spot_img
Wednesday, January 22, 2025
spot_img

ಕುಂದಾಪುರದಲ್ಲಿ “ಕ್ರೈಸ್ತ ಸಹಕಾರಿ” ಸಮ್ಮಿಲನ ಕಾರ್ಯಕ್ರಮ

ಕುಂದಾಪುರ:  ಪ್ರತಿಷ್ಠಿತ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ನೇತೃತ್ವದಲ್ಲಿ ಜು.27ರಂದು ಪ್ರಧಾನ ಕಚೇರಿಯ ರೋಜರಿ ಸಭಾಭವನದಲ್ಲಿ “ಕ್ರೈಸ್ತ ಸಹಕಾರಿ ಸಮ್ಮಿಲನ” ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ| ಡಾ. ಜೆರಾಲ್ಡ್ ಐಸಾಕ್ ಲೋಬೋ ಮುಖ್ಯ ಅತಿಥಿಯಾಗಿ ಆಗಮಿಸಿ “ಇಂತಹ ಒಂದು ಕೂಟ ನಮಗೆ ಅಗತ್ಯವಿದೆ, ಸಹಕಾರಿ ಸಂಘಗಳ ನಡುವೆ ಸಹಕಾರ ಅಗತ್ಯವಿದೆ, ಇದನ್ನು ಮುಂದಕ್ಕೆ ನೆಡೆಕೊಂಡು ಹೋಗಬೇಕು’ ತಮ್ಮ ಸಂದೇಶ ನೀಡಿದರು. ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅತೀ ವಂದನೀಯ ಪಾವ್ಲ್ ರೇಗೊ,ಶುಭ ಹಾರೈಸಿ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಕ್ಯಾಥೋಲಿಕ್ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಬ್ರಹ್ಮಾ ವರ,ಇದರ ಅಧ್ಯಕ್ಷರಾದ ವಲೇರಿಯನ್ ಮಿನೆಜೆಸ್, ಉಡುಪಿ ಕ್ಯಾಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಡುಪಿ, ಇದರ ಅಧ್ಯಕ್ಷ ಲುವಿಸ್ ಲೋಬೊ, ಕೊಂಕಣ್ ಕ್ಯಾಥೊಲಿಕ್ ವಿವಿದೋದ್ಧೇಶ ಸಹಕಾರಿ ಸಂಘ ಕಾರ್ಕಳ ಇದರ ಅಧ್ಯಕ್ಷರಾದ ಡಾ|ಪೀಟರ್ ಫೆರ್ನಾಂಡಿಸ್, ಸುಗಮ್ಯಾ ಮಹಿಳಾ ಸೌಹಾರ್ದ ಸಹಕಾರಿ ಸಂಘ ಉಡುಪಿ ಇದರ ಅಧ್ಯಕ್ಷರಾದ ಪ್ರಮೀಳಾ ಡೆಸಾ ಇವರುಗಳು ತಮ್ಮ ಸಂಘಗಳು ಬೆಳೆದು ಬಂದ ರೀತಿ ಸಭೆಯಲ್ಲಿ ಮಾತನಾಡಿದರು.

ಮುಂದೆ ಇಂತಹ ಕೂಟ ಮುಂದುವರೆಸಿ ಬಲಪಡಿಸಲು, ಮುಂದಿನ ಮೂರು ವರ್ಷಗಳ ಕಾಲಕ್ಕೆ ರೋಜರಿಯ ಸೊಸೈಟಿಯ ಅಧ್ಯಕ್ಷ ಜೋನ್ಸನ್ ಡಿ ’ ಆಲ್ಮೇಡಾ ಅವರನ್ನು ಸಂಚಾಲಕರನ್ನಾಗಿ ಆರಿಸಲಾಯಿತು.

ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಜೆರಾಲ್ಡ್ ಫೆರ್ನಾಂಡಿಸ್, ಎಮ್.ಸಿ.ಸಿ. ಬ್ಯಾಂಕಿನ ನಿರ್ದೇಶಕ ಡಾ.ಜೆರಾಲ್ಡ್ ಪಿಂಟೊ, ರೋಜರಿ ಸೊಸೈಟಿಯ ಎಲ್ಲಾ ನಿರ್ದೇಶಕರು, ಎಲ್ಲಾ ೫ ಸೊಸೈಟಿಗಳ ಉಪಾಧ್ಯಕ್ಷರು, ನಿರ್ದೇಶಕರು ಭಾಗವಹಿಸಿದ್ದರು. ರೋಜರಿ ಸೊಸೈಟಿಯ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಸಂಚಾಲಕರಾದ ಜೋನ್ಸನ್ ಡಿ ’ ಆಲ್ಮೇಡಾ ಪ್ರಸ್ತಾವನೆಗೈದು ಸ್ವಾಗತಿಸಿದರು, ರೋಜರಿಯ ಸೊಸೈಟಿಯ ಉಪಾಧ್ಯಕ್ಷರಾದ ಕಿರಣ್ ಲೋಬೊ ಕಾರ್ಯಕ್ರಮಕ್ಕೆ ಸಹಕರಿಸಿದರು. ರೋಜರಿ ಸೊಸೈಟಿಯ ನಿರ್ದೇಶಕ ವಿಲ್ಸನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!