭ್ಯರ್ಥಿಗಳಿಗೆ ವೀಸಾ ಹಾಗೂ ವಿಮಾನ ಟಿಕೆಟ್​ ಕೂಡ ಕಂಪನಿಯೇ ಒದಗಿಸುತ್ತಿದೆ.
ಅಭ್ಯರ್ಥಿಗಳು ಯಾವುದೇ ನೇಮಕಾತಿ ಸೇವಾ ಶುಲ್ಕಗಳನ್ನು ಪಾವತಿಸಬೇಕಿಲ್ಲ.

ಸಂದರ್ಶನ ಯಾವಾಗ, ಎಲ್ಲಿ?
ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಸಂದರ್ಶನ ನಡೆಯಲಿದೆ. ಆನ್​ಲೈನ್ ಸಂದರ್ಶನ ಇದಾಗಿರುತ್ತದೆ. ಸಂದರ್ಶನ ನಡೆಯುವ ದಿನಾಂಕವನ್ನು ಶಾರ್ಟ್​ಲಿಸ್ಟ್ ಆದ ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ ?
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಸುಲಭವಾಗಲೆಂದೇ ಲಿಂಕ್‌ ಅನ್ನು ಈ ಕೆಳಗೆ ನೀಡಲಾಗಿದೆ.
https://imck.kaushal.kar.com/

ಅಭ್ಯರ್ಥಿಗಳು ತಮ್ಮ ಸಿವಿ/ರೆಸ್ಯೂಮ್ ಹಾಗೂ ದಾಖಲೆಗಳನ್ನು ಇ-ಮೇಲ್ ಐಡಿ hr.imck@gmail.com ಮೂಲಕ ಸಲ್ಲಿಸಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಲಾಗಿರುವ ವಿಳಾಸವನ್ನು ಸಂಪರ್ಕಿಸಬಹುದಾಗಿದೆ.

ಅಂತರಾಷ್ಟ್ರೀಯ ವಲಸೆ ಕೇಂದ್ರ-ಕರ್ನಾಟಕ (
IMC-K)
ಕಲ್ಯಾಣ ಸುರಕ್ಷಾ ಭವನ
4ನೇ ಮಹಡಿ
ಡೈರಿ ವೃತ್ತ
ಬನ್ನೇರುಘಟ್ಟ ರಸ್ತೆ
ಬೆಂಗಳೂರು- 560029 

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!