Sunday, September 8, 2024

ಮಡಗಾಂವ್ ಮಂಗಳೂರು ಜಂಕ್ಷನ್ ಮಧ್ಯೆ ಮೂರು ದಿನಗಳ ವಿಶೇಷ ಲಿಂಕ್ ರೈಲಿನ ವ್ಯವಸ್ಥೆ

ಕುಂದಾಪುರ: ರಾಜಧಾನಿ ಬೆಂಗಳೂರು ಮತ್ತು ಕರಾವಳಿ ನಡುವೆ ಕಡಿದು ಹೋದ ರಸ್ತೆ ಸಂಪರ್ಕಕ್ಕೆ ಪರ್ಯಾಯವಾಗಿ ರೈಲು ವ್ಯವಸ್ತೆಗೆ, ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಕೈಗೊಂಡ ಕ್ಷಿಪ್ರ ನಡೆಯಿಂದಾಗಿ ಬೆಂಗಳೂರು ಮಂಗಳೂರು ರೈಲಿಗೆ ಮಡಗಾಂವ್ ಮಂಗಳೂರು ಜಂಕ್ಷನ್ ಮಧ್ಯೆ ಮೂರು ದಿನಗಳ ವಿಶೇಷ ಲಿಂಕ್ ರೈಲಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಸಂಸದರಿಗೆ ಸಮಸ್ಯೆಯ ಆಳದ ಬಗ್ಗೆ ಮಾಹಿತಿ ನೀಡಿದ್ದು , ಅದಕ್ಜೆ ತಕ್ಷಣವೇ ಪ್ರತಿಕ್ರಿಯಿಸಿದ ಸಂಸದರು ರೈಲ್ವೇ ರಾಜ್ಯ ಸಚಿವ ಸೋಮಣ್ಣನವರ ಬಳಿ ತಕ್ಷಣಕ್ಕೆ ಲಿಂಕ್ ಸೇವೆಗಳ ಆರಂಭಕ್ಕೆ ತಿಳಿಸಿದರಲ್ಲದೇ, ಮಳೆಗಾಲದ ಸಮಸ್ಯೆ ಜಾಸ್ತಿ ಇರುವ ಅವದಿಯಲ್ಲಿ ಬೆಂಗಳೂರು ಕಾರವಾರ ಮದ್ಯೆ ಪಡೀಲ್ ಬೈಪಾಸ್ ಮಾರ್ಗದ ವಿಶೇಷ ರೈಲಿಗೆ ಬೇಡಿಕೆ ಇಟ್ಟಿದ್ದಾರೆ.

ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ಇಂಜಿನ್ ಬದಲಾವಣೆ ,ನೀರು ತುಂಬುವಿಕೆಯಂತ ವಿಳಂಭದ ಕಾರಣದಿಂದ ಪ್ರತ್ಯೇಕ ಲಿಂಕ್ ರೈಲಿಗೆ ಸಂಸದರು ಸೂಚಿಸಿದ್ದು, ಬೆಂಗಳೂರು ಮಂಗಳೂರು ವಿಶೇಷ ರೈಲು ಬಂದ ಕೆಲವೇ ಹೊತ್ತಲ್ಲಿ ಲಿಂಕ್ ರೈಲು ಉಡುಪಿ ಕುಂದಾಪುರ ಮಾರ್ಗವಾಗಿ ಗೋವಾ ಕಡೆ ತೆರಳಲಿದೆ. ಈ ಸೇವೆ ಮೂರು ದಿನಗಳ ಕಾಲ ಮುಂದುವರಿಯಲಿದ್ದು ಪ್ರಯಾಣಿಕರು ಬಳಸುವಂತೆ ಸಲಹೆ ನೀಡಲಾಗಿದೆ.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!