Sunday, September 8, 2024

ಉಡುಪಿ ಜಿಲ್ಲೆಯಲ್ಲಿ ಡ್ರಗ್ಸ್ ದಂಧೆ, ನಿಯಂತ್ರಣಕ್ಕೆ ಕ್ರಮವೇನು? ಅಧಿವೇಶನದಲ್ಲಿ ಶಾಸಕ ಕಿರಣ್ ಕೊಡ್ಗಿ ಪ್ರಶ್ನೆ| ಗೃಹ ಸಚಿವರಿಂದ ಉತ್ತರ

ಬೆಂಗಳೂರು: (ಜನಪ್ರತಿನಿಧಿ ವಾರ್ತೆ) ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಡ್ರಗ್ಸ್ ವಿದ್ಯಾರ್ಥಿಗಳು ಸೇರಿದಂತೆ ಯುವ ಸಮುದಾಯಕ್ಕೆ ಅವ್ಯಾಹತವಾಗಿ ಸರಬರಾಜು ಆಗುತ್ತಿದ್ದು ಇದರಿಂದ ಯುವ ಸಮುದಾಯ ದಾರಿ ತಪ್ಪುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ? ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಿಧಾನಸಭೆಯ ಅಧಿವೇಶನದಲ್ಲಿ ಪ್ರಶ್ನಿಸಿದರು.

ಇದಕ್ಕೆ ಗೃಹಸಚಿವರಾದ ಡಾ.ಜಿ.ಪರಮೇಶ್ವರ ಉತ್ತರಿಸಿದರು. ಮಾದಕ ದ್ರವ್ಯಗಳ ಸಾಗಾಟ ಪ್ರಕರಣಗಳಲ್ಲಿ ಒಳಗೊಂಡ ವಿದ್ಯಾರ್ಥಿಗಳ ಸಂಖ್ಯೆ 2021ರಲ್ಲಿ 8, 2022ರಲ್ಲಿ 3, 2023ರಲ್ಲಿ 9, 2024 ಜುಲೈ 7ರ ತನಕ 2 ಪ್ರಕರಣ, ಮಾದಕ ದ್ರವ್ಯಗಳ ಸೇವನೆ ಪ್ರಕರಣಗಳಲ್ಲಿ ಒಳಗೊಂಡ ವಿದ್ಯಾರ್ಥಿಗಳ ಸಂಖ್ಯೆ 2021ರಲ್ಲಿ 12, 2022ರಲ್ಲಿ 104, 2023ರಲ್ಲಿ 109, 2024ರಲ್ಲಿ ಜುಲೈ 7ರ ತನಕ 36 ಪ್ರಕರಣಗಳು ವರದಿಯಾಗಿದೆ ಎನ್ನುವ ಉತ್ತರ ನೀಡಿದರು.

ಜನವರಿ 2023ರಿಂದ ಇಲ್ಲಿಯವರೆಗೆ ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಡ್ರಗ್ಸ್ ಸಂಬಂಧಿತ ಎಷ್ಟು ಪ್ರಕರಣಗಳು ದಾಖಲಾಗಿವೆ? ಎನ್ನುವ ಪ್ರಶ್ನೆಗೆ
ಉಡುಪಿ ಜಿಲ್ಲೆಯಲ್ಲಿ 2023ರಿಂದ ಇಲ್ಲಿಯವರೆಗೆ 2023ರಲ್ಲಿ 273, 2024 ಜುಲೈ 7ರ ತನಕ 79 ಪ್ರಕರಣಗಳು ದಾಖಲಾಗಿವೆ.

