spot_img
Tuesday, March 31, 2026
spot_img

ಕುಂದಾಪುರ: ಮುಖ್ಯ ಶಿಕ್ಷಕಿ ಸುಮನ ಅವರಿಗೆ ಬೀಳ್ಕೊಡುಗೆ

ಕುಂದಾಪುರ, ಆ.1: ತನ್ನಲ್ಲಿರುವ ಪ್ರತಿಭೆಯನ್ನು ಸರ್ವರಿಗೂ ಧಾರೆ ಎರೆಯುವ ಮೂಲಕ ನಿಜ ಅರ್ಥದ ಶಿಕ್ಷಕಿಯಾಗಿ ಸೇವೆ ಸಲ್ಲಸಿದವರು ಸುಮನ ಅವರು ಎಂದು ಪುರಸಭೆ ಸದಸ್ಯೆ ಪ್ರಭಾವತಿ ಶೆಟ್ಟಿ ಹೇಳಿದರು.

ಅವರು ಬುಧವಾರ ಇಲ್ಲಿನ ಹೊಸ ಬಸ್ ನಿಲ್ದಾಣ ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಗರ್ಲ್ಸ್ ಸ್ಕೂಲ್)ನಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಕಳೆದ 9 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಸುಮನ ಅವರಿಗೆ ಸಿ‌ಆರ್‌ಪಿ ಹುದ್ದೆಗೆ ವರ್ಗವಾಗಿದ್ದು ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆಯನ್ನು ಎಸ್‌ಡಿ‌ಎಂಸಿ ಅಧ್ಯಕ್ಷೆ ದೀಪಾ ವಹಿಸಿದ್ದರು.

ಸಿ‌ಆರ್‌ಪಿಯಾಗಿ ಹೋಗುತ್ತಿರುವ ಸುಮನ ಅವರು ಸಮ್ಮಾನಕ್ಕೆ ಉತ್ತರಿಸಿ, ಮಕ್ಕಳು ಕಲಿತು ಉತ್ತಮ ಸಮಾಜದಲ್ಲಿ ಭಾಗಿಗಳಾಗುವುದೇ ನನಗೆ ಕೊಡುವ ಉಡುಗೊರೆ ಎಂದರು.

ಹಿರಿಯ ಪತ್ರಕರ್ತ ಲಕ್ಷ್ಮೀ ಮಚ್ಚಿನ, ಡಿ‌ಇ‌ಆರ್‌ಟಿ ಪ್ರದೀಪ್ ಕುಮಾರ್, ಎಸ್‌ಡಿ‌ಎಂಸಿ ಮಾಜಿ ಅಧ್ಯಕ್ಷೆ ಶೋಭಾ, ಮಾಜಿ ಅಧ್ಯಕ್ಷ ದತ್ತಾನಂದ ನಾಯಕ್, ಪ್ರಭಾರ ಮುಖ್ಯ ಶಿಕ್ಷಕಿ ವಿನಯ ಉಪಸ್ಥಿತರಿದ್ದರು.

ಶಿಕ್ಷಕಿ ಶ್ರೀಲತಾ ಅಭಿನಂದನಾ ಭಾಷಣ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಉಷಾ ಶಿಕ್ಷಕಿಯ ಕುರಿತು ಮಾತನಾಡಿದರು. ವಿದ್ಯಾರ್ಥಿನಿ ರೇಖಾ ಅನಿಸಿಕೆ ಹೇಳಿದರು. ಶಿಕ್ಷಕಿ ಅಶ್ವಿನಿ ಸ್ವಾಗತಿಸಿ, ಶಿಕ್ಷಕಿ ಸುನೀತಾ ನಿರೂಪಿಸಿ, ಉಷಾ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!