Sunday, September 8, 2024

ಆಡಳಿತರೂಢ ಕಾಂಗ್ರೆಸ್‌ ವಿರುದ್ಧ ಕೇಳಿ ಬಂತು ಮತ್ತೊಂದು ಭ್ರಷ್ಟಾಚಾರದ ಆರೋಪ : ಜಮೀರ್‌ ಅಹ್ಮದ್‌ ಬಗ್ಗೆ ಯತ್ನಾಳ್‌ ಬಾಂಬ್ !?

ಜನಪ್ರತಿನಿಧಿ (ಬೆಂಗಳೂರು) : ಆಡಳಿತರೂಢ ಕಾಂಗ್ರೆಸ್‌ ಸರ್ಕಾರಕ್ಕೆ ಮತ್ತೊಂದು ಆಘಾತ ಎದುರಾಗಿದೆ. ವಾಲ್ಮೀಕಿ ನಿಗಮ, ಮುಡಾ ಪ್ರಕರಣಗಳ ನಂತರ ಈಗ ಮತ್ತೊಂದು ಬಹುದೊಡ್ಡ ಹಗರಣದ ಬಗ್ಗೆ ಆರೋಪ ಕೇಳಿ ಬಂದಿದೆ.

ಸಿದ್ದರಾಮಯ್ಯ ನೇತೃತೌದ ಸಚಿವ ಸಂಪುಟದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಜಮೀರ್‌ ಅಹ್ಮದ್‌ ವಿರುದ್ಧ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಯತ್ನಾಳ್‌, ವಾಲ್ಮೀಕಿ ನಿಗಮದಂತೆ ಕರ್ನಾಟಕದಲ್ಲಿ ಇನ್ನೊಂದು ಕೇಂದ್ರ ಹಗರಣದ ಆಗರವಾಗಿದೆ ಎಂದು ಬಾಂಬ್‌ ಸಿಡಿಸಿದ್ದಾರೆ.

ಕರ್ನಾಟಕ ರಾಜ್ಯ ಹ್ಯಾಬಿಟೇಟ್ ಕೇಂದ್ರ, ಬೆಂಗಳೂರು ಎಂಬ ಒಂದು ಸಂಘಕ್ಕೆ ಸುಮಾರು 600 ಕೋಟಿ ಅನುದಾನವನ್ನು ಕರ್ನಾಟಕ ರಾಜ್ಯ ಪಾರದರ್ಶಕ ಕಾಯ್ದೆ ಉಲ್ಲಂಘಿಸಿ ನೀಡಲಾಗಿದೆ. ಈ ಹ್ಯಾಬಿಟೇಟ್ ಕೇಂದ್ರಕ್ಕೆ ಯಾವ ಸಾಂವಿಧಾನಿಕ ಮಾನ್ಯತೆಯೂ ಇಲ್ಲದಿದ್ದರೂ ಮಂತ್ರಿ ಜಮೀರ್ ಅಹ್ಮದ್ ನೇತೃತ್ವದಲ್ಲಿ ಈ ಸಂಸ್ಥೆಗೆ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡಲಾಗಿದೆ.

ಈ ಹ್ಯಾಬಿಟೇಟ್ ಕೇಂದ್ರ ಸರ್ಕಾರಿ ಸಂಸ್ಥೆಯಲ್ಲ, ಇದರಲ್ಲಿ ಕಾರ್ಯನಿರ್ವಹಿಸುತ್ತಿರುವವರು ಸರ್ಕಾರೀ ನೌಕರರೂ ಅಲ್ಲ, ಇಲ್ಲಿ ಎಲ್ಲ ಮಾಯಾ! ಈ ಸಂಸ್ಥೆ ವಿಶೇಷವಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾಮಗಾರಿಗಳನ್ನು ಕೈಗೊಂಡಿರುವುದು ಮಂತ್ರಿ ಹಾಗು ಅಧಿಕಾರಿಗಳು ಕೈಜೋಡಿಸಿರುವಂತೆ ಕಾಣಿಸುತ್ತದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದಲೂ ಈ ಹ್ಯಾಬಿಟೆಟ್ ಕೇಂದ್ರಕ್ಕೆ ಹಣ ವರ್ಗಾವಣೆ ಮಾಡಲಾಗಿದೆ. ವಾಲ್ಮೀಕಿ ನಿಗಮದ ಅಕ್ರಮ ಬಯಲಾದ ದಿನದಿಂದ ಸಚಿವ ಜಮೀರ್ ಈ ಹ್ಯಾಬಿಟೇಟ್ ಕೇಂದ್ರದ ಸಭೆಗಳನ್ನು ಪ್ರತಿನಿತ್ಯವೂ ಮಾಡಿ ಏನನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ? ಯಾವ ಕಡತಕ್ಕೆ ಬೆಂಕಿ ಬೀಳಲಿದೆ? ಈ ಹಣ ಯಾವ ಚುನಾವಣೆಗೆ ಬಳಸಲಾಗಿದೆ? ಎಂದು ಯತ್ನಾಳ್‌  ಪ್ರಶ್ನಿಸಿದ್ದಾರೆ.

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾಡಿರುವ ಟ್ವೀಟ್‌

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!