Tuesday, October 8, 2024

ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ ರೈತರ ನಿಯೋಗ ಎಂಎಸ್‌ಪಿ ಕಾನೂನು ಖಾತ್ರಿ ಒತ್ತಡದ ಭರವಸೆ !

ಜನಪ್ರತಿನಿಧಿ (ನವ ದೆಹಲಿ) : ರೈತರ ನಿಯೋಗ ಇಂದು(ಬುಧವಾರ) ಲೋಕಸಭಾ ವಿಧಾನ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ.

ರಾಹುಲ್‌ ಭೇಟಿ ಮಾಡಿದ ರೈತರ ಆಯೋಗ, ರೈತರ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದೆ. ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತ್ರಿ ನೀಡಬೇಕು ಎಂಬ ರೈತರ ಮುಖ್ಯ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮೇಲೆ ʼಇಂಡಿಯಾʼ ಮೈತ್ರಿಕೂಟ ಒತ್ತಡ ಹೇರಲಿದೆ ಎಂದು ಋಹುಲ್‌ ರೈತರ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ಕರ್ನಾಟಕ, ಪಂಜಾಬ್‌, ಹರಿಯಾಣ. ಉತ್ತರ ಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳ ಹನ್ನೆರಡು ಮುಖಂಡರನ್ನು ಒಳಗೊಂಡ ರೈತರ ನಿಯೋಗವು ಸಂಸತ್‌ ಸಂಕೀರ್ಣದಲ್ಲಿ ರಾಹುಲ್‌ ಅವರನ್ನು ಭೇಟಿಯಾಗಿ ಚರ್ಚೆ ಮಾಡಿದೆ.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌, ಪಂಜಾಬ್‌ನ ಮಾಜಿ ಸಿಎಂ ಚರಣ್‌ಜಿತ್‌ ಸಂಗ್‌ ಚೆನ್ನಿ, ಪಂಜಾಬ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಮರಿಂದರ್‌ ಸಿಂಗ್‌ ಸೇರಿದಂತೆ ಕಾಂಗ್ರೆಸ್‌ನ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಆಯಾ ರಾಜ್ಯಗಳಲ್ಲಿ ರೈರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಾಗಿ ರೈತರ ಆಯೋಗದಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!