Sunday, September 8, 2024

ಬೆಂಗಳೂರು ಬಂಟರ ಸಂಘದ ಚುನಾವಣೆ :ಅಧ್ಯಕ್ಷ ಸ್ಥಾನಕ್ಕೆ ಸಿಎ ಅಶೋಕ ಶೆಟ್ಟಿ ಎಂ ಸ್ಪರ್ಧೆ

ಬೆಂಗಳೂರು: (ಜನಪ್ರತಿನಿಧಿ ವಾರ್ತೆ) ಬೆಂಗಳೂರು ಬಂಟರ ಸಂಘದ ಚುನಾವಣೆ 2024-26 ಸಾಲಿನ ಚುನಾವಣೆ ಜುಲೈ 28ರಂದು ನಡೆಯಲಿದ್ದು ಅಧ್ಯಕ್ಷ ಸ್ಥಾನಕ್ಕೆ ಚತುರ ಸಂಘಟಕ, ಲೆಕ್ಕ ಪರಿಶೋಧಕ ಸಿಎ ಅಶೋಕ ಶೆಟ್ಟಿ ಎಂ ಸ್ಪರ್ಧೆ ಮಾಡುತ್ತಿದ್ದಾರೆ.

ಸಿಎ ಅಶೋಕ ಶೆಟ್ಟಿ ಎಂ ಅವರು ಈಗಾಗಲೇ ಬಂಟರ ಸಂಘದಲ್ಲಿ ಚಿರಪರಿಚಿತರು. ವಿವಿಧ ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಯಶಸ್ವಿ ಸಂಘಟಕರಾಗಿ, ಜನಸಾಮಾನ್ಯರ ನೋವು-ನಲಿವುಗಳಿಗೆ ಸ್ಪಂದಿಸುವ ನಾಯಕತ್ವ ಗುಣಗಳನ್ನು ಹೊಂದಿದವರು.

ಉಡುಪಿ ಜಿಲ್ಲೆಯ ಕಾರ್ಕಳದ ಸಂಬೆಟ್ಟು ಶೀನಪ್ಪ ಶೆಟ್ಟಿ ಮತ್ತು ಮುಲ್ಲಾಡ್ ಲಕ್ಷ್ಮಿ ಶೆಟ್ಟಿ ದಂಪತಿಯ ಪುತ್ರರಾಗಿ ಜನಿಸಿದ ಅಶೋಕ ಶೆಟ್ಟಿ ಸಿಎ ಪದವಿಯನ್ನು ಮೊದಲ ಪ್ರಯತ್ನದಲ್ಲೇ ಪೂರೈಸಿ ತನ್ನದೇ ಆದ ಲೆಕ್ಕ ಪರಿಶೋಧನೆ ಸಂಸ್ಥೆಯನ್ನು ಸ್ಥಾಪಿಸಿ ಪ್ರಸಿದ್ದ ಲೆಕ್ಕ ಪರಿಶೋಧಕರೆಂಬ ಖ್ಯಾತಿ ಪಡೆದಿದ್ದಾರೆ. ಎಂ.ಎಂ.ಎಸ್ ಎಂಡ್ ಕೊ. ಎಂಬ ಸಂಸ್ಥೆಯ ಮೂಲಕ ಅನೇಕ ಪ್ರತಿಷ್ಠಿತ ಕಂಪೆನಿಗಳು ಹಾಗೂ ಬ್ಯಾಂಕ್‍ಗಳ ಲೆಕ್ಕಪರಿಶೋಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

1994 ರಿಂದ 2008 ರ ತನಕ ಬೆಂಗಳೂರು ಬಂಟರ ಸಂಘದ ಆಂತರಿಕ ಲೆಕ್ಕ ಪರಿಶೋಧಕರಾಗಿ, 2004 ರಿಂದ 2014 ರವರೆಗೆ ಹಾಗೂ 2022 ರಿಂದ 2024 ರವರೆಗೆ ಹೀಗೆ ಎರಡು ಅವಧಿಗೆ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಲಯನ್ಸ್ ಕ್ಲಬ್ ಜಯಮಹಲ್ ಇದರ ಕಾರ್ಯದರ್ಶಿಯಾಗಿ, ಬಳಿಕ ಅಧ್ಯಕ್ಷರಾಗಿ ಲಯನ್ಸ್ ವೃದ್ಧಾಶ್ರಮ ಸೇವಾ ಸಂಸ್ಥೆಯ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 2022 ರಿಂದ 2025 ರೈ ವರೆಗೆ ವೈಟ್ ಫೀಲ್ಡ್ ಎಕ್ಸ್ಪೋರ್ಟ್ ಪ್ರಮೋಶನ್ ಪಾರ್ಕ್ ಇಂಡಸ್ಟ್ರಿಯಲ್ ಅಸೋಸಿಯೇಷನ್ ಇದರ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದಾರೆ. 2020 ರಲ್ಲಿ ಸ್ವಯಂಸೇವಕರಾಗಿ ಸುಮಾರು 25000 ಆಹಾರದ ಕಿಟ್ ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. 2021 ರಲ್ಲಿ ಕೋವಿಡ್ ಕ್ಯಾರ್ ಸೆಂಟರ್ ಗಳನ್ನು ನಡೆಸಿ ಜನರಲ್ಲಿ ಕೋವಿಡ್ ಕುರಿತು ಜನಜಾಗೃತಿ ಮೂಡಿಸಿದ್ದಾರೆ. 2022 ರಲ್ಲಿ ಓರ್ವ ಸ್ವಯಂ ಸೇವಕನ ನೆಲೆಯಲ್ಲಿ ಸುಮಾರು ಎರಡೂವರೆ ಕೋಟಿ ಧನ ಸಂಗ್ರಹ ಮಾಡಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. 2016 ರಿಂದ 2024ರ ಸಮಯ ಮುಲ್ಲಾಡ್ ಸರ್ಕಾರಿ ಶಾಲೆಯ ಪುನಃ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇದೀಗ ಪ್ರತಿಷ್ಠಿತ ಬೆಂಗಳೂರು ಬಂಟರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧೆ ಮಾಡುತ್ತಿದ್ದಾರೆ.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!