Thursday, November 14, 2024

NEET-UG 2024 ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿಚಾರಣೆ : ಸಿಜೆಐ ಮತ್ತು ವಕೀಲರ ನಡುವೆ ತೀವ್ರ ವಾಗ್ವಾದ

ಜನಪ್ರತಿನಿಧಿ (ನವದೆಹಲಿ) : NEET-UG 2024 ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿಚಾರಣೆ ಆಗುತ್ತಿರುವ ಸಂದರ್ಭದಲ್ಲಿ CJI ಹಾಗೂ ವಕೀಲರ ನಡುವೆ ವಾಗ್ವಾದ ತೀವ್ರಗೊಂಡು, ಸಿಜೆಐ ವಕೀಲರಿಗೆ ಎಚ್ಚರಿಕೆ ನೀಡಿದ ಪ್ರಸಂಗ ಸುಪ್ರೀಂ ಕೋರ್ಟ್‌ ನಲ್ಲಿ ನಡೆಯಿತು.

ಕೋರ್ಟ್ ನ ಪ್ರಕ್ರಿಯೆಗಳ ಬಗ್ಗೆ ನಿರ್ದೇಶನ ನೀಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ವಕೀಲರಿಗೆ ಸಿಜೆಐ ಹೇಳಿದರು. ಸಿಜೆಐ ಮಾತನ್ನು ವಕೀಲರು ನಿರಾಕರಿಸಿದಾಗ ತೀವ್ರ ಅಸಮಾಧಾನಗೊಂಡ ಸಿಜೆಐ ಡಿವೈ ಚಂದ್ರಚೂಡ್, ನಿಮ್ಮನ್ನು ಕೋರ್ಟ್ ನಿಂದ ಹೊರಗೆ ಕಳುಹಿಸಬೇಕಾಗುತ್ತದೆ, ಇದು ನಿಮಗೆ ನೀಡುತ್ತಿರುವ ಎಚ್ಚರಿಕೆ ಎಂದು ಅಡ್ವೊಕೇಟ್ ಮ್ಯಾಥ್ಯೂಸ್ ಜೆ ನೆಡುಂಪಾರಗೆ ಸಿಜೆಐ ಹೇಳಿದ್ದಾರೆ.

ಅಡ್ವೊಕೇಟ್ ಮ್ಯಾಥ್ಯೂಸ್ ಜೆ ನೆಡುಂಪಾರ ಕೆಲವು ಅರ್ಜಿದಾರರನ್ನು ಪ್ರತಿನಿಧಿಸುತ್ತಿದ್ದು, ಮುಖ್ಯ ವಕೀಲರಾದ ನರೇಂದ್ರ ಹೂಡಾ ತಮ್ಮ ವಾದವನ್ನು ಮುಂದುವರೆಸುತ್ತಿದ್ದಾಗ, ತಮಗೂ ವಾದ ಮಂಡಿಸಲು ಅವಕಾಶ ಕೊಡಬೇಕು ಎಂದು ಪದೇ ಪದೇ ಆಗ್ರಹಿಸುತ್ತಿದ್ದರು.

ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ಹೂಡಾ ಅವರು ತಮ್ಮ ವಾದ ಮಂಡಿಸಿದ ನಂತರ ವಾದಿಸಲು ಅವಕಾಶ ನೀಡುತ್ತದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ನೆಡುಂಪಾರ ಅವರಿಗೆ ತಿಳಿಸಿದರು.

ಅಡ್ವೊಕೇಟ್ ಮ್ಯಾಥ್ಯೂಸ್ ಜೆ ನೆಡುಂಪಾರ ಕೆಲವು ಅರ್ಜಿದಾರರನ್ನು ಪ್ರತಿನಿಧಿಸುತ್ತಿದ್ದು, ಮುಖ್ಯ ವಕೀಲರಾದ ನರೇಂದ್ರ ಹೂಡಾ ತಮ್ಮ ವಾದವನ್ನು ನಡೆಸುತ್ತಿದ್ದಾಗ, ತಮಗೂ ವಾದ ಮಂಡಿಸಲು ಅವಕಾಶ ಮಾಡಿಕೊಡಬೇಕೆಂದು ಪದೇ ಪದೇ ಆಗ್ರಹಿಸುತ್ತಿದ್ದರು.

ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ಹೂಡಾ ತಮ್ಮ ವಾದ ಮಂಡಿಸಿದ ನಂತರ ವಾದಿಸಲು ಅವಕಾಶ ನೀಡುತ್ತದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ನೆಡುಂಪಾರ ಅವರಿಗೆ ತಿಳಿಸಿದರು.

ಆದರೆ ಸಿಜೆಐ ಮಾತನ್ನು ನಿರಾಕರಿಸಿ ನೆಡುಂಪಾರ ಪದೇ ಪದೇ ವಾದ ಮಾಡುತ್ತಿದ್ದ ಕಾರಣ, ಅಸಮಾಧಾನಗೊಂಡ ಸಿಜೆಐ, ನೀವು ಕುಳಿತುಕೊಳ್ಳದೇ ಇದ್ದಲ್ಲಿ ನಿಮ್ಮನ್ನು ಕೋರ್ಟ್ ನಿಂದ ಹೊರ ಹಾಕಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ವಕೀಲರು, ನ್ಯಾಯಮೂರ್ತಿಗಳಿಂದ ನನಗೆ ಗೌರವ ಸಿಗದೇ ಇದ್ದಲ್ಲಿ, ನಾನೇ ಕೋರ್ಟ್ ನಿಂದ ಹೊರನಡೆಯುತ್ತೇನೆ ಎಂದು ಹೇಳಿದರು.

ಆದರೆ, ನ್ಯಾಯಾಲಯದಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ನೆಡುಂಪಾರ ದೂರುತ್ತಲೇ ಇದ್ದರು. “ದಯವಿಟ್ಟು ಸೆಕ್ಯೂರಿಟಿಯನ್ನು ಕರೆಯಿರಿ. ಅವರನ್ನು ನ್ಯಾಯಾಲಯದಿಂದ ತೆಗೆದುಹಾಕುವಂತೆ ನಾವು ಕೇಳುತ್ತೇವೆ” ಎಂದು ಸಿಜೆಐ ಸಿಟ್ಟಿಗೆದ್ದು ಹೇಳಿದ ಪ್ರಸಂಗಕ್ಕೆ ಸುಪ್ರೀಂ ಕೋರ್ಟ್‌ ಸಾಕ್ಷಿಯಾಯಿತು.

ನೀವು ಜನಪ್ರಿಯತೆಗಾಗಿ ಮಾತನಾಡಬೇಕಿಲ್ಲ. ನೀವು ನನ್ನ ಮಾತನ್ನು ಕೇಳಬೇಕಾಗುತ್ತದೆ. ನನ್ನ ನ್ಯಾಯಾಲಯದ ಉಸ್ತುವಾರಿಯನ್ನು ನಾನು ಹೊಂದಿದ್ದೇನೆ” ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.

ಅಸಮಾಧಾನಗೊಂಡ ಅಡ್ವೊಕೇಟ್, ತಾವು ಕೋರ್ಟ್ ನಿಂದ ಹೊರಹೋಗುವುದಾಗಿ ಪದೇ ಪದೇ ಹೇಳುತ್ತಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಜೆಐ, ನಾನು ನಿಮ್ಮ ವಾದ ಆಲಿಸುತ್ತೆನೆ, ಹೂಡಾ ಅವರ ವಾದ ಮಂಡನೆ ಮುಕ್ತಾಯವಾಗಲಿ ಆ ಬಳಿಕ ನಿಮ್ಮ ವಾದ ಕೇಳುತ್ತೇನೆ, ಅದಕ್ಕೂ ಮುನ್ನ ನೀವು ಕೋರ್ಟ್ ನಿಂದ ಹೊರನಡೆಯುವುದಾದರೆ ಅದು ನಿಮ್ಮ ಇಷ್ಟ ಎಂದು ಹೇಳಿದರು.

https://x.com/nabilajamal_/status/1815743245726711954

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!