ಉಡುಪಿ ಜಿಲ್ಲೆಯಲ್ಲಿ ಡ್ರಗ್ಸ್‍ನಿಂದ ಸಾಮಾಜಿಕ ಅಶಾಂತಿ ಉಂಟಾಗಿದ್ದು ಇದನ್ನು ಸಂಪೂರ್ಣವಾಗಿ ತಡೆಯಲು ಸರ್ಕಾರ ತೆಗೆದುಕೊಂಡ ಕ್ರಮಗಳೇನು? ಎನ್ನುವ ಪ್ರಶ್ನೆಗೆ ಅಂಚೆ ಕಛೇರಿ, ಕೊರಿಯರ್ ಸೆಂಟರ್, ರೈಲ್ವೆ ನಿಲ್ದಾಣಗಳಲ್ಲಿ ಬರುವ ಅನಾಮಿಕ ಪಾರ್ಸೆಲ್‍ಗಳ ಮೇಲೆ ನಿಗಾ ಇರಿಸಲಾಗಿದೆ. ಪ್ರಕರಣಗಳಲ್ಲಿ ದಸ್ತಗಿರಿಯಾಗುವ ಆರೋಪಿಗಳನ್ನು ವಿಚಾರಿಸಿ ಸರಬರಾಜಿನ ಮೂಲವನ್ನು ಪತ್ತೆ ಹಚ್ಚಲು ಶ್ರಮಿಸಲಾಗುತ್ತಿದೆ. ದಸ್ತಗಿರಿಯಾಗಿ ಬಿಡುಗಡೆಗೊಳ್ಳುವ ಆರೋಪಿಗಳ ಚಲನವಲನಗಳ ಬಗ್ಗೆ ನಿಗಾ ಇರಿಸಿ, ಅವರು ಪುನಃ ಇಂತಹ ಕೃತ್ಯದಲ್ಲಿ ಒಳಗೊಳ್ಳುವ ಬಗ್ಗೆ ಖಚಿತಪಡಿಸಿಕೊಂಡು ಕ್ರಮ ಜರುಗಿಸಲಾಗುತ್ತದೆ. ಶಾಲಾ ಕಾಲೇಜು ಫ್ಯಾಕ್ಟರಿಗಳಲ್ಲಿ ಕಾರ್ಯಾಗಾರ ನಡೆಸಿ ಅರಿವು ಕಾರ್ಯಕ್ರಮ ಆಯೋಜನೆ, ಠಾಣಾ ವ್ಯಾಪ್ತಿಯಲ್ಲಿ ಮಾದಕ ದ್ರವ್ಯಗಳ ಪೂರೈಕೆ ಮಾಡುವುವರ ಬಗೆ ನಿಗಾ ಇರಿಸಿ ಅವರ ಮೇಲೆ ಹಾಗೂ ಅವರಿಂದ ಮಾದಕ ದ್ರವ್ಯಗಳನ್ನು ಪಡೆದುಕೊಳ್ಳುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುಇತ್ತದೆ. ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಮುಖಾಂತರ ಡ್ರಗ್ಸ್ ದಂಧೆ ಪತ್ತೆ ಮತ್ತು ತಡೆಯುವ ಬಗ್ಗೆ ಪರಿಣಾಮಕಾರಿಯಾಗಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಜರುಗಿಸಲಾಗುತ್ತದೆ. ಅಪಾರ್ಟ್‍ಮೆಂಟ್ ಅಸೋಸಿಯೇಶನ್ ಅವರ ಸಭೆ ನೆಡೆಸಿ ಸೂಕ್ತ ಸೂಚನೆಗಳನ್ನು ನೀಡಲಾಗಿದೆ. ಸಾಮಾಜಿಕ ಜಾಲತಾಣಗಳ ಮುಖಾಂತರ ಅರಿವು ಮೂಡಿಸುವ ಪೋಸ್ಟರ್‍ಗಳನ್ನು ಪ್ರಸಾರ ಮಾಡಲಾಗುತ್ತದೆ. ಹೆತ್ತವರಿಗೆ ಪೋಷಕರಿಗೆ ಮಾಹಿತಿ ನೀಡಿ ಕೌನ್ಸಲಿಂಗ್ ನಡೆಸಲಾಗುತ್ತದೆ ಎಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಉತ್ತರಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!