spot_img
Tuesday, February 18, 2025
spot_img

ಉಡುಪಿ ಶಾಸಕರಿಗೆ ರಾಜಕೀಯ ಪ್ರಬುದ್ಧತೆ ಇಲ್ಲ : ವಿಕಾಸ್ ಹೆಗ್ಡೆ ಕಿಡಿ

ಜನಪ್ರತಿನಿಧಿ (ಉಡುಪಿ) : ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರ ಸಮುದ್ರ ಕೊರೆತ ಹಾಗೂ ನೆರೆ ಹಾನಿ ವೀಕ್ಷಣೆಯನ್ನು ಚಿಕ್ಕಿ ತಿಂದು ಹೋದ ಹಾಗೆ ಆಯಿತು ಎಂದು ಲೇವಡಿ ಮಾಡಿರುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣರೇ ಹಿಂದೆ ನಿಮ್ಮ ಸರ್ಕಾರ ಇರುವಾಗ ನಿಮ್ಮ ಪಕ್ಷದ ಉಸ್ತುವಾರಿ ಸಚಿವರು ಸಮುದ್ರ ಕೊರೆತ ಹಾಗೂ ನೆರೆ ವೀಕ್ಷಣೆಗೆ ಬಂದು ಐಸ್ ಕ್ಯಾಂಡಿ ತಿಂದು ಹೋದದ್ದಾ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪ್ರಶ್ನೆ ಮಾಡಿದ್ದಾರೆ.

ಉಡುಪಿ ಜಿಲ್ಲೆಯ ಐದೂ ಶಾಸಕರು ಬಿಜೆಪಿಯವರಾಗಿದ್ದರೂ ಸಹ ರಾಜ್ಯದ ಕಾಂಗ್ರೆಸ್ ಸರ್ಕಾರ ಜಿಲ್ಲೆಯ ಅಭಿವೃದ್ಧಿಯ ವಿಚಾರದಲ್ಲಿ ವಿರೋಧ ಪಕ್ಷದ ಶಾಸಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದರೂ ಸಹ ಜಿಲ್ಲೆಯ ಶಾಸಕರು ಅಭಿವೃದ್ಧಿಯನ್ನು ಮರೆತು ಕೇವಲ ಸಣ್ಣ ಮಟ್ಟದ ರಾಜಕಾರಣ ಮಾಡುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ವಿಕಾಸ್‌ ಆಕ್ರೋಶ ಹೊರ ಹಾಕಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಭೇಟಿ ನೀಡಿದಾಗ ಅವರನ್ನು ಸಂಪರ್ಕ ಮಾಡಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅವರಿಗೆ ಮನವರಿಕೆ ಮಾಡುವುದು ಇಲ್ಲಿನ ಶಾಸಕರುಗಳ ಕರ್ತವ್ಯ, ಆದರೆ ಅದನ್ನಾ ಬಿಟ್ಟು ಕೇವಲ ಟೀಕೆ ಮಾಡುವುದು ಮಾತ್ರ ತಮ್ಮ ಕರ್ತವ್ಯ ಎಂದು ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರು ತಿಳಿದಿರುವುದು ಅವರಿನ್ನೂ ರಾಜಕೀಯ ಪ್ರಬುದ್ಧತೆ ಹೊಂದಲಿಲ್ಲ ಎನ್ನುವುದನ್ನು ಎತ್ತಿ ತೋರಿಸುತ್ತಿದೆ ಎಂದು ಅವರು ಗಂಭೀರ ಆರೋಪಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!