Sunday, October 13, 2024

ಹೆದ್ದಾರಿ ಸಂಚಾರ ಸ್ಥಗಿತ ಹಿನ್ನೆಲೆ ಗಗನಕ್ಕೇರಿದ ಮಂಗಳೂರು ಟು ಬೆಂಗಳೂರು, ಮುಂಬಯಿ ವಿಮಾನ ದರ !

ಜನಪ್ರತಿನಿಧಿ (ಮಂಗಳೂರು) : ಕರಾವಳಿಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಘಾಟ್ ಪ್ರದೇಶಗಳಲ್ಲಿ ಗುಡ್ಡ ಕುಸಿತವುಂಟಾಗಿ ಹೆದ್ದಾರಿ ಸಂಚಾರ ಸ್ಥಗಿತಗೊಂಡ ಕಾರಣದಿಂದಾಗಿ ಮಂಗಳೂರು-ಬೆಂಗಳೂರು ಸಂಚಾರ ದುಸ್ತರವಾಗಿದೆ. ಇನ್ನೊಂದೆಡೆ ಉತ್ತರ ಕನ್ನಡದ ಅಂಕೋಲದ ಶಿರೂರು ಬಳಿ ಗುಡ್ಡ ಹೆದ್ದಾರಿ ಮೇಲೆ ಕುಸಿದಿರುವ ಕಾರಣ ಮಂಗಳೂರಿಂದ ಉತ್ತರ ರಾಜ್ಯಗಳ ಸಂಪರ್ಕ ಕಡಿತವಾಗಿದೆ.

ಬೆಂಗಳೂರು ಮತ್ತು ಮುಂಬಯಿಗೆ ಸಂಚರಿಸಲು ಜನರು ಪರ್ಯಾಯವಾಗಿ ರೈಲು ಹಾಗೂ ವಿಮಾನದ ಪ್ರಯಾಣದ ಮುಖ ಮಾಡ೨ತ್ತಿದ್ದಾರೆ. ಆದರೆ ವಿಮಾನವನ್ನು ಹೆಚ್ಚಿಸಬೇಕಾದ ಸಂಸ್ಥೆಗಳು ವಿಮಾನ ಟಿಕೆಟ್ ದರವನ್ನೇ ಜಾಸ್ತಿ ಮಾಡಿ ಮತ್ತಷ್ಟು ಲಾಭ ಗಳಿಸಲು ಮುಂದಾಗಿವೆ.

ವಿಮಾನಯಾನ ದುಬಾರಿ: ಮಂಗಳೂರು – ಬೆಂಗಳೂರು ನಡುವೆ ವಿಮಾನ ದರ ಸಾಮಾನ್ಯವಾಗಿ 3ಸಾವಿರ ರೂ. ಇದ್ದು, ಮಳೆಯಿಂದ ರಸ್ತೆ ಸಂಚಾರ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ವಿಮಾನ ದರ ಮೂರು ಪಟ್ಟು ಹೆಚ್ಚಾಗಿ 9ಸಾವಿರ ರೂ. ದಾಟಿದೆ. ಭಾನುವಾರವಂತೂ ಈ ದರ 16ಸಾವಿರ ರೂ.ಗೆ ಏರಿಕೆಯಾಗಿದೆ. ಮಂಗಳೂರು- ಮುಂಬಯಿ ದರವೂ 12ಸಾವಿರ ರೂ. ದಾಟಿದೆ ಎಂದು ತಿಳಿದು ಬಂದಿದೆ.

ವಿಮಾನ ಸಂಖ್ಯೆಯೂ ಕಡಿತ : ಬೆಂಗಳೂರಿಗೆ ಪ್ರತಿದಿನ ತೆರಳುತ್ತಿದ್ದ 6 ವಿಮಾನಗಳು (ಏರ್ ಇಂಡಿಯಾ 2 ಮತ್ತು ಇಂಡಿಗೋ 4) ಪ್ರಯಾಣಿಸುತ್ತಿದ್ದು, ಜು.1ರಿಂದ 2 ಏರ್ ಇಂಡಿಯಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಈಗ ಪ್ರತಿದಿನ 4 ವಿಮಾನಗಳು ಮಾತ್ರ ಸಂಚರಿಸುತ್ತಿದ್ದು, ಸಾಮಾನ್ಯ ದಿನಗಳಲ್ಲೇ ಫ್ಲೈಟ್ ಸಂಪೂರ್ಣ ಭರ್ತಿಯಾಗುತ್ತಿದೆ. ಇದರಿಂದ ಈ ಸಂದಿಗ್ಧ ಸ್ಥಿತಿಯಲ್ಲಿ ಪ್ರಯಾಣಿಕರು ಟಿಕೆಟ್ ದೊರಕದೆ ಪರದಾಡುವಂತಾಗಿದೆ. ಮುಂಬಯಿಗೆ ಕೂಡ 5 ವಿಮಾನಗಳು ಸಂಚರಿಸುತ್ತಿದ್ದು ಅವುಗಳಲ್ಲಿಯೂ ಸೀಟ್ ಭರ್ತಿಯಾಗಿವೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!