spot_img
Saturday, December 7, 2024
spot_img

ಯುವಕರು ದೇಶಕ್ಕೆ ಸಲ್ಲಿಸುವ ಸೇವೆ ಅಮೂಲ್ಯ- ಶಾಸಕ ಕಿರಣ್ ಕೊಡ್ಗಿ | ಕುಂದಾಪುರದಲ್ಲಿ ಪಂಜಿನ ಮೆರವಣಿಗೆ

ಕುಂದಾಪುರ: ದೇಶದ ಪ್ರತಿ ಪ್ರಜೆಯು ದೇಶಾಭಿಮಾನ ಬೆಳೆಸಿಕೊಳ್ಳಬೇಕು ಅದರಲ್ಲೂ ಯುವಕರು ದೇಶಕ್ಕೆ ಸೇವೆ ಸಲ್ಲಿಸುವ ಮೂಲಕ ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಇಂದಿನ ಯುವಕರು ದೇಶಕ್ಕೆ ಸಲ್ಲಿಸುವ ಸೇವೆ ಅಮೂಲ್ಯವಾಗಿರುತ್ತದೆ ಎಂದು ಎ.ಶಾಸಕ ಕಿರಣ್ ಕುಮಾರ ಕೊಡ್ಗಿ ಹೇಳಿದರು.

ಬಿಜೆಪಿ ಯುವ ಮೋರ್ಚ ಕುಂದಾಪುರ ವತಿಯಿಂದ ಕಾರ್ಗಿಲ್ ವಿಜಯೋತ್ಸವದ ವೀರ ಯೋಧ ನಮನದ ಕಾರ್ಯಕ್ರಮದ ಪಂಜಿನ ಮೆರವಣಿಗೆ ಚಾಲನೆ ನೀಡಿ ಸಮಾರೋಪದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಆದರ್ಶ್ ಗೋಖಲೆ ಕಾರ್ಗಿಲ್ ಸಮಯದಲ್ಲಿ ಪಾಕಿಸ್ತಾನದ ವಿರುದ್ಧ ಜಯಗಳಿಸಲು ಶ್ರಮಿಸಿದ ನಮ್ಮ ಯೋಧರ ಪರಾಕ್ರಮ ಮೆಚ್ಚುವಂತಹದ್ದು ಜೊತೆಗೆ ಆ ಸಮಯದಲ್ಲಿ ಮರಣವನ್ನಪ್ಪಿದ ವೀರ ಯೋಧರಿಗೆ ನಮನ ಸಲ್ಲಿಸುವುದು ನಮ್ಮೆಲ್ಲ ಆದ್ಯ ಕರ್ತವ್ಯ ಜೊತೆಗೆ ಈ ಬಾರಿಯ ದೀಪಾವಳಿಯನ್ನು ಯೋಧರ ನೆನಪಿನಲ್ಲಿ ಆಚರಿಸೋಣ ಎಂದರು.

ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಪ್ರಸ್ತಾವಿಕ ಮಾತುಗಳಾಡಿದರು. ಕುಂದಾಪುರ ಮಂಡಲದ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಕಾರ್ಯಕ್ರಮ ಉದ್ದೇಶಿಸಿ ಮಾತುಗಳನ್ನಾಡಿದರು.

ಇದೇ ವೇಳೆ ಕಾರ್ಗಿಲ್ ಯುದ್ಧದ ಸಂಭ್ರಮದಲ್ಲಿ ಹೋರಾಡಿದ ನಿವೃತ್ತ ಸೈನಿಕರಾದ ಗಣಪತಿ ಖಾರ್ವಿ ಬಸ್ರೂರು, ಹವಾಲ್ದಾರ್ ಯೋಗೇಶ್ ಕಾಂಚನ್ ಕೋಟ, ಸುಧೀರ್ ಎಚ್, ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.  ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಕಿರಣ್ ಪೂಜಾರಿ ತೆಕ್ಕಟ್ಟೆ ಸ್ವಾಗತಿಸಿದರು. ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷ ಪ್ರಸಾದ್ ಬಿಲ್ಲವ ಕಾರ್ಯಕ್ರಮವನ್ನು ನಿರೂಪಿಸಿದರು.

ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂಪತ್ ಶೇರಿಗಾರ್ ವಂದಿಸಿದರು. ಬಿಜೆಪಿ ಮಂಡಲ ನಿಕಟ ಪೂರ್ವ ಅಧ್ಯಕ್ಷ ಶಂಕರ್ ಅಂಕದಕಟ್ಟೆ ವಂದೇ ಮಾತರಂ ಗೀತೆ ಹಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್.ಕೆ..ಎಸ್, ರಾಜ್ಯ ಓಬಿಸಿ ವಿಠ್ಠಲ್ ಪೂಜಾರಿ ಐರೋಡಿ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚೇತನ್ ಖಾರ್ವಿ ಉಪಸ್ಥಿತರಿದ್ದರು.

ವಿಶೇಷವಾಗಿ ಬೃಹತ್ ಪಂಜಿನ ಮೆರವಣಿಗೆಯಲ್ಲಿ ೧೫ಕ್ಕೂ ಮಿಕ್ಕಿ ನಿವೃತ್ತ ಸೈನಿಕರು ಭಾಗಿಯಾಗಿ ಮೆರವಣಿಗೆಗೆ ಮೆರಗು ನೀಡಿದರು.
ಈ ಕಾರ್ಯಕ್ರಮದಲ್ಲಿ ಕುಂದಾಪುರ ಮಂಡಲದ ಪದಾಧಿಕಾರಿಗಳು, ವಿವಿಧ ಮೋರ್ಚದ ಸರ್ವ ಪದಾಧಿಕಾರಿಗಳು, ಸಂಘಟನೆಯ ಪ್ರಮುಖರು, ಪಕ್ಷದ ಮುಖಂಡರು, ಕಾರ್ಯಕರ್ತರು, ದೇಶಾಭಿಮಾನಿಗಳು ಈ ವೇಳೆ ಹಾಜರಿದ್ದರು.

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!