Tuesday, October 8, 2024

ಉಡುಪಿ ಜಿಲ್ಲೆಯಲ್ಲಿ ಕುಮ್ಕಿ ಜಮೀನುಗಳನ್ನು 94 ‘ಸಿ’ ಮತ್ತು ಅಕ್ರಮ-ಸಕ್ರಮ ಮಂಜೂರಾತಿಗೆ ಅವಕಾಶವಿಲ್ಲ-ಕಿರಣ್ ಕೊಡ್ಗಿ ಪ್ರಶ್ನೆಗೆ ಕಂದಾಯ ಸಚಿವರ ಉತ್ತರ

ಬೆಂಗಳೂರು: ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಕುಮ್ಕಿ ಜಮೀನುಗಳನ್ನು 94 ’ಸಿ’ ಮತ್ತು ಅಕ್ರಮ-ಸಕ್ರಮ ಮಂಜೂರಾತಿಗೆ ಅವಕಾಶವಿರುವುದಿಲ್ಲ ಎಂದು ರಾಜ್ಯ ಕಂದಾಯ ಸಚಿವರಾದ ಕೃಷ್ಣ ಬೈರೆಗೌಡ ತಿಳಿಸಿದ್ದಾರೆ.

ವಿಧಾನಸಭಾ ಅಧಿವೇಶನದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರ ಪ್ರಶ್ನೆಗೆ ಅವರು ಉತ್ತರಿಸಿದರು.
ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಕುಮ್ಮಿ ಜಮೀನುಗಳನ್ನು 94ಸಿ ಮತ್ತು ಅಕ್ರಮ ಸಕ್ರಮ ಮಂಜೂರಾತಿಗೆ ಇರುವ ಮಾರ್ಗಸೂಚಿಗಳೇನು? ಹಾಗೂ ಕಳೆದ ಅನೇಕ ವರ್ಷಗಳಿಂದ ಕೃತವಳಿ ಮಾಡಿಕೊಂಡು ವಾಸ್ತವ್ಯ ಹೊಂದಿದ್ದು, ಕುಮ್ಕಿ ಜಮೀನು ಎಂಬುದಾಗಿ ದಾಖಲಾತಿಯಾಗಿರುವುದರಿಂದ 94 ಸಿ ಮತ್ತು ಅಕ್ರಮ ಸಕ್ರಮೀಕರಣ ಯೋಜನೆಯಲ್ಲಿ ಮಂಜೂರಾತಿಗೆ ಬಾಕಿ ಉಳಿದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಕಿರಣ್ ಕುಮಾರ ಕೊಡ್ಗಿ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಜನವರಿ ೨೦೧೫ರ ಪೂರ್ವದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಾಸದ ಮನೆಗಳನ್ನು ಸಕ್ರಮಗೊಳಿಸುವ ಸಂಬಂಧ ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ 30×40 40×60 ಮತ್ತು50×80 ಅಡಿ ಅಳತೆಯ ವಾಸದ ಮನೆಗಳನ್ನು ಸಕ್ರಮಗೊಳಿಸಲು ಅವಕಾಶವಿದೆ. ಅರ್ಜಿಗಳನ್ನು ಸ್ವೀಕರಿಸಲು 31.03.2022 ರವರೆಗೆ ಕಾಲಾವಕಾಶವನ್ನು ವಿಸ್ತರಿಸಲಾಗಿತ್ತು. ಸ್ವೀಕರಿಸಿದ ಅರ್ಜಿಗಳನ್ನು ಇತ್ಯರ್ಥಪಡಿಸಲು ದಿನಾಂಕ 31.03.2023 ರವರೆಗೆ ಅವಕಾಶ ಕಲ್ಪಿಸಲಾಗಿತ್ತು.

ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 79 (2)ರನ್ವಯ “ಉಪ-ಪ್ರಕರಣ (1)ರಲ್ಲಿ ಏನೇ ಒಳಗೊಂಡಿದ್ದಾಗ್ಯೂ, ಆದರೆ ರಾಜ್ಯ ಸರ್ಕಾರವು ಕಾಲಕಾಲಕ್ಕೆ ಹೊರಡಿಸಬಹುದಾದಂಥ ಸಾಮಾನ್ಯ ಅಥವಾ ವಿಶೇಷ ಆದೇಶಗಳಿಗೊಳಪಟ್ಟು ರೂಢಿಯಂತೆ ಅಂಥ ಯಾವುದೇ ಅನುಭೋಗಿಸಲಾಗುತ್ತಿರುವ ಆದೇಶದ ಮೇರೆಗೆ ವಿಶೇಷಾಧಿಕಾರಗಳು ಅಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕುಮ್ಕಿ ಭೂಮಿಗಳು, ಬಾಣಿ ಭೂಮಿಗಳು ಮತ್ತು ಕಾಣೆ ಭೂಮಿಗಳು, ಉತ್ತರ ಕನ್ನಡ ಜಿಲ್ಲೆಯಲ್ಲಿನ ಬೆಟ್ಟ ಭೂಮಿಗಳು ಮತ್ತು ಹಾಡಿ ಭೂಮಿಗಳು, ಮೈಸೂರು ಪ್ರದೇಶದಲ್ಲಿನ ಕಾನು ಮತ್ತು ಸೊಪ್ಪಿನ ಬೆಟ್ಟ ಭೂಮಿಗಳು, ಕೊಡಗಿನ ಜಮ್ಮಾ ಮತ್ತು ಬಾಣೆ. ಭೂಮಿಗಳು ಮತ್ತು ಹೈದರಾಬಾದ್ ಪ್ರದೇಶದಲ್ಲಿ ಮೋಟಸ್ಟಲ್ ತರಿ ಭೂಮಿಗಳು ಇವುಗಳ ಬಗೆಗಿನ ವಿಶೇಷಾಧಿಕಾರಗಳು ಮುಂದುವರಿಯತಕ್ಕದ್ದು” ಎಂದು ನಮೂದಿಸಲಾಗಿದೆ. ಆದ್ದರಿಂದ ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಕುಮ್ಮಿ ಸಮೀನುಗಳನ್ನು ೯೪ ’ಸಿ’ ಮತ್ತು ಅಕ್ರಮ-ಸಕ್ರಮ ಮಂಜೂರಾತಿಗೆ ಅವಕಾಶವಿರುವುದಿಲ್ಲ ಎಂದು ಸದನಕ್ಕೆ ತಿಳಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!