Sunday, October 13, 2024

ಕುಂದಾಪುರ ಎಕ್ಸಲೆಂಟ್ ಪಿಯು ಕಾಲೇಜನಲ್ಲಿ RANK ವಿಜೇತ 37 ವಿದ್ಯಾರ್ಥಿಗಳಿಗೆ ಸನ್ಮಾನ

ಕುಂದಾಪುರ: ಸುಣ್ಣಾರಿಯ ಎಕ್ಸಲೆಂಟ್ ಕಾಲೇಜ್ ನಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ದ್ವಿತೀಯ ಪಿಯುಸಿ ಇಲಾಖಾ ಪರೀಕ್ಷೆಯಲ್ಲಿ RANK ವಿಜೇತ 37 ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿಯಾದ ಎಂ ಎಂ ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಸನ್ಮಾನ ಕಾರ್ಯಕ್ರಮ ಆಯೋಜಿಸಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇದರ ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಇವತ್ತು ಕೇವಲ ಇಂಜಿನಿಯರ್ ಡಾಕ್ಟರ್ ಮಾತ್ರವಲ್ಲದೆ ಬೇರೆ ಬೇರೆ ಸಾವಿರಾರು ಉದ್ಯೋಗ ಅವಕಾಶಗಳು ಇವತ್ತು ತೆರೆದುಕೊಂಡಿದೆ. ಅದನ್ನು ಸುಧುಪಯೋಗಪಡಿಸಿಕೊಳ್ಳಬೇಕು ಇವತ್ತಿನ ಯುವ ಜನತೆಯಲ್ಲಿ ಮಾನಸಿಕ ನೆಮ್ಮದಿ ಹದಗೆಡುತ್ತಿದೆ. ಹಾಗೆ ನಾವು ಕಲಿತ ಶಾಲೆ ನಮ್ಮ ತಂದೆ ತಾಯಿ ಮತ್ತು ನಮ್ಮ ಊರನ್ನು ಮರೆಯಬಾರದು ಎಂದು ಹೇಳಿದರು.

ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಅವರು ಮಾತನಾಡಿ ಎಕ್ಸಲೆಂಟ್ ಸಂಸ್ಥೆ ಆರಂಭದಿಂದ ಇಲ್ಲಿವರೆಗೆ ಅನೇಕ RANK ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುತ್ತಾ ಬಂದಿದೆ. ಇವತ್ತಿನ ಕಾಲಮಟ್ಟಕ್ಕೆ ಸರಿಸಮನಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ವಿದ್ಯಾರ್ಥಿಗಳಿಗೆ ನಡೆಸುತ್ತಾ ಬಂದಿದ್ದೇವೆ. ಅದರ ಫಲವಾಗಿ ಸುಣ್ಣಾರಿ ಎಕ್ಸಲೆಂಟ್ ಸಂಸ್ಥೆ 37 RANKಗಳನ್ನ ತನ್ನ ಮುಡಿಗೇರಿಸಿಕೊಂಡಿದೆ ಎಂದು ಹೇಳಿದರು.

ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಸರೋಜಿನಿ ಪಿ ಆಚಾರ್ಯ ರ್‍ಯಾಂಕ್ ವಿಜೇತರಿಗೆ ಶುಭಕಾಮನೆ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ ಎಂ ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ನ ಹಾಗೂ ಎಕ್ಸಲೆಂಟ್ ಪಿಯು ಕಾಲೇಜಿನ ಅಧ್ಯಕ್ಷರು ಆಗಿರುವ ಎಂ. ಮಹೇಶ ಹೆಗ್ಡೆಯವರು ಗ್ರಾಮೀಣ ಭಾಗದಲ್ಲಿ ನಾನು ಕಟ್ಟಿ ಬೆಳೆಸಿದಂತ ಈ ವಿದ್ಯಾ ಸಂಸ್ಥೆ ಕಾಲಕ್ಕೆ ಯಾವೆಲ್ಲ ರೀತಿಯ ಶೈಕ್ಷಣಿಕ ಪರಿವರ್ತನೆ ಆಗಬೇಕು ಅದಕ್ಕೆ ಅನುಗುಣವಾಗಿ ಉತ್ತಮ ಉಪನ್ಯಾಸಕರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಇವತ್ತು ಜೆ‌ಇ‌ಇ ಅಡ್ವಾನ್ಸ್ ಅಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು ನಾವು ಪಡೆದುಕೊಂಡಿದ್ದೇವೆ ಎಂದು ಹೇಳಲು ಹೆಮ್ಮೆ ಪಡುತ್ತಿದ್ದೇನೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ ಎಂ ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ನ ಹಾಗೂ ಎಕ್ಸಲೆಂಟ್ ಪಿಯು ಕಾಲೇಜಿನ ಅಧ್ಯಕ್ಷರು ಆಗಿರುವಂತ ಎಂ. ಮಹೇಶ ಹೆಗ್ಡೆಯವರು ಗ್ರಾಮೀಣ ಭಾಗದಲ್ಲಿ ನಾನು ಕಟ್ಟಿ ಬೆಳೆಸಿದಂತ ಈ ವಿದ್ಯಾ ಸಂಸ್ಥೆ ಕಾಲಕ್ಕೆ ಯಾವೆಲ್ಲ ರೀತಿಯ ಶೈಕ್ಷಣಿಕ ಪರಿವರ್ತನೆ ಆಗಬೇಕು ಅದಕ್ಕೆ ಅನುಗುಣವಾಗಿ ಉತ್ತಮ ಉಪನ್ಯಾಸಕರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಇವತ್ತು ಜೆ‌ಇ‌ಇ ಅಡ್ವಾನ್ಸ್ ಅಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದೇವೆ ಎಂದರು.

ರಾಸಾಯನಶಾಸ್ತ್ರದ ಉಪನ್ಯಾಸಕಿ ಚರಿಷ್ಮಾ ಸ್ವಾಗತಿಸಿ, ರ್‍ಯಾಂಕ್ ವಿಜೇತರ ಪಟ್ಟಿಯನ್ನು ಭೌತಶಾಸ್ತ್ರದ ಉಪನ್ಯಾಸಕಿ ವಿದ್ಯಾ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕಿ ದಿವ್ಯ ಶೆಟ್ಟಿ ವಾಚಿಸಿದರು. ಉಪನ್ಯಾಸಕರಾದ ಶ್ರೀನಿವಾಸ್ ವೈದ್ಯ ಅವರು ಕಾರ್ಯಕ್ರಮ ನಿರೂಪಿಸಿ ಆಂಗ್ಲ ಭಾಷೆ ಉಪನ್ಯಾಸಕಿ ಸುರೇಖಾ ಆಚಾರ್ಯ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!