spot_img
Saturday, February 14, 2026
spot_img

ಹಟ್ಟಿ‌ಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ರಾಷ್ಟ್ರೀಯ ಮಟ್ಟದ ಗ್ರೀನ್ ಫ್ಲ್ಯಾಗ್ ಪ್ರಶಸ್ತಿಯ ಗೌರವ

ಹಟ್ಟಿ‌ಅಂಗಡಿ: ಕಳೆದ ವರ್ಷ ಅವಳಿ ಗಿನ್ನಿಸ್ ದಾಖಲೆಗಳ ಮೂಲಕ ಇತಿಹಾಸ ನಿರ್ಮಿಸಿದ್ದ ಕುಂದಾಪುರದ ಹಟ್ಟಿ‌ಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯು ಈ ವರ್ಷಾರಂಭದಲ್ಲೇರಾಷ್ಟ್ರೀಯ ಮಟ್ಟದ ಗ್ರೀನ್ ಫ್ಲ್ಯಾಗ್  ಅವಾರ್ಡ್‌ಗೆ ಪಾತ್ರವಾಗಿದೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ೨೬-೦೭-೨೦೨೪ರಂದು ಮಾನವ ಸಂಗ್ರಹಾಲಯ ಮತ್ತು ಪರ್ಯಾವರ್ಣ ಶಿಕ್ಷಾ ಕೇಂದ್ರದ ಸಹಯೋಗದಲ್ಲಿರೋಕ್‌ಆರ್ಟ್ ಸಭಾಂಗಣದಲ್ಲಿ ನಡೆದ‌ಎರಡು ದಿನಗಳ ಕಾರ್ಯಾಗಾರದವಾರ್ಷಿಕ ಪುರಸ್ಕಾರದ ಸಮಾರೋಪ ಸಮಾರಂಭದಲ್ಲಿ ಹಟ್ಟಿಯಂಗಡಿ ವಸತಿ ಶಾಲೆಗೆ ಗ್ರೀನ್ ಫ಼್ಲಾಗ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಇಕೋ ಸ್ಕೂಲ್‌ಆಫ್‌ಇಂಡಿಯಾ ಮತ್ತು‌ಎಫ್.ಇ.ಇ- ಗ್ಲೋಬಲ್‌ನವರುಕೊಡಮಾಡುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು‌ ಇಂದಿರಾಗಾಂಧಿರಾಷ್ಟ್ರೀಯ ಮಾನವ ಸಂಗ್ರಹಾಲಯದ ನಿರ್ದೇಶಕರಾದ ಪ್ರೊ. ಅಮಿತಾಬ್ ಪಾಂಡೆ ಹಾಗೂ ಡಾ. ಸುನೀಲ್‌ ಉಮಾರಾವ್‌ ರವರು ಹಟ್ಟಿಯಂಗಡಿ ವಸತಿ ಶಾಲೆಗೆ ವಿತರಿಸಿ ಗೌರವಿಸಿದರು.

ಶಾಲೆಯಲ್ಲಿ ಹಮ್ಮಿಕೊಳ್ಳುವ ಪರಿಸರ ಸ್ನೇಹಿ ಕಾರ್ಯ ಚಟುವಟಿಕೆಗಳು, ಸ್ವಚ್ಛತೆಯಕಾರ್ಯ ವಿಧಾನಗಳು, ಮಾಹಿತಿ ಮತ್ತುಜನಜಾಗೃತಿ ಕಾರ್ಯಕ್ರಮಗಳು ಇತ್ಯಾದಿ ಅಂಶಗಳ ಮಾನದಂಡದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಶ್ರೀ ಸಿದ್ಧಿಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಹಾಗೂ ಶಾಲಾ ಪ್ರಾಂಶುಪಾಲರು‌ ಆದ ಶರಣಕುಮಾರ ಮತ್ತು ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮೀ ಎಂ ಸಂಸ್ಥೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿ, ಹರ್ಷ ವ್ಯಕ್ತಪಡಿಸಿದರು. ಎರಡು ದಿನಗಳ ಕಾಲ ನಡೆದ ಈ ಕಾರ್ಯಗಾರದಲ್ಲಿದೇಶದ೪೦ ಕ್ಕೂ‌ಅಧಿಕ ಶಾಲೆಗಳಿಂದ ಶಿಕ್ಷಕರು ಆಗಮಿಸಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!